ಟ್ಯಾಂಕಗಳಿಗೆ ಕುಡಿಯುವ ನೀರು ಪೂರೈಸಲು ಅಗ್ರಹ
ನೇಸರಗಿ 27: ಇಲ್ಲಿನ ಗ್ರಾಮ ಪಂಚಾಯತ ವತಿಯಿಂದ ಕುಡಿಯುವ ನೀರಿನ ಸಲುವಾಗಿ ವೀರಭದ್ರೇಶ್ವರ ದೇವಸ್ಥಾನದ ಮುಂದೆ, ಮಾರುತಿ ದೇವಸ್ಥಾನದ ಹಿಂದೆ ಮತ್ತು ಕರ್ನಾಟಕ ಚೌಕ ಬಾಜು ಮೂರು ಕುಡಿಯುವ ನೀರಿನ ಟ್ಯಾಂಕಗಳನ್ನು ನಿರ್ಮಾಣ ಮಾಡಿ ಕೆಲವು ವರ್ಷಗಳು ಕಳೆದರೂ ಆ ಟ್ಯಾಂಕಗಳಿಗೆ ಕುಡಿಯುವ ನೀರನ್ನು ತುಂಬಿಸುವ ಕಾರ್ಯ ಪಂಚಾಯತ ಅಧಿಕಾರಿಗಳು ಮಾಡುತ್ತಿಲ್ಲ. ಜೆ ಜೆ ಎಮ್ ಪೈಪ್ ಹಾಕುವಾಗ ಒಂದು ಇಂಚಿ ಪೈಪ್ ಹಾಕಿ ಮೂರು ಕಡೆಗಳಿಗೆ ನೀರು ಸಂಪರ್ಕ ಕಲ್ಪಿಸಲು ಗ್ರಾಮ ಪಂಚಾಯತ ಸದಸ್ಯನಾದ ನಾನು ಎಷ್ಟು ಸಲ ವಿನಂತಿಸಿದರು ಕೆಲಸ ಮಾತ್ರ ಆಗಲಿಲ್ಲ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸುಮ್ಮನೆ ಟ್ಯಾಂಕ ನಿರ್ಮಾಣ ಮಾಡಿ ಕೈಬಿಡಲಾಗಿದ್ದು ಇನ್ನೂ ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು ಈ ಮೂರು ಕುಡಿಯುವ ನೀರಿನ ಟ್ಯಾಂಕರ ಇರುವ ಸ್ಥಳಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಂಕಲ್ಪ ದೊರಕಿಸಿಕೊಡಬೇಕೆಂದು 2 ನೇ ವಾರ್ಡಿನ ಗ್ರಾಮ ಪಂಚಾಯತ ಸದಸ್ಯ ಮಲ್ಲಿಕಾರ್ಜುನ ಸೋಮಣ್ಣವರ ಹಾಗೂ ಸ್ಥಳೀಯರು ಅಗ್ರಹಿಸಿದ್ದಾರೆ.