ದೇಶದ ಪ್ರತಿಯೊಬ್ಬರು ತಮ್ಮ ಮತ ಸ್ವಯಂ ವಿವೇಚನೆಯಿಂದ ಚಲಾಯಿಸಬೇಕು: ಗಾಯಕವಾಡ

Everyone in the country should cast their vote with discretion: Gaikwad

ದೇಶದ ಪ್ರತಿಯೊಬ್ಬರು ತಮ್ಮ ಮತ ಸ್ವಯಂ ವಿವೇಚನೆಯಿಂದ ಚಲಾಯಿಸಬೇಕು: ಗಾಯಕವಾಡ 

ಸಿಂದಗಿ, 27:  ಭಾರತದ ಮತದಾರರು ತಮ್ಮ ಶಕ್ತಿ ಏನು ಎಂಬ ಅರಿವು ಬಹುತೇಕ ಮತದಾರರಿಗೆ ಇಲ್ಲದಿರುವುದೇ ಇಂದಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರಾದ ಶ್ರೀ ಆರ್ ಎಸ್ ಗಾಯಕವಾಡ ಹೇಳಿದರು   

     ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ  ಮಾತನಾಡಿ, ಪ್ರತಿಯೊಂದು ಪಕ್ಷಗಳು ಚುನಾವಣೆಗಳಲ್ಲಿ ಅಬ್ಬರದ ಪ್ರಚಾರ ಮಾಡುತ್ತವೆ ಮತದಾರರಿಗೆ ಇಂದು ಒಳ್ಳೆಯ ಅಭ್ಯರ್ಥಿ ಯಾರು ಎನ್ನುವುದು ಸಮಸ್ಯೆ ಆಗಿದ್ದು ಆಗ ಉತ್ತಮ ಸಾಮಾಜಿಕ ಕಳಕಳಿ ಹೊಂದಿದ ಸಮರ್ಥ ವ್ಯಕ್ತಿಗೆ ಮತ ಚಲಾಯಿಸಿದರೆ ಆಗ ದೇಶ ಅಭಿವೃದ್ಧಿ ಹೊಂದುತ್ತದೆ ಜನತಂತ್ರದಲ್ಲಿ ಮತದಾರರ ಯೋಗ್ಯತೆಗೆ ತಕ್ಕಂತೆ ಸರಕಾರಗಳು ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಅವರು ಭಾರತದ ಚುನಾವಣಾ ಆಯೋಗ ಹಲವಾರು ಮತದಾರರಿಗೆ ಜಾಗೃತಿ ಚುನಾವಣಾ ಜಾಥಾ ಹಮ್ಮಿಕೊಳ್ಳುತ್ತಿದ್ದು ಈ ದೇಶದ ಪ್ರತಿಯೊಬ್ಬರು ತಮ್ಮ ಒಂದು ಮತ ಸ್ವಯಂ ವಿವೇಚನೆಯಿಂದ ಚಲಾಯಿಸಬೇಕೆಂದು ಹೇಳಿದರು. 

   ಡಾ. ಮಿರಾಜ್ ಪಾಶ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ಅದನ್ನು ದುರುಪಯೋಗಪಡಿಸಿಕೊಳ್ಳದೆ ಪ್ರತಿಯೊಬ್ಬ ಮತದಾರ ದೇಶದ ಶ್ರೇಯೋಭಿವೃದ್ಧಿಗಾಗಿ ಉತ್ತಮ ಪ್ರತಿನಿಧಿಗಳಿಗೆ ತಮ್ಮ ಅಮೂಲ್ಯ ಮತ ನೀಡಬೇಕು ನಾವು ರೂಪಿಸುವ ಸುಂದರ ಸಮಾಜ ರಾಷ್ಟ್ರ ನಮ್ಮ ಕೈಯಲ್ಲಿ ಇದೆ  ಪ್ರತಿ ಐದು ವರ್ಷಕೊಮ್ಮೆ ಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಬಾಗವಹಿಸಿ ಮತದಾನ ಚಲಾಯಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.