ಗ್ರಾ.ಪಂ.ನಲ್ಲಿ ಅವ್ಯವಹಾರ ಖಂಡಿಸಿ ಬೀಗ ಜಡಿದು ಪ್ರತಿಭಟನೆ

ಲೋಕದರ್ಶನ ವರದಿ

ಬೈಲಹೊಂಗಲ: ತಾಲೂಕಿನ  ನೇಗಿನಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾರಿಗೆಗೊಂಡ  ಸರಕಾರಿ ಯೋಜನೆಗಳಲ್ಲಿ ಸಾಕಷ್ಟು ಅವ್ಯವವಹಾರ ಖಂಡಿಸಿ, ಕೆಲ ಗ್ರಾಪಂ.ಸದಸ್ಯರು ನೂರಾರು ಗ್ರಾಮಸ್ಥರು ಸೋಮವಾರ ಗ್ರಾಪಂ.ಗೆ ಬೀಗ ಜಡಿದು ಪ್ರತಿಭಟಿಸಿದರು.

           ನೂರಾರು ಗ್ರಾಮಸ್ಥರು ಗ್ರಾಪಂ.ಮುಂಭಾಗದಲ್ಲಿ ಜಮಾವಣೆಗೊಂಡು ಗ್ರಾಪಂ.ಬೀಗ ಜಡಿದು ಪಿಡಿಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವವರೆಗೆ ಬೀಗ ತೆಗೆಯಲೆಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದರು. 12 ಗಂಟೆಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಆಗಮಿಸಿದಾಗ ಹಿಂಬರಹದ ಸಹಿ ಪಡೆದು ಸ್ವಲ್ಪ ಸಮಯ ನೀಡಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ  ನಂತರ ಉತ್ತರಿಸುವುದಾಗಿ ಜಾರಿಕೊಂಡರು.

       ಘಟನಾ ಸ್ಥಳಕ್ಕೆ ಪಿ.ಎಸ್.ಆಯ್ ಎಮ್.ಎಸ್ ಹೂಗಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ನಂತರ ಅವರ ಮನಒಲಿಸಿ ಪಂಚಾಯತಿ ಬೀಗ ತೆರೆಯಲು ವಿನಂತಿಸಿದರು. 

   ತಾಪಂ.ಕಾರ್ಯವರ್ಾಹಕ ಅಧಿಕಾರಿ ಸಮೀರ ಮುಲ್ಲಾ  ಗ್ರಾಪಂ. ವ್ಯಾಪ್ತಿಯಲ್ಲಿ ನಡೆದ ಅವ್ಯವಹಾರ, ಲೋಪದೋಷ ಪಟ್ಟಿ ಮಾಡಿ ತಿಳಿಸಿ ಎಂದಾಗ  ಗಲಾಟೆಯ ಮಧ್ಯೆ  19 ಜನರು ತಮಗಾದ ಅನ್ಯಾಯ ಕುರಿತು ಪಟ್ಟಿ ನೀಡಿದಾಗ ಇವುಗಳನ್ನು ಆಲಿಸಿದ ಇಓ ಅವರು ಸಮಗ್ರವಾಗಿ ಪರಾರ್ಮಶಿಸಿ ತಮಗೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದಾಗ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.  ಪಿ.ಡಿ.ಓ ಮಡಿವಾಳಯ್ಯ ಅವಕ್ಕನವರ ಅವರಿಗೆ  ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಇಲ್ಲದಿದ್ದಲ್ಲಿ ನೋಟಿಸ ನೀಡಲಾಗುವುದು ಎಂದು  ಎಚ್ಚರಿಕೆ ನೀಡಿದರು.

      ಗ್ರಾಪಂ.ಸದಸ್ಯ ಮಡಿವಾಳಪ್ಪ ಅಂಗಡಿ ಮಾತನಾಡಿ,  ರಾಜ್ಯ ಸಕರ್ಾರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೋಸ್ಕರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಮನೆ ಬಾಗಿಲಿಗೆ ಮುಟ್ಟಿಸಲು ಹರಸಾಹಸ ಪಡುತ್ತಿದ್ದಾರೆ. ಇತ್ತ ಗ್ರಾಪಂ. ಪಿಡಿಓ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಹಣದ ಆಸೆಗಾಗಿ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಗಂಭೀರವಾಗಿ ಆಪಾದಿಸಿದರು.

       ತಮಗೆ ಬೇಕಾದ ಜನತೆಗೆ ಮಾತ್ರ ಯೋಜನೆಗಳನ್ನು  ಪಿಡಿಓ ನೀಡುತ್ತಾರೆ.  ಅಲ್ಲದೇ ಕೆಲ ಗ್ರಾಪಂ.ಸದಸ್ಯರ ಮಾತುಗಳಿಗೆ ಮಾತ್ರ ಮಣೆ ಹಾಕುತ್ತಿದ್ದು, ಇನ್ನುಳಿದ ಸದಸ್ಯರನ್ನು ಗನಣೆಗೆ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಇನ್ನೂ ಸಾಮಾನ್ಯ ನಾಗರೀಕರ ಗತಿಯೇನು ಎಂದು ಕಿಡಿಕಾರಿದರು.

       ಗ್ರಾಪಂ.ಸದಸ್ಯರಾದ ದೇವೆಂದ್ರಪ್ಪ ಕಾಮಕರ, ಕರೆಪ್ಪ ಭೂತಾಳಿ, ಸುರೇಶ ತಿಗಡಿ, ಉದಯ ಖನಗಾಂವಿ, ಮಡಿವಾಳಪ್ಪ ಬುಡ್ಡಪ್ಪನವರ, ನಾಗಪ್ಪ ಕೇರಸರಕೊಪ್ಪ ಹಾಗೂ ದುರದುಂಡಪ್ಪ ಸೊಂಟನ್ನವರ, ಬಸವರಾಜ ಗಾಣಗಿ, ಧರ್ಮರಾಜ ತಪರಿ, ಕುಮಾರ ಅಂಗಡಿ, ಪ್ರಕಾಶ ಅಂಗಡಿ,  ಮಂಜುನಾಥ ಹೊಸಮನಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು. ಮುಂಜಾಗ್ರತಾ ಕ್ರಮವಾಗಿ ಅಹಿತಕರ ಘಟನೆ ನಡೆಯದಂತೆ ಪಿಎಸೈ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.