ಲೋಕದರ್ಶನ ವರದಿ
ಬೆಳಗಾವಿ 20-ಮಾತೃ ಭಾಷೆ ಕನ್ನಡ ಕುರಿತು ಅಸಡ್ಡೆ ಬೇಡ. ಕನ್ನಡ ಭಾಷೆಯಲ್ಲಿ ಕಲಿತ ಸರ್. ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ರಾವ್, ವೈದ್ಯರಾದ ಎಂ. ಸಿ. ಮೋದಿ ಹೀಗೆ ಹಲವಾರು ಮಹಿನಿಯರು ವಿಶ್ವವಿಖ್ಯಾತರಾದ ಉದಾಹರಣೆಗಳಿವೆ. ಮತೃ ಭಾಷೆಯ ಅಭಿಮಾನವಿರಲಿ ಅದರಂತೆ ಬೇರೆ ಬಾಷೆಗಳನ್ನೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಅಧಿಕಾರಿಗಳಾದ ಅರವಿಂದ ಹುನಗುಂದ ಮಕ್ಕಳನ್ನುದ್ದೇಶಿ ಮಾತನಾಡುತ್ತ ಮಕ್ಕಳಿಗೆ ತಿಳಿಸಿ ಹೇಳಿದರು.
ನಗರದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಖಾನಪೂರದ ಸ್ವಾಮಿ ವಿವೇಕಾನಂದ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ "ಮಕ್ಕಳಿಗಾಗಿ ಕನ್ನಡ ನಿಬಂಧ ಸ್ಪಧರ್ೆ ಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರವಿಂದ ಹುನಗುಂದ ಮೇಲಿನಂತೆ ಅಭಿಪ್ರಾಯ
ಪಟ್ಟರು.
ಬಾಷಾ ಬೇಧದವೆಂಬುದ ಬೇಡ. ಮರಾಠಿ ಭಾಷೆಯಲ್ಲಿರುವ ಅಕ್ಕ, ಅಣ್ಣಾ ಮುಂತಾದ ಶಬ್ಧಗಳು ಕನ್ನಡ ಭಾಷೆಯಿಂದ ಬಂದವುಗಳು. ಹೀಗೆ ಭಾಷೆ ಭಾಷೆಗಳ ಮಧ್ಯ ಸಾಮರಸ್ಯ ಬೆಳೆಸುವ ಕಾರ್ಯ ನಾವಿಂದು ಮಾಡೋಣವೆಂದು ಅವರು
ಹೇಳಿದರು.
ವಿ.ಎಮ್. ಬನೋಳಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದ ಇಂಗ್ಲೀಷ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಘಾಟಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ನಿರಜಾ ಗಣಾಚಾರಿ ಹಾಗೂ ಅನಂತ ಗೋಣಬಾಳ ಉಪಸ್ಥಿತರಿದ್ದರು.