ಬೈಲಹೊಂಗಲ: ಸ್ವಂತ: ಆಸ್ತಿಯಂತೆ ಪರಿಸರ ರಕ್ಷಿಸಿ: ಪಾಟೀಲ

ಬೈಲಹೊಂಗಲ 06: ಮನುಷ್ಯ ತನ್ನ ಸ್ವಂತ: ಆಸ್ತಿಯನ್ನು ಹೇಗೆ ಸಂರಕ್ಷಣೆ ಮಾಡಿಕೊಳ್ಳುವನೋ ಅದೇ ಪ್ರಕಾರ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

     ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾಥರ್ಿಗಳು ಪ್ರತಿಯೊಬ್ಬರು ತಮ್ಮ ಮನೆಯಿಂದಲೇ ಗಿಡ ನೆಡುವ ಮೂಲಕ ಪರಿಸರಕ್ಕೆ ಪೂರಕವಾಗಿರುವ ವಾತಾವರಣವನ್ನು ನಿಮರ್ಿಸಬೇಕೆಂದು  ತಿಳಿಸಿದರು. ಪರಿಸರ ಜಾಗೃತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯು ಕೈಗೊಂಡಿರುವ ಯೋಜನೆಗಳು ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವಾದದು ಎಂದರು.

ಯೋಜನೆಯ ಕೃಷಿ ಅಧಿಕಾರಿ ನಾಗೇಶ ಬೆಣ್ಣಿ ಮಾತನಾಡಿ, ಯೋಜನೆಯು ಪರಿಸರ ಹಾಗೂ ಪರಿಸರಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ವಿದ್ಯಾಥರ್ಿಗಳು ಹಾಗೂ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ ಪರಿಸರದ ಮಹತ್ವ ಹಾಗೂ ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗುವುದೆಂದು ತಿಳಿಸಿದರು.

       ಮಹಾವಿದ್ಯಾಲಯದ ಪ್ರಾಚಾಯರ್ೆ ಡಾ.ಎಂ.ಬಿ.ತಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪನ್ಯಾಸಕರಾದ ಪಿ.ಎಮ್.ಆಯಾಚಿತ್, ಎಮ್.ಎಸ್ಗಡ್ಡೆನ್ನವರ, ವಲಯದ ಮೇಲ್ವಿಚಾರಕಿ ಜ್ಯೋತಿ ಅಕ್ಕಿ ಹಾಗೂ ಪ್ರಶಿಕ್ಷಣಾಥರ್ಿಗಳು ಕಾರ್ಯಕ್ರಮದಲ್ಲಿ ಇದ್ದರು.

         ವಿದ್ಯಾ ಸರದಾರ ಸ್ವಾಗತಿಸಿದರು,  ದೀಪಾ ಡೊಳ್ಳಿ ನಿರೂಪಿಸಿದರು, ರೂಪಾ ಬನಹಟ್ಟಿ ವಂದಿಸಿದರು.