ವಿದ್ಯಾರ್ಥಿ ಗಳು ಪಡೆದ ಜ್ಞಾನ ಸದುಪಯೋಗಿಸಿಕೊಳ್ಳಲಿ: ಬೆಟಗಾರ

ಗೋಕಾಕ 13: ತಾವು ಪಡೆದ ಜ್ಞಾನದ ಸದುಪಯೋಗದಿಂದ ವಿದ್ಯಾಥರ್ಿಗಳು ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವಂತೆ ಇಲ್ಲಿಯ ಲಕ್ಷೀ ಏಜುಕೇಶನ್ ಟ್ರಸ್ಟಿನ್ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ ಹೇಳಿದರು.

ಶನಿವಾರದಂದು ನಗರದ ಲಕ್ಷ್ಮಣರಾವ ಜಾರಕಿಹೊಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳಿಗೆ ಜ್ಞಾನದ ಜ್ಯೋತಿಯನ್ನು ನೀಡಿ ಗುರುಗಳು ಜೀವನದ ಮಾರ್ಗವನ್ನು ನೀಡಿದ್ದಾರೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಶಿಲ್ಪಿಗಳು ತಾವೇ ಆಗಿದ್ದು, ಇಂದಿನ ಸ್ಪಧರ್ಾತ್ಮಕಯುಗದಲ್ಲಿ ತಾವು ಕಲಿತ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಮುಂದಿನ ಜೀವನವನ್ನು ಉಜ್ವಲಗೊಳಿಸಿಕೊಳ್ಳಿರೆಂದು ಹಾರೈಸಿದರು.

ವೇದಿಕೆ ಮೇಲೆ ಪ್ರಚಾರ್ಯ ಎನ್.ಎಮ್.ತೋಟಗಿ, ಉಪನ್ಯಾಸಕರುಗಳಾದ ಆಯ್.ಎಸ್.ಪವಾರ, ಎಸ್.ಎಸ್.ನಾಯ್ಕರ, ಎಮ್.ವಾಯ್.ಪಾಟೀಲ, ಡಿ.ಬಿ.ತಳವಾರ, ವಿದ್ಯಾಥರ್ಿ ಪ್ರತಿನಿಧಿ ತೇಜಸ್ವಿನಿ ಬಡಿಗೇರ ಇದ್ದರು.

ವಿದ್ಯಾರ್ಥಿಗಳಾದ ಐಶ್ವರ್ಯ ಹಾಗೂ ರಾಜಶ್ರೀ ಸ್ವಾಗತಿಸಿದರು, ಮೇಘಾ ಮತ್ತು ಪೂಣರ್ಿಮಾ ನಿರೂಪಿಸಿದರು, ಕೆಂಪಣ್ಣ ಕುಡ್ಡೆಮ್ಮಿ ವಂದಿಸಿದರು.