ಕೊಪ್ಪಳ 31: ಕೊಪ್ಪಳ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಿಂದ ತಲಾ ಒಂದು ಸಕರ್ಾರಿ ಪ್ರೌಢ ಶಾಲೆ ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್
ಸಭಾಂಗಣದಲ್ಲಿ ಬುಧವಾರದಂದು ನಡೆದ ಜಿ.ಪಂ.
ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು
ಮಾತನಾಡಿದರು.
ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಸುಧಾರಿಸಲು
ಜಿ.ಪಂ. ಸದಸ್ಯರುಗಳಿಂದ ಸಕರ್ಾರಿ
ಪ್ರೌಢ ಶಾಲೆ ದತ್ತು ತೆಗೆದುಕೊಳ್ಳಲು
ಉದ್ದೇಶಿಸಿದ್ದು, ಸದಸ್ಯರು ದತ್ತು ಪಡೆದ ಶಾಲೆಗೆ ವಾರಕ್ಕೆ
ಒಂದು ಬಾರಿ ಭೇಟಿ ನೀಡಿ
ಶೈಕ್ಷಣಿಕ ಪ್ರಗತಿ ಕುರಿತು ಪರಿಶೀಲಿಸಬೇಕು. ಶಾಲೆಯ
ವಿವಿಧ ಕಾರ್ಯಕ್ರಮಗಳಿಗೆ ಜಿ.ಪಂ. ಸದಸ್ಯರ
ಹಾಗೂ ಅಧ್ಯಕ್ಷರ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಶಾಲಾ ಕಂಪೌಡ್ ನಿಮರ್ಾಣ,
ಅರಣ್ಯೀಕರಣ, ಮೈದಾನ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು, ಶೌಚಾಲಯ
ನಿಮರ್ಾಣ ಮತ್ತು ತೋಟಗಾರಿಕೆಗೆ ಗ್ರಾಮ ಪಂಚಾಯತ್ ಹಾಗೂ ಲೈನ್ ಡಿಪಾರ್ಟಮೆಂಟ
ಕ್ರೀಯಾಯೋಜನೆಯೊಂದಿಗೆ ಹೆಚ್ಚುವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಕಂಪ್ಯೂಟರ್
ಒದಗಿಸಲು, ಸ್ಮಾರ್ಟ ಕ್ಲಾಸ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲು
ಜಿ.ಪಂ ನಿಂದ ವಿಶೇಷ
ಅನುದಾನವನ್ನು ನೀಡಲಾಗುವುದು. ಸಾರ್ವಜನಿಕ
ಶಿಕ್ಷಣ ಇಲಾಖೆ ಯಿಂದ ಶಿಕ್ಷಕರ ಅವಶ್ಯಕತೆ,
ಹೆಚ್ಚುವರಿ ಕೊಠಡಿ ಮತ್ತು ಸುಣ್ಣ ಬಣ್ಣ ವ್ಯವಸ್ಥೆಯನ್ನು ಕಲ್ಪಿಸಬೇಕು. ಶಾಲೆಯಲ್ಲಿ
ಫಲಿತಾಂಶ ಸುಧಾರಣೆಗೆ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳಿಗೆ ನಿತ್ಯ
ಪರೀಕ್ಷೆ ಅಂದರೆ ಶಾಲೆ ಪ್ರಾರಂಭವಾಗುವ ಮುನ್ನವೇ
ಒಂದು ಗಂಟೆಯ ಕಿರು ಪರಿಕ್ಷೆಗಳನ್ನು ನಡೆಸಬೇಕು. ಪ್ರತಿ
ಪಾಠಕ್ಕೂ ಪರೀಕ್ಷೆ ಸಾಮೂಹಿಕ ಪಠಣ. ವಿಶೇಷ
ತರಗತಿಗಳನ್ನು ನಡೆಸಬೇಕು. ರ್ಯಾಂಕ್
ವಿದ್ಯಾಥರ್ಿಗಳ ಉತ್ತರ ಪತ್ರಿಕೆಗಳ ಝರಾಕ್ಸ್ ಪ್ರತಿಗಳನ್ನು ವಿದ್ಯಾಥರ್ಿಗಳಿಗೆ ಹಂಚಬೇಕು. ಇದೇ
ಮಾದರಿಯಲ್ಲಿ ಉತ್ತರ ಬರೆಯಲು ವಿದ್ಯಾಥರ್ಿಗಳಿಗೆ ಪ್ರೇರೆಪಿಸಬೇಕು. ವಿದ್ಯಾಥರ್ಿಗಳಿಗೆ
ಪ್ರತಿ ವಿಷಯಗಳ ಮಾದರಿ ಉತ್ತರಗಳನ್ನು ನೀಡಬೇಕು. ಅಗತ್ಯ
ಪೂರಕ ಪುಸ್ತಕಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗ್ರಂಥಾಲಯದಲ್ಲಿ ಇರಿಸಬೇಕು. ಭಾನುವಾರವೂ
ಸಹ ತರಗತಿಗಳನ್ನು ನಡೆಸಬೇಕು. ಶಾಲೆಯಲ್ಲಿ
ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿ.ಪಂ. ಅನುದಾನವನ್ನು
ಬಳಕೆ ಮಾಡಿ. ಶಾಲೆಯಲ್ಲಿ
ವಿದ್ಯಾಥರ್ಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಕೆ ಮಾಡಬೇಕು. ಆಟದ
ಸಾಮಾಗ್ರಿಗಳನ್ನು ಖರೀದಿಸಬೇಕು. ಸ್ಥಳೀಯರ
ನೆರವಿನಿಂದ ಪ್ರಯೋಗಾಲಯಗಳನ್ನು ನಿಮರ್ಾಣ ಮಾಡಬೇಕು. ಗ್ರಂಥಾಲಯವನ್ನು
ಸಮೃದ್ಧಿಗೊಳಿಸಬೇಕು. ಈ
ಎಲ್ಲಾ ಕ್ರಮಗಳಿಗೆ ಜಿ.ಪಂ. ನೊಂದಿಗೆ
ಎಲ್ಲಾ ಸದಸ್ಯರು, ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ಸಹ
ಸಹಕರಿಸಬೇಕು ಎಂದು ಜಿ.ಪಂ.
ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ
ಲಕ್ಷ್ಮಮ್ಮ ಸಿದ್ದಪ್ಪ ನಿರಲೂಟಿ, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜಾ, ಉಪಕಾರ್ಯದಶರ್ಿ ಎನ್.ಕೆ ತೊರವಿ,
ಕೈಗಾರಿಕಾ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ ಸೇರಿದಂತೆ ಜಿ.ಪಂ. ಸದಸ್ಯರುಗಳು
ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.