ಸಶಕ್ತಿ, ಸಮೃದ್ಧಿ, ಸ್ವಾವಲಂಬನೆ ಕೂಡಿದ ಬಜೆಟ್ : ಬಾಬರ ಬೊವಾಜಿ
ಶಿಗ್ಗಾವಿ 8: ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮುನ್ನೋಟದೊಂದಿಗೆ ಸಿದ್ಧಪಡಿಸಿರುವ ಈ ಬಜೆಟಮುಂದಿನ ಒಂದು ವರ್ಷಗಳ ಕಾಲ ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲಿದೆ ಎನ್ನುವ ಪೂರ್ಣ ವಿಶ್ವಾಸದಿಂದ ಕೂಡಿದ ಬಜೆಟ್ ಇದಾಗಿದೆ, ಸವಣೂರ ಸರ್ಕಾರಿ ಆಸ್ಪತ್ರೆಯ ನಿಮಾರ್ಣಕ್ಕೆ 45 ಕೋಟಿ ರೂಪಾಯಿ ಅನುದಾನ ನೀಡಿ ಜಾರಿಗೆ ತರಲು ಮುಂದಾದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಅಲ್ಲದೇವೀಷೆಶವಾಗಿ ಶಿಗ್ಗಾಂವ ಸವಣೂರ ಕ್ಷೇತ್ರದ ಜನರ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಒಯ್ದು ಸರ್ಕಾರದ ಗಮನ ಸೆಳೆದು ಅನುದಾನ ತರುವಲ್ಲಿ ಯಶಸ್ವಿಯಾದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣರವರಿಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಾಬರ ಇ ಬೊವಾಜಿ ತಿಳಿಸಿದ್ದಾರೆ.