.ಪುಟ್ಟರಾಜ ರೈತ ಸಂಘ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಗಣ್ಯಮಾನ್ಯರಿಗೆ ಸನ್ಮಾನ

.Puttaraja Raitha Sangh felicitation to dignitaries as part of the anniversary

.ಪುಟ್ಟರಾಜ ರೈತ ಸಂಘ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಗಣ್ಯಮಾನ್ಯರಿಗೆ ಸನ್ಮಾನ

ಗದಗ:06 ಕರ್ನಾಟಕ ರಾಜ್ಯ  ಡಾ. ಪಂ.ಪುಟ್ಟರಾಜ ರೈತ ಸಂಘ ಗದಗ ಇವರ ವತಿಯಿಂದ 4ನೇ ವಾರ್ಷಿಕೋತ್ಸವದ ಅಂಗವಾಗಿ 250 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, 20 ಕಲಾವಿದರಿಗೆ, 20 ಕ್ರೀಡಾಪಟುಗಳಿಗೆ ಸೇರಿದಂತೆ 500ಕ್ಕೂ ಅಧಿಕ ಸಾಧಕರಿಗೆ, ಗಣ್ಯಮಾನ್ಯರಿಗೆ ಪ್ರಶಸ್ತಿ, ಗೌರವ ಸನ್ಮಾನ ಕಾರ್ಯಕ್ರಮವು ಫೆ. 9ರ ರವಿವಾರ ಬೆಳಿಗ್ಗೆ 10-00 ಗಂಟೆಗೆ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪ ಗದಗದಲ್ಲಿ   ಡಾ.ಪಂಡಿತ ಪುಟ್ಟರಾಜ ರೈತ ಸಂಘದಿಂದ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಪುರಸ್ಕಾರ ಸೇರಿದಂತೆ ವಿಶಿಷ್ಟ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪೂಜ್ಯರು, ಜನಪ್ರತಿನಿಧಿಗಳು, ಕಲಾವಿದರು, ಕ್ರೀಡಾಪಟುಗಳು, ವಿದ್ಯಾರ್ಥಿಗಳುಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಪಂಡಿತ ಪುಟ್ಟರಾಜ ರೈತ ಸಂಘ ಅಧ್ಯಕ್ಷ ಎಂ ಪಿ ಮುಳಗುಂದ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಯುವಕರು, ಮಹಿಳೆಯರು, ಸಹೋದರ, ಸಹೋದರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದ ಅವರು ಪರಮಪೂಜ್ಯರಿಂದ ಪ್ರಶಸ್ತಿ ಪಡೆಯುವುದು ಪುಣ್ಯ ಎಂದರು ಪತ್ರಿಕಾ ಗೋಷ್ಠಿ ವೇಳೆ  ಷ.ಬ್ರ. ಫಕೀರೇಶ್ವರ ಸ್ವಾಮಿಗಳು ಓಂಕಾರೇಶ್ವರ ಹಿರೇಮಠ ಗದಗ, ಜೆಡಿಎಸ್ ಪಕ್ಷದ ಮುಖಂಡ ಹಾಜಿಅಲಿ ಕೊಪ್ಪಳ, ಪ್ರಭಾಕರ ಜುಟ್ಲದ, ರತ್ನಾ ಪೂಜಾರ ಸೇರಿದಂತೆ ಇತರರಿದ್ದರು.