‘ಆಧ್ಯಾತ್ಮಿಕ ಸಂಪತ್ತಿನಿಂದಲೇ ಶಾಂತಿ ನೆಮ್ಮದಿ’ ;ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಪ್ರವಚನ ಆರಂಭ

‘ಆಧ್ಯಾತ್ಮಿಕ ಸಂಪತ್ತಿನಿಂದಲೇ ಶಾಂತಿ ನೆಮ್ಮದಿ’ ;ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಪ್ರವಚನ ಆರಂಭ 'Peace and tranquility come from spiritual wealth'; Mythological discourse begins as part of Hirema

ಧಾರವಾಡ 10 : ಲೌಕಿಕ ಸಂಪತ್ತಿನ ಗಳಿಕೆಯಿಂದ ಆ ಕ್ಷಣಕ್ಕೆ ಸಂತಸ ತುಂಬಿದರೂ ಅದು ಶಾಶ್ವತವಾಗಿ ಉಳಿಯುವದಿಲ್ಲ; ಇಲ್ಲಿ ದ್ವಂದ್ವ-ಅಶಾ0ತಿಯೂ ಕಾಡಬಹುದು. ಆದರೆ ಆಧ್ಯಾತ್ಮಿಕ ಸಂಪತ್ತು ಶಾಶ್ವತವಾಗಿ ನಮ್ಮೊಳಗೆ ಉಳಿದು ಎಲ್ಲ ದ್ವಂದ್ವ-ಗೊ0ದಲಗಳನ್ನು ಅಳಿಸುತ್ತದೆ. ಮನುಕುಲಕ್ಕೆ ಆಧ್ಯಾತ್ಮಿಕ ಸಂಪತ್ತಿನಿ0ದಲೇ ಶಾಂತಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ನುಡಿದರು.  ಅವರು ತಮ್ಮ ಶ್ರೀಮಠದ 2026ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 15 ದಿನಗಳ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ ಸರಣಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. 

 ಕಠೋಪ ನಿಷತ್ತು ವಿವರಿಸುವಂತೆ ಮನುಕುಲಕ್ಕೆ ಅತೀ ಅಗತ್ಯವಾಗಿರುವುದು ಕುಡಿಯಲು ನೀರು, ಹಸಿವು ಹಿಂಗಿಸಲು ಅನ್ನ, ಜೊತೆಗೆ ಮೌಲ್ಯ ತುಂಬಿದ ಮಾತುಗಳು. ಎಷ್ಟೇ ದೊಡ್ಡ ಆಗರ್ಭ ಶ್ರೀಮಂತಿಕೆ ಇದ್ದರೂ ಸಹ ಹಣವನ್ನು, ಭಂಗಾರವನ್ನು ಇಲ್ಲವೇ ವಜ್ರ-ವೈಢೂರ್ಯಗಳನ್ನು ತಿಂದು ಬದುಕಲು ಸಾಧ್ಯವಾಗುವದಿಲ್ಲ ಎಂದರು.  ಪುರಾಣ ಪ್ರವಚನ ಉದ್ಘಾಟಿಸಿದ ಗುಡಗುಂಟಿ ಇನ್ಫಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಗುಡಗುಂಟಿಮಠ ಮಾತನಾಡಿ, ಎಲ್ಲಾ ಧರ್ಮ ಸಿದ್ಧಾಂತಗಳೂ ಮೋಕ್ಷವನ್ನು ಕೇಂದ್ರೀಕರಿಸಿಯೇ ತಮ್ಮ ತತ್ವಗಳನ್ನು ಬಲವಾಗಿ ಪ್ರತಿಪಾದಿಸಿವೆ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಇಷ್ಟಲಿಂಗದ ಅರ್ಚನೆ-ಅನುಸಂಧಾನದ ಮೂಲಕ ಮೋಕ್ಷ ಸಂಪಾದನೆ ಸಾಧಿಸಬೇಕೆಂದು ನಿಖರವಾಗಿ ತಿಳಿಸಲಾಗಿದೆ.  

ತಾವು ವ್ಯಾಸಂಗಕ್ಕಾಗಿ ಅಮೇರಿಕೆಯಲ್ಲಿದ್ದಾಗಲೂ ಸಹ ಶಿವಾಚಾರ್ಯ ಶ್ರೀಗಳಿಂದ ಪಡೆದ ದೀಕ್ಷೆಯಲ್ಲಿ ಕರುಣಿಸಿದ ಇಷ್ಟಲಿಂಗ ಪೂಜೆಯನ್ನು ನಿಲ್ಲಿಸದೇ ಭಕ್ತಿಯ ಬದ್ಧತೆಯಲ್ಲಿ ಮಾಡಿದ್ದರಿಂದ ವ್ಯಾಸಂಗವು ಫಲಪ್ರದವಾಗಿ ಯು.ಎಸ್‌.ಎ. ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆಯಲು ಸಆಧ್ಯವಾಯಿತು ಎಂದರು.  ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಪುರಾಣ ಪ್ರವಚನ ನೀಡಲಿರುವ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ವ್ಹಿ. ಬಿ. ಕೆಂಚನಗೌಡರ, ಬಿ.ಸಿ.ಕೊಳ್ಳಿ, ಚಂಬಣ್ಣ ಉಂಡೋಡಿ, ಶಿವಾನಂದ ತಡಕೋಡ, ಶಿವಪ್ಪ ಹೂಲಿ, ಗೂಳಪ್ಪ ಮೇಟಿ, ಈರಣ್ಣ ದೊಡವಾಡ, ಚಂದ್ರು ಶೆಟ್ಟರ, ಉಮೇಶ ಶಿರಕೋಳ, ಶಿವಪ್ಪ ಪೂಜಾರ, ಬಸವರಾಜ ಉಗರಗೋಳ, ಸೋಮಲಿಂಗಶಾಸ್ತ್ರೀ ಗುಡ್ಡದಮಠ ಇದ್ದರು.ಗದಗ ಶ್ರೀವೀರೇಶ್ವರ ಪುಣ್ಯಾಶ್ರಮದ ಹಿಂದೂಸ್ತಾನಿ ಗಾಯಕ ವೀರೇಶಕುಮಾರ ಮಳಲಿ ಅವರ ಭಕ್ತಿಸಂಗೀತಕ್ಕೆ ಮಲ್ಲಿಕಾರ್ಜುನ ಕೆರಕನಹಳ್ಳಿ ತಬಲಾಸಾಥ ನೀಡಿದರು. ದಾಸೋಹ ಸೇವೆಯಲ್ಲಿ ಭಕ್ತಗಣಕ್ಕೆ ಅನ್ನಸಂತರೆ​‍್ಣ ಜರುಗಿತು.