ವಾಣಿಜ್ಯ ನಗರದಲ್ಲಿ ಮಾರ್ಚ್ 14 ರಂದು 65 ನೇ ವರ್ಷದ ಜೀವಂತ ರತಿ - ಕಾಮ ಪ್ರದರ್ಶನ
ರಾಣೇಬೆನ್ನೂರು 13 :ವಾಣಿಜ್ಯ ನಗರದ ದೊಡ್ಡಪೇಟೆ, ಒಂದಿಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುವ ಬಹುದೊಡ್ಡ ನಗರ. ಇಲ್ಲಿನ ಇಂದಿನ ಯುವಕರ ಬಳಗವು, ಕಳೆದ 60 ವರ್ಷಗಳಿಂದ ತಮ್ಮ ಪೂರ್ವಜರು ಮತ್ತು ಹಿರಿಯರು ಹಾಕಿ ಕೊಟ್ಟಿರುವ ಜೀವಂತ ರತಿ ಕಾಮ ಪ್ರದರ್ಶನದ ರೂಪಕವು, ಪ್ರತಿ ವರ್ಷ ಹೋಳಿ ಹುಣ್ಣಿಮೆಯ ನಿಮಿತ್ತವಾಗಿ ಆಯೋಜಿಸುತ್ತಾ ಬರುತ್ತಿರುವುದು ಯುವ ಸಮುದಾಯದ ಕ್ರಿಯಾಶೀಲತೆಗೆ ಇಂದಿಗೂ ಜೀವಂತ ಸಾಕ್ಷಿಯಾಗಿದೆ. ರತಿ-ಕಾಮರ ರೂಪಕದಲ್ಲಿ, 46 ವರ್ಷದ ಗದಿಗೆಪ್ಪ ರೊಡ್ಡನವರ್, ಮತ್ತು 36 ವರ್ಷದ ಕುಮಾರ ಹಡಪದ ಇವರುಗಳು ತಮ್ಮ ಪ್ರಬುದ್ಧತೆಯ ಪ್ರತಿಭೆ ಮೆರೆದು ರಾಜ್ಯದ ಅಂತರ್ ರಾಜ್ಯದ ಜನರ ಗಮನ ಸೆಳೆದಿದ್ದಾರೆ. ಇದೆಲ್ಲವೂ ಭಗವಂತನ ಪ್ರೇರಣೆ ಎನ್ನುತ್ತಾರೆ ರೂಪಕ ದಾರಿಗಳು. ಇಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾರ್ಚ್ 14,2025 ರಂದು ಶುಕ್ರವಾರ ಸಂಜೆ 7: ರಿಂದ ರಾತ್ರಿ 1 ರವರೆಗೆ ನಡೆಯಲಿದೆ. ಹಿರಿಯರು ಹಾಕಿ ಕೊಟ್ಟಿರುವ ಈ ಪರಂಪರೆಯನ್ನು ರಾಣೇಬೆನ್ನೂರು ದೊಡ್ಡಪೇಟೆಯ ವಿಶೇಷತೆ ಏನು ಎನ್ನುವುದನ್ನು ಜನರು ತಿಳಿದುಕೊಂಡಿದ್ದಾರೆ.ಇದಕ್ಕಾಗಿ ನಾಗರಿಕರು ಎಲ್ಲ ರೀತಿಯ ಸಹಾಯ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿರುವುದಕ್ಕೆ ಸಾಧ್ಯವಾಗಿದೆ ಎನ್ನುತ್ತಾರೆ ರತಿ ಕಾಮ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಅನಿಲ್ ಸಿದ್ದಾಳಿ ಮತ್ತು ಗೌರವಾಧ್ಯಕ್ಷ ಅಜ್ಜಪ್ಪ ಜಂಬಿಗಿ ಅವರು. ಕಳೆದ ವರ್ಷ ನಗಿಸಿದವರಿಗೆ 5, ಲಕ್ಷ ಬಹುಮಾನವಿತ್ತು ಈ ಬಾರಿ ಮತ್ತೆ 2, ಲಕ್ಷ ಹೆಚ್ಚುವರಿಯಾಗಿದ್ದು, ಒಟ್ಟು 6.75 ಲಕ್ಷ ಬಹುಮಾನ ಘೋಷಿಸಿದ್ದಾರೆ ನಗಿಸಿದವರಿಗೆ ಈ ಬಾರಿಮೊತ್ತ ದೊರೆಯಲಿದೆ. ಆದರೆ ಕಳೆದ 64 ವರ್ಷಗಳಿಂದ ನಗಿಸಿದ ಭೂಪರು ಯಾರು ಇಲ್ಲ ಎನ್ನುತ್ತಾರೆ. ಕಾಮ-ರತಿ ರೂಪಕ ಪ್ರದರ್ಶನದ ವ್ಯವಸ್ಥೆ ಈಗಾಗಲೇ ಭರದಿಂದ ಸಾಗಿದೆ. ಅದಕ್ಕಾಗಿ ರಾಮಲಿಂಗೇಶ್ವರ ದೇವಸ್ಥಾನ ಮತ್ತು ರತಿ ಕಾಮ ಉತ್ಸವ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ದೇವಸ್ಥಾನ ಸಮಿತಿ 50, ಅಜ್ಜಪ್ಪ ಜಂಬಗಿ 3 ಲಕ್ಷ, ಮಹೇಶ್ ಕುದರಿಹಾಳ,50, ಅನಿಲ್ ಸಿದ್ದಾಳಿ 1, ಲಕ್ಷ, ಸಿದ್ದಪ್ಪ ಚಿಕ್ಕಬಿದರಿ 50, ಎಸ್ ಆರ್. ಕರ್ಜಗಿ 50, ಕೊಟ್ರೇಶ್ ಕೆಂಚಪ್ಪನವರ 50, ಹಾಗೂ ಎಸ್. ಟಿ. ವೇದಮೂರ್ತಿ 25 ಸಾವಿರ ರೂಗಳು ಸೇರಿ ಹೀಗೆ ಒಟ್ಟು 6.75, ಲಕ್ಷ ನಗದು ಬಹುಮಾನ ದೊರೆಯಲಿದೆ ಎಂದು ವ್ಯವಸ್ಥಾಪಕ ಸಮಿತಿಯ ಮುಖಂಡ ಸಿದ್ದಪ್ಪ ಚಿಕ್ಕಬಿದರಿ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ, ಮುಖಂಡರಾದ ಮಲ್ಲಿಕಾರ್ಜುನ್ ಪೂಜಾರ, ಕೊಟ್ರೇಶ್ ಕೆಂಚಪ್ಪನವರ, ಬಸವರಾಜ ರೊಡ್ಡ ನವರ, ಯುವರಾಜ ಭಾರಾಟಕ್ಕಿ, ರಾಘವೇಂದ್ರ ಹರಿಹರ, ಸಿದ್ದಣ್ಣ ಹಾದಿಮನಿ, ಈರಣ್ಣ ಬೇತೂರ, ಎಸ್. ಆರ್. ಕರ್ಜಿಗಿಮಠ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. .