ಮಾಸ್ಕೋ 16: ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂನರ್ಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿದ್ದಾರೆ.
ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಫೀಫಾ ವಿಶ್ವಕಪ್ 2018ರ ಟೂನರ್ಿ ಮುಕ್ತಾಯವಾಗಿದೆ. ಫೈನಲ್ ನಲ್ಲಿ ಕ್ರೊವೇಷಿಯಾ ತಂಡವನ್ನು ಮಣಿಸಿದ ಫ್ರಾನ್ಸ್ ತಂಡ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಟೂನರ್ಿಯಲ್ಲಿ ಒಟ್ಟು 48 ದೇಶಗಳ ತಂಡಗಳು ಪಾಲ್ಗೊಂಡಿದ್ದು ಈ ಪೈಕಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ತಂಡ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದೆ.
ಇನ್ನು ಇಡೀ ಟೂನರ್ಿಯಲ್ಲಿ ಹಲವು ಆಟಗಾರರು ಗಮನ ಸೆಳೆದಿದ್ದು, ಈ ಪೈಕಿ ಹಲವು ಉದಯೋನ್ಮುಖ ಆಟಗಾರರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಪದಾರ್ಪಣೆ ಮಾಡಿದ್ದು, ಮತ್ತಷ್ಟು ಆಟಗಾರರು ಸ್ಟಾರ್ ಗಿರಿ ಸಂಪಾದಿಸಿದ್ದಾರೆ.
ಈ ಪೈಕಿ ಫೀಫಾ ವಿಶ್ವಕಪ್ ಟೂನರ್ಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್ ಸ್ಟಾರ್ ಗಿರಿ ಪಡೆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.
ಫ್ರಾನ್ಸ್ ತಂಡದ ಉದಯೋನ್ಮುಖ ಆಟಗಾರ. ವಯಸ್ಸು ಈಗಿನ್ನೂ 19 ವರ್ಷ.. ಇದೇ ಮೊದಲ ಬಾರಿಗೆ ವಿಶ್ವಕಪ್ ಟೂನರ್ಿಗೆ ಪದಾರ್ಪಣೆ ಮಾಡಿರುವ ಕಿಲ್ಯಾನ್ ಮ್ಬಪ್ಪೆ ಪದಾರ್ಪಣೆ ವಿಶ್ವಕಪ್ ಟೂನರ್ಿಯಲ್ಲೇ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 7 ಪಂದ್ಯಗಳಿಂದ ಮ್ಬಪ್ಪೆ 4 ಗೋಲು ಗಳಿಸಿದ್ದು, ಈ ಪೈಕಿ ಫೈನಲ್ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ಗಳಿಸಿದ ಗೋಲು ದಾಖಲೆ ನಿಮರ್ಾಣ ಮಾಡಿದೆ.ಫುಟ್ಬಾಲ್ ದಂತಕಥೆ ಪೀಲೆ ಬಳಿಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೋಲು ಗಳಿಸಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎಂಬ ಕೀತರ್ಿಗೆ ಮ್ಬಪ್ಪೆ ಭಾಜನರಾಗಿದ್ದಾರೆ. ಇದೇ ಕಾರಣಕ್ಕೆ ಟೂನರ್ಿಯ ಉದಯೋನ್ಮುಖ ಆಟಗಾರ ಎಂಬ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.
ಹಾಲಿ ಫೀಫಾ ವಿಶ್ವಕಪ್ ಟೂನರ್ಿಯಲ್ಲಿ ಉದಯಸಿದ ಮತ್ತೋರ್ವ ಸ್ಟಾರ್ ಆಟಗಾರ ಹಿವರ್ಿಂಗ್ ಲೊಜಾನೊ. ಮೆಕ್ಸಿಕೋ ತಂಡ 22 ವರ್ಷದ ಆಟಗಾರ ಲೊಜಾನೊ ಬಾಲ್ ಪಾಸಿಂಗ್ ವಿಭಾಗದಲ್ಲಿ ಶೇ.86.5ರಷ್ಟು ನಿಖರತೆ ಹೊಂದಿದ್ದಾರೆ. ಇನ್ನು ಪಿಎಸ್ ವಿ ಐಂಡ್ಹೋವನ್ ಕ್ಲಬ್ ಪರ ಆಡುತ್ತಿರುವ ಲೊಜಾನೋ, ಈ ವರೆಗೂ 17 ಗೋಲು ಗಳಿಸಿದ್ದಾರೆ. ವಿಶ್ಪಕಪ್ ಟೂನರ್ಿಯಲೂ ಗಮನಾರ್ಹ ಪ್ರದರ್ಶನ ನೀಡಿರುವ ಲೊಜಾನೋ ಮೇಲೆ ಫುಟ್ಬಾಲ್ ಕ್ಷೇತ್ರದ ಅಗ್ರಗಣ್ಯ ಕ್ಲಬ್ ಗಳಾದ ಮ್ಯಾಂಚೆಸ್ಟರ್ ಯುನೈಟೆಡ್, ಬಾಸರ್ಿಲೋನಾ ತಂಡಗಳು ಕಣ್ಣಿಟ್ಟಿವೆ.
ಇಂಗ್ಲೆಂಡ್ ತಂಡದ ಪ್ರಮುಖ ಸ್ಚ್ರೈಕರ್ ಕೀರನ್ ಟ್ರಿಪ್ಪಿರ್ 2018ರ ವಿಶ್ವಕಪ್ ಟೂನರ್ಿಯ ಮತ್ತೊರ್ವ ಪ್ರಮುಖ ಸ್ಚಾರ್ ಆಟಗಾರ. ವಿಶ್ವಕಪ್ ಸೆಮಿಫೈನಲ್ ನಲ್ಲಿ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಇದೇ ಆರಂಭವನ್ನು ಮುಂದುವರೆಸಿಕೊಂಡು ಹೋಗಲಾಗದ ಇಂಗ್ಲೆಂಡ್ ತಂಡ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಟೂನರ್ಿಯಿಂದ ಹೊರಬಿದ್ದಿತ್ತು.
ಫ್ರಾನ್ಸ್ ಸ್ಚಾರ್ ಆಟಗಾರರಲ್ಲಿ ಬೆಂಜಮಿನ್ ಪಾವಡರ್್ ಕೂಡ ಒಬ್ಬರು. ಫ್ರಾನ್ಸ್ ತಂಡದ ಪ್ರಮುಖ ಡಿಫೆಂಡರ್ ಆಗಿರುವ ಪಾವಡರ್್ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2017ರಲ್ಲಿ ಕ್ರೊವೇಷಿಯಾದ ಎಂಟ್ರಾಚ್ಟ್ ಫ್ರಾಂಕ್ಫಟರ್್ ಕ್ಲಬ್ ಪರ ಆಡಿದ್ದ ರೆಬಿಕ್ ಕನಸಿನಲ್ಲೂ ತಾವು ವಿಶ್ನಕಪ್ ಟೂನರ್ಿಯಲ್ಲಿ ಕ್ರೊವೇಷಿಯಾ ತಂಡವನ್ನು ಪ್ರತಿನಿಧಿಸುತ್ತೇವೆ ಎಂದು ಭಾವಿಸಿರಲಿಲ್ಲ. ತಂಡಕ್ಕೆ ಆಯ್ಕೆಯಾಗಿದ್ದು ಮಾತ್ರವಲ್ಲದೇ ಉತ್ತಮ ಪ್ರದರ್ಶನದ ಮೂಲಕ ರೆಬಿಕ್ ಇದೀಗ ಅಗ್ರಗಣ್ಯ ಕ್ಲಬ್ ಗಳ ಗಮನ ಸೆಳೆದಿದ್ದಾರೆ.
ರಷ್ಯಾ ತಂಡಕ್ಕೆ ಹೆಚ್ಚುವರಿ ಆಟಗಾರನಾಗಿ ಕಣಕ್ಕಿಳಿದಿದ್ದ ಡೆನಿಸ್ ಚೆಶರ್ೆವ್ ಇದೀಗ ತಮ್ಮ ಉತ್ತಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿ ಮಾರ್ಪಟ್ಟಿದ್ದಾರೆ. ಈ ಹಿಂದೆ ತಂಡಕ್ಕೆ ಆಯ್ಕೆಯಾಗಿದ್ದ ಅಲನ್ ಡಿಜೋಜೆವ್ ಗಾಯಗೊಂಡ ಪರಿಣಾಮ ಅವರ ಸ್ಥಾನಕ್ಕೆ ಡೆನಿಸ್ ಚೆಶರ್ೆವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಚೆಶರ್ೆವ್ ತಮಗೆ ಸಿಕ್ಕ ಸಣ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ರಷ್ಯಾ ಆಡಿದ ಐದು ಪಂದ್ಯಗಳಿಂದ ಡೆನಿಸ್ ಚೆಶರ್ೆವ್ ಒಟ್ಟು 4 ಗೋಲುಗಳನ್ನು ಗಳಿಸಿ ತಂಡ ನಾಕೌಟ್ ಗೇರಲು ಕಾರಣರಾಗಿದ್ದರು.