ಲೋಕದರ್ಶನ ವರದಿ
ಮಹಾಲಿಂಗಪುರ 03:ಶ್ರೇಷ್ಠ ಮನುಷ್ಯನನ್ನು ನಿಮರ್ಿಸುವುದೇ ಶಿಕ್ಷಣದ ಗುರಿ. ಸಂಸ್ಕಾರ, ಸಂಸ್ಕೃತಿ, ಅಸ್ಮಿತೆ, ಅಭಿಮಾನದಿಂದ ಬಾಳಿ ನಾಡನ್ನು ಬೆಳಗಿಸುವ ಮಕ್ಕಳನ್ನು ನಿಮರ್ಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬನಹಟ್ಟಿಯ ಖ್ಯಾತ ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.
ಸ್ಥಳೀಯ ಶ್ರೀ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡಿದ್ದ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ 7 ನೇ ವರ್ಗದ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು ಯಾವುದೇ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಮಾತೃ ಭಾಷೆಯ ಪ್ರಭುತ್ವ ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಮೊದಲು ಕನ್ನಡವನ್ನು ಸರಿಯಾಗಿ ಕಲಿತು ಇತರೆ ಭಾಷೆಗಳನ್ನು ಕಲಿಯಿರಿ. ಮಕ್ಕಳಿಗೆ ಪ್ರೀತಿ, ವಾತ್ಸಲ್ಯ, ಧಾರೆಯೆರೆದು ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಮಕ್ಕಳ ಮೇಲೆ ನಿಗಾ ಇಟ್ಟು ಅವರನ್ನು ದುಶ್ಚಟಗಳಿಂದ ದೂರವಿರಿಸಿ ಸುಂದರ ಮೂತರ್ಿಯನ್ನಾಗಿ ಮಾಡಬೇಕಾಗಿದೆ. ಈ ನೆಲದ ಸಂಸ್ಕೃತಿಯ ಕಡೆ ಒಲವು, ಸಂಗೀತ, ಕಲೆಗಳ ಬಗ್ಗೆ ಆಸಕ್ತಿ ಮತ್ತು ಸಮಯಪ್ರಜ್ಞೆ ಮೂಡಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ಬನಶಂಕರಿ ಶಾಲೆಯ ಕಾರ್ಯ ಶ್ಲಾಘನೀಯ. 1991 ರಲ್ಲಿ ಅರವಿಂದ ತಿರುಕಪಡಿ ಕಟ್ಟಿದ ಕನಸನ್ನು ಈ ಸುಸಜ್ಜಿತ ಕಟ್ಟಡ ಮತ್ತು ಗುಣಮಟ್ಟದ ಶಿಕ್ಷಣದೊಂದಿಗೆ ಶೇಖರ್ ಅಂಗಡಿ ನನಸಾಗಿಸಿರುವುದು ಹೆಮ್ಮೆಯ ಕಾರ್ಯ ಎಂದು ಶ್ಲಾಘಿಸಿದರು. ಬೀಳ್ಕೊಡುಗೆ ಒಂದು ಮಧುರವಾದ ದುಃಖ. ಇಂದು ಬೀಳ್ಕೊಡುಗೆಯೊಂದಿಗೆ ತೆರಳುತ್ತಿರುವ ಮಕ್ಕಳ ಭವಿಷ್ಯ ಭವ್ಯವಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ತಂದೆ, ತಾಯಿ, ಗುರುವಿನ ಪಾತ್ರ ಬಹು ಮುಖ್ಯ. ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ ಏಕೆಂದರೆ ಶಾಲೆ ಕೇವಲ ಕಟ್ಟಡವಾಗಬಾರದು, ಗುಣಮಟ್ಟದ ಶಿಕ್ಷಣದ ಗೋಪುರವಾಗಬೇಕು. ಅಂತಹ ಶಿಕ್ಷಣ ಕಾಶಿಯನ್ನು ನಿಮರ್ಿಸಲು ತಾವು ಬದ್ಧ, ಇಂದಿನ ಸ್ಪಧರ್ಾತ್ಮಕ ಜಗತ್ತಿಗೆ ಪೂರಕ ಶಿಕ್ಷಣವೇ ನಮ್ಮ ಆದ್ಯತೆ. ಅದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ತೇರದಾಳ ಕ್ಷೇತ್ರದ ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಬಸವನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸಾಧನೆಗೈದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾನಿಧ್ಯ ವಹಿಸಿದ್ದ ಚಿಮ್ಮಡದ ಜನಾರ್ಧನ ಮಹಾರಾಜರು ಮತ್ತು ಡಾ. ವನಹಳ್ಳಿ ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ಸಂಸ್ಥಾನ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಪುರಸಭೆ ಸದಸ್ಯೆ ಸ್ನೇಹಲ್ ಅಂಗಡಿ, ಮುಖ್ಯಾಧಿಕಾರಿ ಎ.ಬಿ.ಕಲಾಲ, ಬಸವೇಶ್ವರ ಬ್ಯಾಂಕ್ ಸದಸ್ಯೆ ಲಕ್ಷ್ಮೀ ಅಂಗಡಿ, ಮಹಾಲಕ್ಷ್ಮೀ ಸೊಸೈಟಿ ಅಧ್ಯಕ್ಷ ಪಂಡಿತ ಖೋತ, ಪತ್ರಕರ್ತ ಎಸ್.ಎಸ್.ಈಶ್ವರಪ್ಪಗೋಳ, ಸಿಆರ್ಪಿ ಎಸ್.ಎನ್. ಬ್ಯಾಳಿ, ನಿವೃತ್ತ ಶಿಕ್ಷಕ ಎನ್.ಬಿ.ಢವಳೇಶ್ವರ, ಸಂಸ್ಥೆಯ ಕಾರ್ಯದಶರ್ಿ ಶ್ರೀಶೈಲ ಹಳ್ಳಿ ಇದ್ದರು. ವೇದಿಕೆಯ ಮೇಲಿದ್ದ ಸರ್ವ ಗಣ್ಯರನ್ನೂ ಸನ್ಮಾನಿಸಲಾಯಿತು.
ಮುಖ್ಯಗುರುಮಾತೆ ಗೀತಾ ಪಾಟೀಲ ಸ್ವಾಗತಿಸಿ ವರದಿ ವಾಚನ ಮಾಡಿದರು. ಶಿಕ್ಷಕಿ ಎ.ಬಿ ಚಿಚಖಂಡಿ ಮಾಲಾರ್ಪಣೆ, ಶಿಕ್ಷಕಿ ಪಿ.ಎನ್.ಬಾಣಕಾರ ಬಹುಮಾನ ವಿತರಣೆ ಮಾಡಿದರು. ಕು. ಸೌಜನ್ಯ ಅಸ್ಕಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಶಿಕ್ಷಕ ಎಸ್.ಎಚ್.ಸಂಗೋತಿ ನಿರೂಪಿಸಿ ವಂದಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.