ಶಿರಹಟ್ಟಿ: ಸುಗ್ನಳ್ಳಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಸಕಲ ಕ್ರಮ: ಕೋನರೆಡ್ಡಿ

ಶಿರಹಟ್ಟಿ 09:  ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಯಲ್ಲಿ 2007 ರ 28    ಫೆಬ್ರುವರಿಯಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಅದರಿಂದಾಗಿ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ  ತಿಳಿಸಿದರು. 

ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ವಸ್ತು ಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಗ್ರಾಮದಲ್ಲಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮದ ಜನತೆಗೆ  ಸಮಗ್ರ ಚಿತ್ರಣ ನೀಡಿದರು. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಕುಮಾರಸ್ವಾಮಿಯವರು ನಾಲ್ಕು ಕೊಳವೆ ಬಾವಿ ಕೊರೆಸಿದ್ದರು. ಕೃಷಿಗಾಗಿ ವಿದ್ಯುತ್ ಸೌಲಭ್ಯ ಒದಗಿಸಿ ಹಲವು ರೈತರಿಗೆ ಅನುಕೂಲ ಕಲ್ಪಿಸಿದ್ದರು. ಅಂದಿನ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬೀರಪ್ಪನ ಗುಡಿಯಿಂದ ಶಾಲೆಯವರೆಗೆ ಸಿ.ಸಿ. ರಸ್ತೆಯನ್ನು ಮಾಡಿಸಲಾಗಿದೆ. ಸುಗ್ನಹಳ್ಳಿ ಗ್ರಾಮಕ್ಕೆ ಗುಡಿಸಲು ಮುಕ್ತ ಗ್ರಾಮ ಯೋಜನೆಯಡಿ 50 ಮನೆಗಳ ನಿಮರ್ಾಣ ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ರೇಶನ್ ಕಾರ್ಡ, ವಿಧವಾ ವೇತನ, ಮಾಶಾಸನ, ಅಂಗವಿಕಲ ವೇತನ ಮತ್ತು ವೃದ್ದಾಪ್ಯ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸ್ಥಳದಲ್ಲಿಯೇ ವಿತರಿಸಲಾಗಿತ್ತು. ಜಲಾನಯನ ಅಭಿವೃದ್ದಿ ಯೋಜನೆಯಡಿಯಲ್ಲಿ ಸುಗ್ನಹಳ್ಳಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಹಳ್ಳಗಳಿಗೆ ಚೆಕ್ ಡ್ಯಾಂ ನಿಮರ್ಾಣಕ್ಕೆ ಚಾಲನೆ ದೊರೆತಿದೆ. ಹೀಗೆ ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡಿದ್ದರಿಂದ ಗ್ರಾಮ ಅಭಿವೃದ್ದಿಯತ್ತ ದಾಪುಗಾಲು ಹಾಕಿದೆ ಎಂದು ಎನ್.ಹೆಚ್. ಕೋನರಡ್ಡಿ  ಹೇಳಿದರು. 

     ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಂದು ಗ್ರಾಮ ವಾಸ್ತವ್ಯ ಮಾಡಿದ್ದರಿಂದ ವಿಶೇಷ ಕಾಳಜಿವಹಿಸಿ   ಸುಗ್ನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಜಂಟಿ ಕಾರ್ಯದಶರ್ಿ ಕೃಷ್ಣಯ್ಯ ಅವರನ್ನು ಕಳುಹಿಸಿ ವರದಿ ತರಿಸಿಕೊಂಡು  2018-19ನೇ ಸಾಲಿನ ಬಜೆಟ್ ನಲ್ಲಿ ಆಲದಮ್ಮನ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ 10 ಕೋಟಿ ಘೋಷಣೆ ಮಾಡಿದ್ದಾರೆ. ಅದೇ ರೀತಿ 2018-19ನೇ ಸಾಲಿನಲ್ಲಿ 3-4 ಗ್ರಾಮಗಳ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇಂಗು ಕೆರೆ ನಿಮರ್ಾಣಕ್ಕೆ ಸುಗ್ನಹಳ್ಳಿ ಗ್ರಾಮದ ಹದ್ದಿನಲ್ಲಿರುವ ಮುಕ್ಕುಡ್ಡದ ಹತ್ತಿರ ಕೆರೆಗೆ 11 ಕೋಟಿ ರೂ ಸಚಿವ ಸಂಪುಟದ ಅನುಮೋದನೆಗೆ ಮಂಡನೆಯಾಗಿದೆ. ಸುಗ್ನಹಳ್ಳಿ ಗ್ರಾಮದ ಸುಮಾರು 25ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ ವಿವರಿಸಿದರು.  

     ಸರಕಾರ ರಚನೆ ಆಗಿ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲಾಡಳಿತ ಗ್ರಾಮಕ್ಕೆ ಭೇಟಿ ನೀಡಿ ಸುಗ್ನಹಳ್ಳಿ ಗ್ರಾಮದ ಹಳೆಯ ಬಾವಿ ನವೀಕರಿಸಿ ನೀರನ್ನು ಪೂರೈಸುವ ಕಾರ್ಯ ಇಷ್ಟರಲ್ಲೇ ಪೂರ್ಣಗೊಳ್ಳಲಿದೆ. ಸುಗ್ನಹಳ್ಳಿ  ಗ್ರಾಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಮುತುವಜರ್ಿವಹಿಸಿ ಅಭಿವೃದ್ದಿಗೊಳಿಸಲು ಮುಂದಾಗಿದ್ದಾರೆ ಎಂದು ಕೋನರಡ್ಡಿ ತಿಳಿಸಿದರು.  

ಮಧ್ಯರಾತ್ರಿಯವರೆಗೆ ಜನತಾ ದರ್ಶನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸುಗ್ನಹಳ್ಳಿ ಗ್ರಾಮದಲ್ಲಿ ಸಂಜೆ 7 ರಿಂದ  ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕನರ್ಾಟಕ ಭಾಗದ ವಿವಿಧೆಡೆಯಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನರೊಂದಿಗೆ ಉಭಯ ಕುಶಲೋಪರಿ ನಡೆಸಿ, ಪ್ರತಿಯೊಬ್ಬರ ಅಹವಾಲನ್ನು ಸಮಾಧಾನದಿಂದ ಮಧ್ಯರಾತ್ರಿ 2ರವರೆಗೆ ಆಲಿಸಿದ್ದನ್ನು ಕೊನರೆಡ್ಡಿ ನೆನಪಿಸಿಕೊಂಡರು.  

ವೃದ್ದಾಪ್ಯ ವೇತನ ಹೆಚ್ಚಳ: ಗ್ರಾಮದ ಹಿರಿಯ ಜೀವಗಳ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವೃದ್ದಾಪ್ಯ ವೇತನವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಅದರಂತೆ ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ಅನ್ವಯವಾಗುವಂತೆ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದ್ದು ಸುಗನಹಳ್ಳಿ ಗ್ರಾಮವಾದ್ತವ್ಯವೇ ಕಾರಣವಾಗಿರುವುದು ಹೆಮೆಮ ವಿಷಯವೆಂದು ಕೋನರೆಡ್ಡಿ ನುಡಿದರು. 

     ಸಭೆಯಲ್ಲಿ ಸಾರ್ವಜನಿಕ ಮನವಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿದ ಅವರು ತಾಲೂಕಾ ಮತ್ತು ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಸೂಕ್ತ ಪರಿಹಾರ ನೀಡಲು ಸೂಚಿಸಿದ ಅವರು ಸಕರ್ಾರದಿಂದ ಆಗಬೇಕಾದ ಮನವಿಗಳನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಗ್ರಾಮದ ಆಲದಮ್ಮನ ಕೆರೆಯ ವಾಸ್ತವ ಪರಿಸ್ಥಿತಿ ತಿಳಿಯಲು ಸ್ಥಳಕ್ಕೆ ಬೇಟಿ ನೀಡಿದ ಅವರು ಮುಖ್ಯಮಂತ್ರಿಗಳು ಗ್ರಾಮದಲ್ಲಿ ವಾಸ್ತವ್ಯದ ರೈತ ಬಸವರಾಜ ಬಸಯ್ಯ ಹೊಂಬಾಳಿಮಠ ಅವರ ಮನೆಗೆ ಭೆಟಿ ನೀಡಿ ಉಪಹಾರ ಸ್ವೀಕರಿಸಿದರು. 

     ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ, ಬನ್ನಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗಿರಿಜಮ್ಮ ಕುರಿ, ಗದಗ ತಾಲೂಕಾ ಪಂಚಾಯತ ಕಾರ್ಯನಿವಾಹಕ ಅಧಿಕಾರಿ ಆರ್. ವೈ. ಗುರಿಕಾರ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ. ಜಿ.ಪಂ. ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಗುರುಹಿರಿಯರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.