4 ಗ್ರಾಮ ಸಭೆ: ಗ್ರಾಮಸ್ಥರ ಪ್ರಶ್ನೆಗೆ ಪಿಡಿಓ ಉತ್ತರ

ಲೋಕದರ್ಶನ ವರದಿ

ತಾಳಿಕೋಟೆ 24:ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ವತಿಯಿಂದ ಗುರುವಾರರಂದು ಮೈಲೇಶ್ವರ ಗ್ರಾಮದಲ್ಲಿ ನಡೆಸಲಾದ ಗ್ರಾಮ ಸಭೆಯಲ್ಲಿ ವಸತಿ ಯೋಜನೆ ಹಾಗೂ ಶೌಚಾಲಯ, ವಿವಿಧ ಕಾಮಗಾರಿಗಳನ್ನೊಳಗೊಂಡು ಅನೇಕ ವಿಷಯವಾಗಿ ಅಭಿವೃದ್ದಿ ಅಧಿಕಾರಿ ನಿಂಗಣ್ಣ ದೊಡಮನಿ ಅವರು ಕಾನೂನು ಬಾಹೀರವಾಗಿ ಕೈಗೊಂಡಿದ್ದಾರೆಂಬ ದೂರುಗಳು ಕೇಳಿಬಂದವು.

ಸಕರ್ಾರದಿಂದ ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಗೆ ಬಿಡುಗಡೆಗೊಂಡ ಬಸವ ವಸತಿ ಯೋಜನೆಯಡಿ, ಇಂದಿರಾ ಅವಾಸ ಯೋಜನೆಯಡಿ, ಆಶ್ರಯ ವಸತಿ ಯೋಜನೆಯಡಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ನೀಡಲಾದ ಮನೆಗಳನ್ನು ಅರ್ಹ ಬಡ ಫಲಾನುಭವಿಗಳನ್ನು ಗುರಿತಿಸದೇ ತಮ್ಮ ಮನಸ್ಸಿಗೆ ಬಂದಂತೆ ತಮ್ಮ ಅನುಕೂಲಕ್ಕೆ ತಕ್ಕಂತೆ ಶ್ರೀಮಂತ ಅನರ್ಹ ಫಲಾನುಬವಿಗಳಿಗೆ ಒದಗಿಸಿದ್ದಾರೆ ಇದರಿಂದ ಅರ್ಹ ಫಲಾನುಬವಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಸಾರ್ವಜನಿಕರು ದೂರತೊಡಗಿದರು. 

ಸ್ವಚ್ಚ ಭಾರತ ಯೋಜನೆಯಡಿ ಮನೆಗೊಂದು ಶೌಚಾಲಯ ವಿರಲಿ ಎಂದು ಕೇಂದ್ರ ಸಕರ್ಾರವು ಸ್ವಚ್ಚ ಭಾರತ ಮಿಷನ್ಅಡಿಯಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಸಹಾಯ ಸೌಲತ್ತುಗಳನ್ನು ನೀಡಿದರೆ ಅಭಿವೃದ್ದಿ ಅಧಿಕಾರಿ ಅವರು ಸಂಬಂದಿಸಿದ ಅವರನ್ನು ಕರೆಯಿಸಿ ಶೌಚಾಲಯದ ದುಡ್ಡು ಹಾಕುತ್ತೇವೆ ಮರಳಿ ಸದಸ್ಯರಿಗೆ ನೀಡಿ ಅವರೇ ಶೌಚಾಲಯಗಳನ್ನು ಕಟ್ಟಿಸಿಕೊಡಲಿದ್ದಾರೆಂದು ಹೇಳಿ ಮರಳಿ ಹಣ ಪಡೆದು ಬೇಕಾಬಿಟ್ಟಿ ಅತೀ ಕಳಪೆಮಟ್ಟದಿಂದ ಶೌಚಾಲಗಳನ್ನು ನಿಮರ್ಿಸಿದ್ದಾರೆ ಮೈಲೇಶ್ವರ ಗ್ರಾಮದಲ್ಲಿ ನಿಮರ್ಿಸಿದ 110 ಶೌಚಾಲಯಗಳಲ್ಲಿ ಬಹುತೇಕ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಕೆಲವು ಅನಕ್ಷರಸ್ಥ ಕುಟುಂಭಸ್ಥರಿಂದ ಶೌಚಾಲಯಗಳ ಬಿಲ್ಲ್ನ್ನು ಪಡೆದುಕೊಂಡಿದ್ದು ಇನ್ನೂ ಅವರಿಗೆ ಶೌಚಾಲಯಗಳನ್ನೇ ನಿಮರ್ಿಸಿಲ್ಲಾ ಇಂತಹ ಕಾರ್ಯದಲ್ಲಿ ಶಾಮೀಲಾದ ಅಭಿವೃದ್ದಿ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪಂಚಾಯ್ತಿ ವತಿಯಿಂದ ಕೈಗೊಳ್ಳಲಾದ ಚರಂಡಿ ಕಾಮಗಾರಿಗಳು, ಸಿಸಿ ರಸ್ತೆ ಕಾಮಗಾರಿಗಳು ಮನಬಂದಂತೆ ನಿಮರ್ಿಸಿದ್ದಾರೆ ಈಗಲೇ ಎಲ್ಲಕಡೆಗಳಲ್ಲಿ ಕಡಿಕಂಕರಗಳು ಕಾಣತೊಡಗಿವೆ ಅಲ್ಲದೇ ಚರಂಡಿಗಳು ಕೆಲವುಕಡೆಗಳಲ್ಲಿ ಕಿತ್ತಿಹೋಗಿವೆ ಈ ಎಲ್ಲ ವಿಷಯಗಳಲ್ಲಿ ಕಾನೂನನ್ನು ಗಾಳಿಗೆ ತೂರಿ ತಾವು ಮಾಡಿದ್ದೇ ಮಾರ್ಗವೆಂಬಂತೆ ಸಾಗಿರುವ ಅಭಿವೃದ್ದಿ ಅಧಿಕಾರಿ ನಿಂಗಣ್ಣ ದೊಡಮನಿ, ಸದಸ್ಯರುಗಳಗಳಿಗೆ ಮೊದಲು ಕ್ರಮ ಜರುಗಿಸಿ ಗ್ರಾಮ ಸಭೆಯನ್ನು ನಡೆಸಿ ಇಲ್ಲವಾದರೆ ಗ್ರಾಮಸಭೆಯನ್ನು ಬಹಿಸ್ಕರಿಸುವದಾಗಿ ಪಟ್ಟುಹಿಡಿದರು.

ಉಪಸ್ಥಿತ ಇದ್ದ ಅಭಿವೃದ್ದಿ ಅಧಿಕಾರಿ ದೊಡಮನಿ ಗ್ರಾಮಸ್ಥರನ್ನು ಸಮಜಾಯಿ ಹಾರಿಕೆ ಉತ್ತರಗಳನ್ನು ನೀಡಲು ಪ್ರಯತ್ನಿಸಿದರಾದರೂ ಗ್ರಾಮಸ್ಥರು ತಮ್ಮ ಪಟ್ಟನ್ನು ಸಡಿಸಲಾರದ್ದರಿಂದ ಉಪಸ್ಥಿತ ನೋಡಲ್ ಅಧಿಕಾರಿ ಎಸ್.ಎ.ಕಟ್ಟಿಮನಿ ಅವರು ತಮ್ಮ ದೂರನ್ನು ಲೀಖಿತವಾಗಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವದೆಂದರು. ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟ ಗ್ರಾಮಸ್ಥರರು ಲೀಖಿತವಾಗಿ ದೂರನ್ನು ಸಲ್ಲಿಸಿದರು.

ಒಟ್ಟಾರೆ ಗ್ರಾಮಸಭೆಯಲ್ಲಿ ಅಭಿವೃದ್ದಿ ಪೂರಕವಾಗಿ ಚಚರ್ೆಗಳು ನಡೆಯದೇ ಅಭಿವೃದ್ದಿ ಅಧಿಕಾರಿ ನಿಂಗಣ್ಣ ದೊಡಮನಿ ಹಾಗೂ ಕೆಲವು ಸದಸ್ಯರುಗಳು ಗ್ರಾಮಸ್ಥರರ ಕೆಂಗಣ್ಣಿಗೆ ಗುರಿಯಾಗಿ ನಡೆಯಿತು.

ಈ ಸಮಯದಲ್ಲಿ ತಾಲೂಕಾ ರೇಶ್ಮೀ ಇಲಾಖೆಯ ಅಧಿಕಾರಿ ಸಿ.ಆರ್.ಪೊಲೀಸ್ಪಾಟೀಲ, ಮಹ್ಮದ ಹುಸೇನಿ, ಎಸ್.ಎ.ಕುಂಭಾರ, ಗ್ರಾಂ ಪಂಚಾಯ್ತಿಯ ಅಧ್ಯಕ್ಷರು, ಕೆಲವು ಸದಸ್ಯರು, ಗ್ರಾಮಸ್ಥರರು ಉಪಸ್ಥಿತರಿದ್ದರು