ರಾಜ್ಯದಲ್ಲಿ ನೇರ ನುಡಿಗಳನ್ನಾಡುವ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ: ನಿರಂಜನಾನಂದಪುರಿ ಶ್ರೀ

ಲೋಕದರ್ಶನ ವರದಿ

ಬ್ಯಾಡಗಿ25: ಅಂಬರೀಶ್ ಕೇವಲ ಚಲನಚಿತ್ರದಲ್ಲಷ್ಟೇ ಎಲ್ಲ ರಂಗದಲ್ಲಿಯೂ ಅವರೊಬ್ಬ ಹಿರೋ ಆಗಿದ್ದವರು, ಇಂದು ಅವರ ಅಗಲಿಕೆಯಿಂದ ರಾಜ್ಯದಲ್ಲಿ ನೇರ ನುಡಿಗಳನ್ನಾಡುವ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕಾಗಿನೆಲೆ ಕನಕಗುರು ಪೀಠಾಧ್ಯಕ್ಷ ನಿರಂಜನಾನಂದಪುರಿ ಶ್ರೀಗಳು ಹೇಳಿದರು.

 ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ನಟರು ತಮ್ಮ ಕ್ಷೇತ್ರದಲ್ಲಷ್ಟೇ ಹೀರೋಗಳಾಗಿರುತ್ತಾರೆ, ಆದರೆ ಅಂಬರೀಷ್ ತಮ್ಮ ನಿಜ ಜೀವನದಲ್ಲಿಯೂ ಹಿರೋ ಆಗಿದ್ಧಾರೆ ಅವರ ಅಗಲಿಕೆಯಿಂದ ಚಿತ್ರರಂಗ ಬಡವಾಗಿದ್ದು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

      ಅಭಿವೃದ್ಧಿ ಹರಿಕಾರ ಜಾಫರ್ ಷರೀಫ್: ಸರಳ ಸಜ್ಜನಿಕೆ ರಾಜಕಾರಣಿ ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ಅವರ ಅಗಲಿಕೆ ತುಂಬಾ ನೋವನ್ನುಂಟು ಮಾಡಿದೆ, ಸಾವು ಮಾನವ ಸಹಜವಾಗಿದ್ದವಾಗಿದ್ದರೂ, ಒಬ್ಬರ ಸಾವಿನ ಬಳಿಕ ಆಗುವಂತಹ ಬದ ಲಾವಣೆಗಳ ಮೇಲೆ ಅವರ ವ್ಯಕ್ತಿತ್ವ ಅರ್ಥವಾಗಲಿದೆ, ರಾಜ್ಯದಲ್ಲಿದ್ದ ಮೀಟರ್ ಗೇಜ್ ಇದ್ದ ರೈಲ್ವೇ ಹಳಿಗಳನ್ನು ಬ್ರಾಡ್ಗೇಜ್ಗೆ ಪರಿವರ್ತನೆ ಮಾಡುವಲ್ಲಿ ತೋರಿದ ಆಸಕ್ತಿ ಮತ್ತು ಬದ್ಧತೆಗಳು ಅವರಿಗೆ ಕೆಲಸದ ಮೇಲಿದ್ದ ಆಸಕ್ತಿಯನ್ನು ತೋರಿಸುತ್ತದೆ ಎಂದರು.

     ಕನಕಗುರುಪೀಠದಲ್ಲಿ ಎಂದಿನಂತೆ ಕನಕಜಯಂತಿ: ಕನಕಗುರುಪೀಠದಲ್ಲಿ ಎಂದಿನಂತೆ ಕನಕ ಜಯಂತಿ ಕಾರ್ಯಕ್ರಮಗಳು ಸೋಮವಾರ ನಡೆಯಲಿವೆ ಎಂದು ನಿರಂಜನಾನಂದ ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಕನಕಜಯಂತಿ ಮುನ್ನಾದಿನವೇ ಅಂಬರೀಷ್ ಹಾಗೂ ಜಾಫರ್ ಶರೀಫ್ ಸಾವನ್ನಪ್ಪಿದ್ದು ರಾಜ್ಯ ಸಕರ್ಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ, ಆದರೆ ಕಾರ್ಯಕ್ರಮ ಪೂರ್ವ ನಿಯೋಜಿತವಾಗಿದ್ದರಿಂದ ಕನಕಗುರುಪೀಠದಲ್ಲಿಕನಕ ಜಯಂತಿ ಆಚರಣೆಯನ್ನು ಸರಳವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.