ಅಟಲ್ ಬಿಹಾರಿ ವಾಜಪೇಯಿ ರವರ 100ನೇ ಜನ್ಮ ದಿನಾಚರಣೆ

100th Birth Anniversary of Atal Bihari Vajpayee


ಅಟಲ್ ಬಿಹಾರಿ ವಾಜಪೇಯಿ ರವರ 100ನೇ ಜನ್ಮ ದಿನಾಚರಣೆ  

ಹಾವೇರಿ  26: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ರವರ 100ನೇ ಜನ್ಮ ದಿನಾಚರಣೆ ಆಚರಿಸಲಾಯಿತು. 

ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ 1951ರ ಅನಂತರ ಸಕ್ರಿಯ ರಾಜಕಾರಣ ಪ್ರವೇಶಿಸಿದರು.ಡಾ. ಶ್ಯಾಮಪ್ರಸಾದ ಮುಖರ್ಜಿಯವರ ನಿಕಟವರ್ತಿ-ಆಪ್ತ ಕಾರ್ಯದರ್ಶಿ.ಜನಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರ ವಹಿಸಿದರು(1951).ಅನಂತರ ಸಂಸತ್ತಿನ ಸದಸ್ಯರಾದರು. ಇವರು ರಾಜ್ಯಸಭಾ ಸದಸ್ಯರಾಗಿಯೂ (1962, 86 ಮತ್ತು 88) ಕಾರ್ಯ ನಿರ್ವಹಿಸಿದ್ದಾರೆ ಎಂದರು.ಮಾಜಿಶಾಸಕ ಶಿವರಾಜ ಸಜ್ಜನರ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ರವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು,ಒಂದು ಸಾಧನೆ.ಇವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ,ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ.ರಾಷ್ಟ್ರರಾಜಕಾರಣದಲ್ಲಿ ಬಿಜೆಪಿಯ ಒಳವ್ಯವಹಾರಗಳಲ್ಲಿ ವಾಜಪೇಯಿ ಸಕ್ರಿಯರಾಗಿದ್ದರು. ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ.ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು ಎಂದು ಹೇಳಿದರು. 

ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ಅಲ್ಲಾಭಕ್ಷ ತಿಮ್ಮಾಪೂರ,ಜಿಲ್ಲಾ ಮಹಿಳಾ ಮೋರ್ಚಾ ವಿದ್ಯಾ ಶೆಟ್ಟಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಹೊಸಮನಿ, ರಾಜಶೇಖರ ಕಟ್ಟೆಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ,ಡಾ. ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ನೀಲಪ್ಪ ಚಾವಡಿ,ಮುಖಂಡರಾದ ವೀರಣ್ಣ ಅಂಗಡಿ,ಗೀರೀಶ ತುಪ್ಪದ, ಮುಖಂಡರಾದ ಮುರಗೆಪ್ಪ ಶೆಟ್ಟರ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ,ಶಿವಯೋಗಿ ಹುಲಿಕಂತಿಮಠ, ಲಲಿತಾ ಗುಂಡೇನಹಳ್ಳಿ,ಶ್ರೀಮತಿ ಚನ್ನಮ್ಮ ಬ್ಯಾಡಗಿ,ಲತಾ ಬಡ್ನಿಮಠ, ರೋಹಿಣಿ ಪಾಟೀಲ, ಪಕ್ಕಿರೇಶ ಹಾವನೂರ, ಮಂಜುನಾಥ ಹುಲಗೂರ, ಗುಡ್ಡಪ್ಪ ಭರಡಿ, ಮಂಜುನಾಥ ಮಡಿವಾಳರ,ವಿಜಯಕುಮಾರ ಕುಡ್ಲಪ್ಪನವರ,ಶಂಭುಲಿಂಗಪ್ಪ ಹತ್ತಿ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.