ಕಡಬಿ: 'ವಿದ್ಯೆ ನೀಡಿದ ಗುರುಗಳನ್ನು ಪ್ರೀತಿಸಿ, ಗೌರವದಿಂದ ಕಾಣಿರಿ'

ಲೋಕದರ್ಶನ ವರದಿ

ಕಡಬಿ 04: ವಿದ್ಯಾಥರ್ಿಗಳು ಧರ್ಮದ ತಳಹದಿಯ ಮೇಲೆ ಅಧ್ಯಯನ ಮಾಡಿ ತಂದೆ, ತಾಯಿ, ಗುರುಗಳು, ಹಾಗೂ ಸಮಾಜ ಇವುಗಳನ್ನು ಪ್ರೀತಿಸಿ, ಗೌರವಿಸಿ ಅಧ್ಯಯನದಲ್ಲಿ ವಿದ್ಯಾಥರ್ಿಗಳು ತೊಡಗುವುದು ಅವಶ್ಯವಿದೆ. ಇಂದಿನ ವಿದ್ಯಾಥರ್ಿಗಳು ತಾಂತ್ರಿಕತೆ ಬದುಕಿನಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ನಿಜವಾದ ಜೀವನವನ್ನು ಆಸ್ವಾದಿಸುವದನ್ನು ಮರೆತು ವಾಮಮಾರ್ಗದಲ್ಲಿ ಅಧ್ಯಯನದಲ್ಲಿ ತೊಡಗುತಿದ್ದಾರೆ. ತಮ್ಮ ನಿಜವಾದ ಬದುಕಿನ ಚಿಂತನೆಯ ಶಿಕ್ಷಣವನ್ನು ಪಡೆದು ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದು ಕಡಬಿಯಿಂದ ದುರದುಂಡಿ ಶಾಲೆಗೆ ವಗರ್ಾವಣೆಗೊಂಡ ಶಿಕ್ಷಕಿ ದ್ರಾಕ್ಷಾಯಣಿ ಎಸ್ ಕೋಲಕಾರ ವಿದ್ಯಾಥರ್ಿಗಳಿಗೆ ಕರೆ ನೀಡಿದರು.

ಸಂದರ್ಭದಲ್ಲಿ ಶಾಲೆಯ ಪ್ರಧಾನಗುರು ಮಡಿವಾಳಪ್ಪ ಮಾದಿಗರ, ಸರಕಾರಿ ನೌಕರರ ಸಂಘದ ನಿದರ್ೇಶಕ ಎಸ್ ಡಿ ಖನ್ನಿನಾಯ್ಕರ, ಬಿ ಎಸ್ ಗಾಣಗಿ, ಪಿ ಆರ್ ರಾಯಪ್ಪಗೋಳ, ಸಿ ಎಂ ಹೊಸೂರ, ಎಂ ಆಯ್ ಚನ್ನಿನಾಯ್ಕರ, ಎನ್ ಆರ್ ಹೆಬ್ಬಳ್ಳಿ, ಲಲಿತಾ ನಾಯಿಕೊಡಿ, ಭಾರತಿ ಢವಳಿ, ಎಂ ಎಸ್ ರಾವುತನವರ, ಜೆ ಎಸ್ ಹಿರೇಮಠ, ವಿ ಬಿ ಢವಳಿ, ವಿ ಆಯ್ ಶೀಲವಂತರ, ಎಸ್ ಎಸ್ ಭೀಮನಗೌಡರ, ಮತ್ತು ಎಸ್ಡಿಎಂಸಿ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ವಿದ್ಯಾಥರ್ಿಗಳು ಇದ್ದರು.