'ಕಲಾತ್ಮಕ ಜ್ಞಾನ ಹೊಂದಿ ಜನರಿಗೆ ಹೊಸ ವಿಷಯ ತಿಳಿಸಬೇಕು'

ಲೋಕದರ್ಶನ ವರದಿ

ಚಿಕ್ಕೋಡಿ 20: ಬಿಬಿಎ ವಿದ್ಯಾಥರ್ಿಗಳು ವಿಶೇಷ ಕಲಾತ್ಮಕ ಜ್ಞಾನವನ್ನು ಹೊಂದಿ ಮಾರುಕಟ್ಟೆಯಲ್ಲಿ ತನ್ನದೇಯಾದ ಚಾಪು ಮೂಡಿಸಿಕೊಂಡು ಜನರಿಗೆ ಹೊಸ ಹೊಸ ವಿಷಯಗಳನ್ನು ತಿಳಿಸಬೇಕು ಎಂದು ಉಪನ್ಯಾಸಕ ಎಸ್.ಐ.ಅಫರಾಜ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ಲೇಷಣಾ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ಸ್ಪಧರ್ೆಗಳಲ್ಲಿ ವಿದ್ಯಾಥರ್ಿಗಳು ತನ್ನ ಜ್ಞಾನವನ್ನು ವ್ಯಕ್ತಪಡಿಸುವುದರ ಜೋತೆಗೆ ಇತರರ ಜ್ಞಾನವನ್ನು ಕೂಡ ಅಳವಡಿಸಿಕೋಳ್ಳಬಹುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಸಂದೀಪ ಕುಡಚೆ ಮಾತನಾಡಿ, ವಿಶ್ಲೇಷಣಾ 2020 ಪ್ರಕರಗಳ ಅಧ್ಯಯನ ಮತ್ತು ವಿಶ್ಲೇಷಣಾ ಸ್ಪಧರ್ೆಯು "ಬಿಬಿಎ" ಪದವಿಯ ವಿದ್ಯಾಥರ್ಿಗಳಿಗೆ ತಮ್ಮ ವೃತಿಪರ ಜೀವನದಲ್ಲಿ ಮುಂಬರುವಂತಹ ಬೇರೆ ಬೇರೆ ಪ್ರಕರಣಗಳ ವ್ಯವಸ್ಥಿತವಾದ ಅಧ್ಯಯನ ಹಾಗೂ ನಿರ್ವಹಣೆಯ ಸಾಮಥ್ರ್ಯವನ್ನು ಬೆಳಸಿಕೊಳ್ಳಲು ಇಂತಹ ಕಾರ್ಯಗಳು ಮಾರ್ಗದರ್ಶಕವಾಗಿವೆ ಎಂದರು. ಸಚಿನ ಗಾಟಗೆ ಸ್ವಾಗತಿಸಿದರು. ಭಾವನಾ ನಾಯ್ಕ ಮಾತನಾಡಿದರು.