ಬಾಗಲಕೋಟೆ 22 : ಜಿಲ್ಲಾ ಪಂಚಾಯತಿಯ 2018-19ನೇ ಸಾಲಿನ ಅಭಿವೃದ್ದಿ ಅನುದಾನದಡಿ 4 ಕೋಟಿ ರೂ.ಗಳ ಕ್ರೀಯಾ ಯೋಜನೆಗೆ ಗುರುವಾರ ಜಿ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ 8ನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿತು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ಇಲಾಖೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಲೋಕಾಪೂರ ಜಿ.ಪಂ ಸದಸ್ಯರಾದ ಮಹಾಂತೇಶ ಉದಪುಡಿ ಲೋಕಾಪೂರದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಒತ್ತುವರಿಯಾಗುತ್ತಿದ್ದು, ಅದಕ್ಕೆ ಸ್ಥಳೀಯ ರಾಜಕಾರಣಿಗಳ ಪಂಚಾಯತ ಅಧಿಕಾರಿಗಳು ಶಾಮಿಲಾಗಿದ್ದು, ಈ ಪ್ರಕರಣ ಕಳೆದ 2 ವರ್ಷದಿಂದ ಗಮನಕ್ಕೆ ತಂದು ಯಾವುದೇ ಪ್ರಯೋಜನವಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ತಪ್ಪಿತಸ್ತರಿಗೆ ಶಿಕ್ಷೆಗೆ ಗುರಿಪಡಿಸಿ ಸರಕಾರಿ ಆಸ್ಪತ್ರೆಗೆ ಮೀಸಲಿಡಲಾದ ಜಾಗಕ್ಕೆ ಮುಳ್ಳು ಬೇಲಿ ಹಚ್ಚಬೇಕೆಂದು ಸಭೆಯಲ್ಲಿ ತಿಳಿಸಿದಾಗ ಈ ಕುರಿತು ಜಿಲ್ಲಾ ಪಂಚಾಯತ ಅಧ್ಯಕ್ಷರು ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಜಮಖಂಡಿ ತಾಲೂಕಿನ ಹುನ್ನೂರ ಸರಕಾರಿ ಶಾಲೆ ಸುವ್ಯವಸ್ಥೆಯಿಂದ ನಡೆದಿದ್ದರೂ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ಕೆಲವೇ ಮೀಟರ ಅಂತರದಲ್ಲಿರುವ ಖಾಸಗಿ ಶಾಲೆಗೆ ಅನುಮತಿ ನೀಡಿದ್ದಾರೆ. ಇದರಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ದೂರು ನೀಡಿದ್ದರೂ ಕೂಡಾ ಸಮರ್ಪಕವಾಗಿ ಉತ್ತರ ದೊರೆತಿಲ್ಲ. ಅಲ್ಲದೇ ಶಿಕ್ಷಣ ಇಲಾಖೆಯ ಕೆಲಗಿನ ಸಿಬ್ಬಂದಿಗಳು ಖಾಸಗಿ ಶಾಲೆ ಅನುಮತಿಗಾಗಿ ಹಣ ಪಡೆಯುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಸಾರ್ವಜನಿಕರು ಆ ಸಿಬ್ಬಂದಿಗಳ ಹೆಸರನ್ನು ಕೂಡಾ ಬಹಿರಂಗಗೊಳಿಸಿದ್ದು, ಕೂಡಲೇ ಆ ಸಿಬ್ಬಂದಿಗಳ ಮೇಲೆ ಕ್ರಮಕ್ಕಾಗಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆಲವು ಗ್ರಾಪಂಗಳಲ್ಲಿ ಮಹಾತ್ಮಾಗಾಂಧಿ ಹಾಗೂ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಕಾಮರ್ಿಕರನ್ನು ಬಳಸಿಕೊಳ್ಳದೇ ಯಂತ್ರದ ಮೂಲಕ ಕಾಮಗಾರಿ ಕೈಗೊಂಡು ಮೃತರ ಹೆಸರಿನಲ್ಲಿ ಹಣ ಪಡೆಯಲಾಗಿದೆ. ಇಂತಹ ಪಂಚಾಯತಿಗಳ ಕಾರ್ಯಗಳನ್ನು ತೀಕ್ಷಣವಾಗಿ ಪರಿಗಣಿಸಿ ತಪ್ಪಿತಸ್ತರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಿ.ಪಂ ಸಿಇಓ ಅವರು ಜಿಲ್ಲೆಯಲ್ಲಿ 194 ಗ್ರಾಮ ಪಂಚಾಯತಿಗಳು ಬರುತ್ತಿದ್ದು, ಪ್ರತಿಯೊಬ್ಬ ಸದಸ್ಯರು, ಅಧ್ಯಕ್ಷರು ಆ ಭಾಗದ ತಾ.ಪಂ ಹಾಗೂ ಜಿ.ಪಂ ಸದಸ್ಯರು ಇದರ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತಿರುವದರಿಂದ ಎಲ್ಲವನ್ನು ಪರಿಗಣಿಸಲಾಗುತ್ತಿದ್ದು, ಅತೀ ಹೆಚ್ಚಿನ ಕರ್ತವ್ಯದಲ್ಲಿ ಲೋಪ ಕಂಡುಬಂದ ಪಿಡಿಓಗಳ ಮೇಲೆ ನಿಧರ್ಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದೆಂದರು.
ಗ್ರಾ.ಪಂ ಪಿಡಿಓ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಸ್ಥಾನಿಕವಾಗಿ ಇರಬೇಕೆಂಬುವದನ್ನು ಕಡ್ಡಾಯವಾಗಿ ಸೂಚಿಸಲಾಗುವುದೆಂದರು. ಪ್ರಾಮಾಣಿಕ ಹಾಗೂ ದಕ್ಷತೆಯಿಂದ ನನ್ನ ಕೆಲವನ್ನು ನಿಭಾಯಿಸುತ್ತಿರುವುದಾಗಿ ತಿಳಿಸಿದ ಮಾನಕರ ಅವರು ಎರಡರಿಂದ ಮೂರು ಪಂಚಾಯತಿಗಳಿಗೆ ಇದ್ದ ಪಿಡಿಓಗಳ ಪ್ರಭಾರವನ್ನು ಒಂದಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಲಾಯಿತು. ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಯಾಗಿಲ್ಲದ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳು 2016-17 ಹಾಗೂ 2017-18 ನೇ ಸಾಲಿನ ಬಾಕಿ ಉಳಿದಿದ್ದು, ಬೇಗನೆ ಪೂರ್ಣಗೊಳಿಸಲು ಸೂಚಿಸಿದರು. ಜಿಲ್ಲೆಯ ವಿವಿಧ ಕಾಲುವೆಗಳಿಗೆ ನೀರು ಹರಿಸುವಂತೆ ಕೃಷ್ಣಾ ಭಾಗ್ಯ ಜಲ ನಿಗದ ಮುಖ್ಯ ಇಂಜಿನೀಯರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸರ್ವ ಸದಸ್ಯರು, ಜಿ.ಪಂ ಉಪಕಾರ್ಯದಶರ್ಿ ಮರೇಶ ನಾಯಕ, ಯೋಜನಾ ನಿದರ್ೇಶಕ ಎಸ್.ಎಸ್.ಹಿರೇಮಠ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
**