ಬೆಳಗಾವಿ 08: ನಗರದಲ್ಲಿ 2013ರಲ್ಲಿ ಜಾರಿಗೊಳಿಸಿದ 24X7 ಕುಡಿಯುವ ನೀರಿನ ಯೋಜನೆಯಲ್ಲಿ ಉಳಿದ ವಾರ್ಡಗಳಿಗೆ ನೀರು ಒದಗಿಸಲು 663 ಕೋಟಿ ರೂ.ಕಾಮಗಾರಿಯನ್ನು ಜನೇವರಿಯಿಂದ ಪ್ರಾರಂಬಿಸಲಾಗುತ್ತದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಸೋಮವಾರ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ಮೊದಲು ಶಾಸಕನಾಗಿದ್ದಾಗ ಈ ಯೋಜನೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ 2013ರಲ್ಲಿ ಮೋರ್ಣಗೊಳಿಸಲಾಗಿತ್ತು. ಆದರೆ ತದನಂತರ ಬಂದ ಶಾಸಕರು ಆಸಕ್ತಿ ತೊರದಿರುವುದರಿಂದ 2016-17 ರಲ್ಲಿ ಟೆಂಡರ್ ರದ್ದಾಗಿತ್ತು. ಈಗ ಮತ್ತೆ ಮರು ಪ್ರಸ್ಥಾವನೆ ನೀಡಲಾಗುತ್ತಿದ್ದು ಮುಂದಿನ ಕ್ಯಾಬಿನೆಟ್ನಲ್ಲಿ ಅನುಮೋದನೆ ದೊರೆಯಲಿದೆ ಎಂದು ಹೇಳಿದರು.
ಮೊದಲ ಹಾಗೂ ಎರಡನೇ ಹಂತದ ಕುಡಿಯುವ ನೀರಿಗಾಗಿ 663 ಕೋಟಿ ರೂ. ವೆಚ್ಚದಲ್ಲಿ ಉಳಿದ 48 ವಾರ್ಡಗಳ ಪ್ರತಿಯೊಂದು ಮನೆಗೆ ನೀರು ದೊರೆಯಲಿದೆ. ಜನೇವರಿಯಿಂದ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದರು.
ನಗರದಲ್ಲಿ ಇತ್ತೀಚೆಗೆ ಡ್ರಗ್ಸ್, ಮದ್ಯಪಾನ ಧೂಮಪಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಯದೆ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗಿರೀಶ ಧೋಂಗಡಿ, ಮಂಗೇಶ ಪವಾರ, ಶಶಿಕಾಂತ ಪಾಟೀಲ ಉಪಸ್ಥಿತರಿದ್ದರು