ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿಯ ಧ್ವಜ ಸ್ತಂಭ ಸ್ಥಳಾಂತರಕ್ಕೆ ಮನವಿ

Appeal for relocation of flag pole at Puneeth Rajkumar Stadium

ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿಯ ಧ್ವಜ ಸ್ತಂಭ ಸ್ಥಳಾಂತರಕ್ಕೆ ಮನವಿ 

ಹೊಸಪೇಟೆ 27: ನಗರ ಮಧ್ಯಭಾಗದಲ್ಲಿರುವ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಐದು ಅಡಿ ಎತ್ತರದ ಬೃಹತ್ ಗಾತ್ರದ ಮತ್ತು ಎತ್ತರದ ಧ್ವಜಸ್ತಂಭವನ್ನು ಅಳವಡಿಸಿರುವುದು ಇದೆ. ಈ ಧ್ವಜ ಸ್ತಂಭವು ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹೊಸಪೇಟೆಯ ಹಲವಾರು ಪ್ರಗತಿಪರ ಮತ್ತು ಜನಪರ ಸಂಘಟನೆಗಳು ಧ್ವಜ ಸ್ತಂಬವನ್ನು ಕ್ರೀಡಾಂಗಣ ಮಧ್ಯದಲ್ಲಿ ಅಳವಡಿಸಲು ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಮತ್ತು ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು ಅಷ್ಟೆಲ್ಲ ವಿರೋಧ ವ್ಯಕ್ತಪಡಿಸಿದ್ದರು ಸಹ ಯಾವ ಹೋರಾಟಗಾರರಿಗೆ ಕಿಮ್ಮತ್ತನ್ನೆ ಕೊಡದೆ ಅಂದಿನ ಶಾಸಕ ಸಚಿವರು ಈ ಬೃಹತ್ ಗಾತ್ರದ ಧ್ವಜಸ್ತಮವನ್ನು ನಿರ್ಮಿಸಿದ್ದರು. 

ಈ ಧ್ವಜ ಸ್ತಂಭವು ಕ್ರೀಡಾಂಗಣ ಮಧ್ಯದಲ್ಲಿ ಇರುವುದರಿಂದ ಈ ಕ್ರೀಡಾಂಗಣವು ಕ್ರೀಡಾರ್ಥಿಗಳಿಗೆ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬೃಹತ್ ಗಾತ್ರದ ಧ್ವಜಸ್ತಮವನ್ನು ತೆರವುಗೊಳಿಸಿ ಕ್ರೀಡಾಂಗಣದ ಮುಂಭಾಗದಲ್ಲಿರುವ ಇಂದಿರಾ ಗಾಂಧಿ ಕಟ್ಟೆಯ ಬಳಿ ನಿರ್ಮಿಸುವುದು ಉತ್ತಮ ಅಲ್ಲಿ ನಿರ್ಮಿಸಿದರೆ ಯಾವ ಕ್ರೀಡಾರ್ತಿಗಳಿಗೂ ತೊಂದರೆ ಆಗುವುದಿಲ್ಲ ಎಂದು ನಮ್ಮ ಸಂವಿಧಾನ ಸಂರಕ್ಷಣಾ ಸಮಿತಿಯು ಭಾವಿಸುತ್ತದೆ ಎಂದರು. 


ಅದೇ ರೀತಿ ಕ್ರೀಡಾಂಗಣದ ತುದಿಯಲ್ಲಿರುವ ಇಂದಿರಾ ಗಾಂಧಿ ಕಟ್ಟೆಯನ್ನು ಸಹ ಅಭಿವೃದ್ಧಿಪಡಿಸಬೇಕೆಂದು ಕೇಳುತ್ತಾ ಈ ಇಂದಿರಾ ಗಾಂಧಿ ಕಟ್ಟೆಯ ಮೇಲೆ ದೇಶದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1971ರಲ್ಲಿ ಭಾಷಣ ಮಾಡಿದ್ದರು ಅದಾದ ನಂತರ ಎಲ್‌.ಕೆ.ಅಡ್ವಾಣಿ ಮುರಳಿ ಮನೋಹರ್ ಜೋಶಿ ಐ.ಕೆ.ಗುಜರಾಲ್ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಇನ್ನೂ ಹಲವಾರು ನಾಯಕರುಗಳು ಈ ಕಟ್ಟೆಯ ಮೇಲೆ ತಮ್ಮ ಭಾಷಣವನ್ನು ಮಾಡಿದ ಉದಾಹರಣೆಗಳಿವೆ, ಹಾಗಾಗಿ ಈ ಐತಿಹಾಸಿಕ ಕಟ್ಟೆಯನ್ನು ಸಂರಕ್ಷಿಸಬೇಕೆಂದರು ಮತ್ತು ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಅಧಂರ್ಬರ್ಧ ಅಭಿವೃದ್ಧಿ ಆಗಿದೆ. ಸಾಧ್ಯವಾದಷ್ಟು ಬೇಗನೆ ಈ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡಿ ಮೂಲ ನಕ್ಷೆಯಂತೆ ಅಭಿವೃದ್ಧಿಪಡಿಸಬೇಕು ಮತ್ತು ಈಗಾಗಲೇ ಇದಕ್ಕೂ ಮುಂಚೆ ಎಲಿಪ್ಯಾಡ್ ಇದ್ದುದ್ದು ಎಲ್ಲರಿಗೂ ಗೊತ್ತಿದ್ದ ವಿಚಾರ ಆದರೆ ಈ ಧ್ವಜಸ್ತಂಬ ನಿರ್ಮಿಸಿದ ನಂತರ ಎಲಿಪ್ಯಾಡ್ ಕಣ್ಮಾರೆಯಾಗಿದೆ.  

ಈ ಸಂದರ್ಭದಲ್ಲಿ ಸಂಚಾಲಕರಾದ ಎಂ.ಜಂಬಯ್ಯನಾಯಕ್, ಸೋಮಶೇಖರ್ ಬಣ್ಣದಮನೆ, ತಾಯಪ್ಪನಾಯಕ್, ಸಣ್ಣಮಾರೆಪ್ಪ, ಸೂರ್ಯನಾರಾಯಣ, ವಿನಾಯಕ ಶೆಟ್ಟರ್, ರಾಮಚಂದ್ರ ಬಾಬು, ಸ್ಲಂ ವೆಂಕಟೇಶ್, ಎಚ್‌.ಎಂ.ಧನರಾಜ್, ಇಂತಿಯಾಜ್ ಇನ್ನಿತರೆ ಮುಖಂಡರು ಭಾಗವಹಿಸಿದ್ದರು.