ಘಟಪ್ರಭಾ: 'ಯುವಕರು ಸಮಾಜದ ಒಳತಿಗಾಗಿ ಶ್ರಮಿಸಬೇಕು'

ಲೋಕದರ್ಶನ ವರದಿ

ಘಟಪ್ರಭಾ 01: ಸಮೀಪದ ನಂದಗಾವ-ಸಾವಳಗಿ ಗ್ರಾಮದಲ್ಲಿ ಕನರ್ಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕವನ್ನು ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಶಿ ದಿ.30ರಂದು ಉದ್ಘಾಟಿಸಿದರು. 

ಸಂಘಟನೆಯ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ದುಷ್ಚಟಗಳಿಗೆ ಬಲಿಯಾಗದೆ ಸಮಾಜದ ಒಳತಿಗಾಗಿ ಶ್ರಮಿಸಬೇಕು. ಸಂಘಟನೆಯ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತ ಕನ್ನಡ ನಾಡು ನುಡಿಯ ರಕ್ಷಣೆಗೆ ಕಂಕಣಭದ್ಧರಾಗಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಜಿಲ್ಲಾ ಮುಖಂಡರಾದ ಭರಮಣ್ಣಾ ಗಾಡಿವಡ್ಡರ, ಗೋಕಾಕ ತಾಲೂಕಾ ಅಧ್ಯಕ್ಷ ದಸ್ತಗೀರ ಜಮಾದಾರ, ಮೂಡಲಗಿ ತಾಲೂಕಾ ಅಧ್ಯಕ್ಷ ಸಿದ್ರಾಮ ದೇವರಮನಿ, ಭಿಮಪ್ಪಾ ದೊಡಮನಿ, ವಿಠ್ಠಲ ಕುಂಬಾರ, ರಮೇಶ ಗುಂತಕಲ, ಭೈರು ಹಿಡದೋಗಿ, ಬಾಳವ್ವಾ ಹಿಡದೋಗಿ, ಗ್ರಾ.ಪಂ ಉಪಾಧ್ಯಕ್ಷ ಕಸ್ತೂರಿ ಕರಿಗಾರ, ದರೆಪ್ಪಾ ಮಗದುಮ, ಶಿವನಗೌಡಾ ಪಾಟೀಲ, ಮಲ್ಲಿಕಾಜರ್ುನ ತುಕ್ಕಾನಟ್ಟಿ, ಸತ್ಯಪ್ಪಾ ಕುಂಬಾರ, ರಾಜು ಪಾಟೀಲ, ತಾ.ಪಂ ಸದಸ್ಯ ಚಿದಾನಂದ ಶಿರಗಾಂವಿ, ಮಾರುತಿ ನಾಯಿಕ, ಪವಾಡಿ ಹಿರೇಮಠ  ಭೀಮಗೌಡ ಪಾಟೀಲ, ರಾಮಗೌಡಾ ಪಾಟೀಲ, ಸಂತೋಷ ಕುಂಬಾರ, ಬಾಲಾಜಿ ಸಾವಳಗಿ, ಮಲ್ಲಿಕಾಜರ್ುನ ಪಾಟೀಲ, ಯಲ್ಲಗೌಡ ಪಾಟೀಲ, ರಮೇಶ ಬೆಳವಿ, ಭರಮಪ್ಪಾ ಗೋದಿ, ವಿನಾಯಕ ನಾಯಿಕ ಮಲ್ಲಪ್ಪಾ ಬೆಳವಿ ಸೇರಿದಂತೆ ಅನೇಕರು ಇದ್ದರು.