ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ಮಜದೂರ ಯೂನಿಯನ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ
ಸಮೀರವಾಡಿ 26 : ಜಿಲ್ಲೆ ರಬಕವಿ -ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿ ಭಾರತ ಜಾತ್ಯಾತೀತ ರಾಷ್ಟ್ರ. ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ ಹಕ್ಕುಗಳು, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸಬಹುದೆಂದು ಮಜದೂರ್ ಯೂನಿಯನ್ ಕಾರ್ಯಾಧ್ಯಕ್ಷರಾದ ಬಸು ಮೇಲಪ್ಪಗೋಳ ಹೇಳಿದರು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ಮಜದೂರ ಯೂನಿಯನ್ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವತಂತ್ರ ಹಕ್ಕುಗಳು ಎಲ್ಲರಿಗೂ ಇರುವುದು ಭಾರತದಲ್ಲಿ ಮಾತ್ರ 1950 ರ ಜನವರಿ 26 ರಂದು ಜಾರಿಗೆ ಬಂದ ಸಂವಿಧಾನ. ಆದ್ದರಿಂದ ಪ್ರತಿ ವರ್ಷವು ಸಹ ಈ ದಿನವನ್ನು ಭಾರತೀಯ ಪ್ರಜೆಗಳು ಎಲ್ಲೇ ಇದ್ದರೂ ಸಹ ನೆನೆಯಬೇಕಾಗಿದೆ. ಹಾಗೆಯೇ ಆಚರಣೆ ಮಾಡಬೇಕಿದೆ. ಕಾನೂನಾತ್ಮಕವಾಗಿ ಈ ದಿನವನ್ನು ರಾಷ್ಟ್ರದೆಲ್ಲೆಡೆ ರಕ್ಷಣಾ ಪಡೆಗಳು ಪರೇಡ್ ಮಾಡುವ ಮೂಲಕ, ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಸೋಮಶೇಖರ್ ಪೇಟಿಮನಿ ಮಾತನಾಡಿ 76ನೇ ಗಣರಾಜ್ಯೋತ್ಸವ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಯಿತು. 1950 ರ ಜನವರಿ 26 ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ.ಭಾರತ ಗಣರಾಜ್ಯ ರಾಷ್ಟ್ರವಾಗಲೂ, ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ನೆನೆಯುವ ದಿನ. ಅವರಿಗೆ ಸಹೃದಯದಿಂದ ನಮಿಸುವ ದಿನವೂ ಹೌದು.ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿ ಪ್ರಜೆಯೂ ಶಿಕ್ಷಣದ ಹಕ್ಕು, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕು, ಧಾರ್ಮಿಕ ಹಕ್ಕು, ಇತರೆ ಹಲವು ಹಕ್ಕುಗಳು ಸಿಕ್ಕಿರುವುದು. ಅದಕ್ಕೆ ಎಲ್ಲರೂ ಗೌರವಿಸಿ ಅದರ ನಿಯಮಗಳನ್ನು ಪಾಲಿಸಬೇಕು. ನಾವು ಇಂದು ಜಾಗತಿಕವಾಗಿ ಏನೆಲ್ಲಾ ಬದಲಾವಣೆಗಳನ್ನು ನೋಡಿದ್ದೇವೆ ಅಲ್ಲವೇ. ಮುಂದೆ ಇನ್ನೂ ಹಲವು ಬದಲಾವಣೆಗಳನ್ನು, ಅಭಿವೃದ್ಧಿಯ ಕ್ಷೇತ್ರದಲ್ಲಿ ನೋಡುತ್ತೇವೆ. ಅದು ತಾಂತ್ರಿಕ ಜಗತ್ತು ಆಗಿರಬಹುದು, ಶಿಕ್ಷಣ ನೀಡುವ ಮಾದರಿ ಆಗಿರಬಹುದು, ಜೀವಿಸುವ ವಿಧಾನವು ಆಗಿರಬೇಕು. ಆದರೆ ಭಾರತೀಯರಾದ ನಾವು ಎಷ್ಟೇ ಬದಲಾವಣೆ ಕಂಡರೂ ಸಹ ನಮ್ಮ ಅಸ್ತಿತ್ವಕ್ಕೆ ಅತ್ಯುತ್ತಮ ಕಾನೂನುಗಳನ್ನು ರೂಪಿಸಿರುವ ಸಂವಿಧಾನ ಜಾರಿಗೆ ಬಂದ ದಿನವನ್ನು ಮಾತ್ರ ಮರೆಯಬಾರದು.ಸ್ವಾತಂತ್ರ್ಯ, ಸಮಾನತೆ, ಏಕತೆ, ಭ್ರಾತೃತ್ವ, ಸಹೋದರತ್ವ, ನಮ್ಮ ಸಂವಿಧಾನದಲ್ಲಿ ಇರುವ ಪ್ರಮುಖ ಮೌಲ್ಯಗಳಾಗಿವೆ. ಇಂತಹ ಮೌಲ್ಯಗಳನ್ನು ನೀಡಿದ ಸಂವಿಧಾನ ಜಾರಿಗೆ ಬಂದ ದಿನದ ಈ ರಾಷ್ಟ್ರೀಯ ಹಬ್ಬವೆಂದು ಹೇಳಿದರು. ಈ ಸಮಯದಲ್ಲಿ ಇಂಜಿನಿಯರ್ ಜಿಎಂ ವಿ ಕೆ ಕಿಲಾರಿ.ಡಿಜಿಎಂ ಅಮಿತ ತ್ರಿಪಾಟಿ.ಸೂರ್ಯಬಾಬು.ಎಜಿಎಂಪಿಎ ಮತ್ತು ಐ ಆರ್ ಎಂ ರಾಮಚಂದ್ರ.ಡೆಫುಟಿ ಮ್ಯಾನೇಜರ್ ಆನಂದ ಕೊಟಬಾಗಿ.ಮಜದೂರ ಯೂನಿಯನ್ ಉಪಾಧ್ಯಕ್ಷ ಕೆ ಜಿ ವಾಜೇಂತ್ರಿ. ಪ್ರಧಾನ ಕಾರ್ಯದರ್ಶಿ ಎನ್ ಪಿ ಮಾಳಿ. ಎಸ್ ಬಿ ಬಿ ಪಾಟೀಲ. ಸಿ ಎಂ ಅಥಣಿ. ವಿ ಎಸ್ ಕಮತೆ. ರವಿ ಕುರಬರ. ಅಲೀಮ. ಅರಬ. ಬಾಹುಬಲಿ ಆಲಗೊರ. ಮಹಾಲಿಂಗ ಚಿಂಚಲಿ. ಶಿವು ಕೆಂಚಿಗಾರ. ಮನೋಹರ್ ಬಡಿವಾಳ. ಪಕೀರ್ಪ ವಗ್ಗರ ಎಸ್ ಎಂ ಹಿರೇಮಠ.ಮುರಿಗೆಪ್ಪ ಮಾಲಗಾರ.ಈಶ್ವರ ಕುಳ್ಳೊಳ್ಳಿ. ಜೆ ಎಸ್ ರೆಂಟಿ. ಎಲ್ಲಾ ಕಾರ್ಮಿಕ ಬಂಧುಗಳು ಮತ್ತು ಶಾಲಾ ಮುದ್ದು ವಿದ್ಯಾರ್ಥಿಗಳು ಹಾಗೂ ಸೇರಿದಂತೆ ಸುಗಮವಾಗಿ ಕಾರ್ಯಕ್ರಮ ನೆರವೇರಿತು