ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದಿಂದ ಅಥಣಿ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಿದೆ
ಅಥಣಿ, 07; ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಅಥಣಿಗೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಮಹಾವಿದ್ಯಾಲಯ ಮತ್ತು 100 ಹಗ್ ಹಾಸಿಗೆ ಸಾಮಥ್ರ್ಯ ದ ತಾಯಿ-ಮಕ್ಕಳ ಆಸ್ಪತ್ರೆ ಮಂಜೂರಾಗಿರುವುದು ಅಥಣಿ ಅಭಿವೃದ್ಧಿಗೆ ಹೊಸ ಮೈಲಿಗಲ್ಲಾಗಿದೆ. ಕಳೆದ ಎರಡು ವರ್ಷಗಳಿಂದ ಶಾಸಕ ಲಕ್ಷ್ಮಣ ಸವದಿ ಸಿ.ಎಮ್.ಸಿದ್ಧರಾನಯ್ಯನವರ ಮೇಲೆ ಒತ್ತಡ ತಂದ ಪರಿಣಾಮ ಅಥಣಿಗೆ ಕೃಷಿ ಮಹಾವಿದ್ಯಾಲಯ ಮಂಜೂರಾಗಿದೆ. ಅಥಣಿಯಲ್ಲಿ ಶಾಸಕ ಸವದಿಯವರ ಸತತ ಪ್ರಯತ್ನದ ಫಲವಾಗಿಯೇ ಈಗಾಗಲೇ ಶ್ರೀ ಭಾವುರಾವ್ ದೇಶಪಾಂಡೆ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾರಂಭವಾಗಿದ್ದು, ಸದ್ಯ ಕೃಷಿ ಮಹಾ ವಿದ್ಯಾಲಯ ಕೂಡ ಮಂಜೂರಾಗಿರುವುದು ತಾಲೂಕಿನ ಜನರಲ್ಲಿ ಸಂತಸ ತಂದಿದೆ.
ತಾಲೂಕಿನ ರೈತರ ಮಕ್ಕಳಿಗೆ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವ ಮೂಲಕ ಕೃಷಿ ಅಭಿವೃದ್ಧಿಗೊಳಿಸಬೇಕು ಎಂದು ನಾನು ಕನಸು ಕಂಡಿದ್ದೆ ಹೀಗಾಗಿ ನಾನು ಸಿ.ಎ.ಮ್.ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರೊಂದಿಗೆ ಬಜೆಟ್ ಪೂರ್ವದಲ್ಲಿ ಇತ್ತೀಚಿಗೆ ಚರ್ಚಿಸಿ ಕೃಷಿ ಮಹಾವಿದ್ಯಾಲಯದ ಮಂಜೂರಾತಿಯ ಕುರಿತು ಮನವಿ ಮಾಡಿದ್ದ ಪರಿಣಾಮ ಬಜೆಟನ್ ನಲ್ಲಿ ಘೋಷಣೆಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಲೋಕದರ್ಶನ ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.