125 ಕೋಟಿ ರೂ. ವೆಚ್ಚದ ಯೋಜನೆಗಳು ರೂಪಿಸಿದ್ದೇನೆ: ಹುಕ್ಕೇರಿ

 ಕಾಗವಾಡ 31: ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈವರೆಗೆ 125 ಕೋಟಿ ರೂ. ವೆಚ್ಚದ ಯೋಜನೆಗಳು ರೂಪಿಸಿದ್ದೇನೆ ಎಂದು ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದರು. 

ರವಿವಾರ ದಿ. 30ರಂದು ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರು ಕಾಗವಾಡ ಕಾಂಗ್ರೆಸ್ ಪಕ್ಷದ ಘಟಕಾಧ್ಯಕ್ಷ ವಿಜಯ ಅಕಿವಾಟೆ, ಜಿಲ್ಲಾ ಸದಸ್ಯ ಕುಮಾರ ಬರಗಾಲೆ, ಕುಸನಾಳ ಗ್ರಾಪಂ ಆಧ್ಯಕ್ಷ ಜಯಪಾಲ ಯರೆಂಡೋಳೆ ಸೇರಿದಂತೆ ಅನೇಕ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. 

ಕಾಗವಾಡ ಕ್ಷೇತ್ರದ ಹಿಂದೂಳಿದ ಜನಾಂಗಣ ಅಭಿವೃದ್ಧಿಗಾಗಿ 82.50 ಲಕ್ಷ ರೂ. ಮಂಜೂರು: ಕಾಗವಾಡ ತಾಲೂಕಿನ ಲೋಕುರ, ಕಾತ್ರಾಳ, ಕುಸನಾಳ ಗ್ರಾಮದ ಎಸ್.ಸಿ ಕಾಲನಿಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ತಲಾ 17.50 ಲಕ್ಷ ರೂ. ಶೇಡಬಾಳ, ಐನಾಪುರಪಟ್ಟಣದ ಪರಿಶಿಷ್ಟ ಪಂಗಡ ಕಾಲನಿಯಲ್ಲಿಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ತಲಾ 15 ಲಕ್ಷ ಹೀಗೆ 82.50 ಲಕ್ಷ ರೂ. ಯೋಜನೆಗಳ ಕಾಮಗಾರಿ ಮಂಜೂರಾತಿ ಪತ್ರ ಸಂಸದರು ನೀಡಿದರು.

ಕಾಗವಾಡ ಕ್ಷೇತ್ರದ ಶಾಸಕನಾಗುವ ಇಚ್ಛೆಯಿತ್ತು:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಗವಾಡ ಕ್ಷೇತ್ರದಿಂದ ಸ್ಪಧರ್ಿಸಲು ಬಹಿಸಿದ್ದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಮಂಜೂರುಗೊಳಿಸಿದ್ದೆ. ಇದರಲ್ಲಿ ಮುಖ್ಯವಾಗಿ ಕೃಷ್ಣಾ ನದಿಗೆ ಸೇತುವೆ ನಿಮರ್ಿಸಲು ಜುಗೂಳ-ಖಿದ್ರಾಪುರ, ಮೋಳವಾಡ-ಚಿಂಚಲಿ ಸೇತುವೆ ಎತ್ತರಿಸುವುದು. ಉಗಾರ-ಕುಡಚಿ ನದಿಗೆ ಈಗಿರುವ ಉಗಾರದ ಬಂಧಾರ ಎತ್ತರಿಸುವುದು, ಕೃಷ್ಣಾ ಕಿತ್ತುರ-ಖೆಮ್ಲಾಪುರ ಬಂಧಾರ ನಿಮರ್ಿಸುವ ಯೋಜನೆಗಳಿಗೆ ಮಂಜೂರಾತಿ ಪಡೆದಿದ್ದೇನೆ. ಅಲ್ಲದೇ, ಉಗಾರದ ಸೇತುವೆ ಎತ್ತರಿಸುವುದು, ರಸ್ತೆಗಳು ಅಭಿವೃದ್ಧಿ, ಯಾತ್ರಿ ನಿವಾಸ, ಭವನಗಳ ಕಟ್ಟಡದಕಾಮಗಾರಿಗಳಿಗೆ ಅನುದಾನ ಮಂಜೂರುಗೊಳಿಸಿದ್ದೇನೆ.ಇಲ್ಲಿಯ ಜನತೆಯ ಅನೇಕ ಸಮಸ್ಯೆಗಳಿದ್ದು, ಅವು ಲೋಕಸಭಾ ಸದಸ್ಯನಾಗಿ ಪೂರೈಸುತ್ತೇನೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಶಂಕರ ಮಮದಾಪುರೆ, ಸಂಜಯ ಬಿರಡಿ, ಸುಭಾಷ ಭಗತ, ಅಜೀತ ಖೋತ, ಸಾವಂತ ಆದುಕೆ, ಚಂದರ ಆದುಕೆ, ಸೇರಿದಂತೆ ಅನೇಕರು ಇದ್ದರು.