ಲಿಂಗಾಯತ ಸಮಾಜದ ಉಪಾಧ್ಯಕ್ಷ ಅಣ್ಣಾಸಾಹೇಬ ಪರ್ವತರಾವ್ ವಿಧಿವಶ

Lingayat Samaj Vice President Annasaheb Parvatarao passed away

ಸಂಕೇಶ್ವರ : ಪಟ್ಟದಣ ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷರಾಗಿದ್ದ ಅಣ್ಣಾಸಾಹೇಬ ಬಾಬುರಾವ್ ಪರ್ವತರಾವ್ ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದರು.

    ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅಣ್ಣಾಸಾಹೇಬ ಪರ್ವರಾವ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ಅವರು ನಿಧನ ಹೊಂದಿದ್ದಾರೆ. ಮೃತರು ಶ್ರೀ ದುರದುಂಡೀಶ್ವರ ಅರ್ಬನ್ ಬ್ಯಾಂಕಿನ ಮಾಜಿ ಚೇರಮನ್ ರಾಗಿ, ಪುರಸಭೆ ಸದಸ್ಯ ರಾಗಿ ಕೆಲಸ ಮಾಡಿದ್ದರು.

    ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ 5 ಗಂಟೆಗೆ ಚಿಕಾಲಗುಡ್ಡದ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ತಮ್ಮ ಹಿಂದೆ ಪತ್ನಿ, ಮೂವರು ಪುತ್ರರರು, ಸೋಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.