ಲೋಕದರ್ಶನ ವರದಿ
ಬೈಲಹೊಂಗಲ 21: ಪ್ರತಿಯೊಬ್ಬ ಸದಸ್ಯರು ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಹಕಾರಿ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ತಾಲೂಕಿನ ಮದನಬಾಂವಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಜೆ ನಡೆದ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ರೈತರು ಹೊಲಗಳಲ್ಲಿ ಬೀಜ ಬಿತ್ತನೆಗೆ, ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರ ಸಂಘ, ಸಂಸ್ಥೆಗಳು ಸರಕಾರದಿಂದ ಸಾಲ ಸೌಲಭ್ಯ ನೀಡಿ ಅನುಕೂಲ ಮಾಡಿಕೊಟ್ಟಿದೆ. ಅದರ ಸದುಪಯೋಗವನ್ನು ಪಡೆದು ಆಥರ್ಿಕವಾಗಿ ರೈತರು ಸಬಲರಾಗಬೇಕೆಂದು ತಿಳಿಸಿದರು.
ಮಾಜಿ ಜಿ.ಪಂ ಅಧ್ಯಕ್ಷ ಎಸ್.ಎಫ್.ದೊಡಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ತಮ್ಮದೇ ಆದ ಕೊಡುಗೆ ನೀಡಿ ದೇಶ ಉನ್ನತಿಕರಣಗೊಳ್ಳಲು ಕೈಜೋಡಿಸಬೇಕೆಂದರು.
ಕನ್ನಡ ಸಂಸ್ಕೃತಿ ಇಲಾಖೆಯಿಂದ ನವಲಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಕಲಾ ತಂಡದಿಂದ ಜಾನಪದ ಕಲಾಮೇಳ, ಮದನಬಾವಿ ತಂಡದಿಂದ ಭಜನಾ ಕಾರ್ಯಕ್ರಮ ನಡೆದವು. ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕರು, ಪ್ರಗತಿಪರ ರೈತರನ್ನು ಸತ್ಕರಿಸಲಾಯಿತು.
ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಸಹಕಾರಿ ದುರೀಣರಾದ ಬಸವರಾಜ ಸುಲ್ತಾನಪೂರ, ಬಿ.ಡಿ.ಪಾಟೀಲ, ಈಶ್ವರ ಉಳ್ಳೇಗಡ್ಡಿ, ಬಸನಗೌಡಾ ಪಾಟೀಲ, ಎಪಿಎಂಸಿ ಅಧ್ಯಕ್ಷ ಬರಮನ್ನಾ ಸತ್ತೆನ್ನವರ, ಸವದತ್ತಿ ಎಪಿಎಂಸಿ ಉಪಾಧ್ಯಕ್ಷ ಬಸಣ್ಣ ಮಲ್ಲೂರ, ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ವಿಕಾಸ, ಎಸ್.ಎಸ್.ಬಂದಕ್ಕನ್ನವರ, ಚನ್ನವೃಷಬೇಂದ್ರ ಪಿಕೆಪಿಎಸ್ ಅಧ್ಯಕ್ಷ ರಾಮನಗೌಡ ದೊಡಗೌಡರ, ಬಿ.ಎಫ್.ಕೊಳದೂರ, ಎ.ಆರ್.ಮಾಳನ್ನವರ ಪಾಲ್ಗೊಂಡಿದ್ದರು.
ಎಸ್.ಪಿ.ಹಿರೇಮಠ ಸ್ವಾಗತಿಸಿದರು. ಸಂತೋಷ ಪಾಟೀಲ ವಂದಿಸಿದರು.