ಲೋಕದರ್ಶನ ವರದಿ
ಗೋಕಾಕ 04: ಗೋಕಾವಿ ನಾಡು ಸಾಹಿತ್ಯ ಸಂಗೀತ ಹಾಗೂ ರಾಜಕಿಯ ಕ್ಷೇತ್ರಕ್ಕೆ ಹೆಸರಾದಂತೆ ಈ ನಾಡಿನ ಚಿತ್ರಕಲೆಯು ಹಾಗೂ ಪ್ರತಿಭೆಗಳು ರಾಷ್ಟ್ರಾದ್ಯಂತ ಹೆಸರುಗಳಿಸಬೇಕಿದೆ ಆ ಮೂಲಕ ಗೋಕಾವಿಯ ಚಿತ್ರಕಲೆ ಇತಿಹಾಸದಲ್ಲಿ ಉಳಿಯಲಿ ಎಂದು ಹಿ ಡ್ಯಾಂನ ದಿ ಕನರ್ಾಟಕ ರೂರಲ ಎಜುಕೇಶನ್ ಸೊಸೈಟಿ ಚೇರಮನ್ ಬಸವರಾಜ ಕಡಕಬಾವಿ ಅಭಿಪ್ರಾಯ ಪಟರು.
ಅವರು ಸ್ಥಳೀಯ ಬಸವನಗರ ದಲ್ಲಿಯ ಜಾನಪದ ತಜ್ಙ ಡಾ. ನಿಂಗಣ್ಣ ಸಣ್ಣಕ್ಕಿ ಸಭಾ ಭವನದಲ್ಲಿ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ 2019 ರ ವಣರ್ೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನರ್ಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಡಾ. ಸುಭಾಷ ಕಮ್ಮಾರ 2019 ವಣರ್ೋತ್ಸವ ಉದ್ಘಾಟನ ಪರ ಮಾತನಾಡುತ್ತಾ ಜಾಗತೀಕರಣದ ಸಂದರ್ಭದಲ್ಲಿ ದೇಶ ಮುನ್ನಡೆಯಲು ತಂತ್ರಜ್ಞಾನ ಅವಶ್ಯವಾಗಿದೆ. ಇಂಥ ವೈಜ್ಞಾಣಿಕ ಬೆಳವಣಿಗೆಯಂತೆ ಲಲಿತಕಲೆಗಳ ಬೆಳವಣಿಗೆಯೂ ಆಗಬೇಕಿದೆ. ಎನ್ನುತಾ ದೇಶೀಯ ಸಂಸ್ಕೃತಿಯ ಪ್ರತೀಕವಾದ ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯಗಳ, ಉಪಾಸನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಇದು ಮನುಷ್ಯ ಆರೋಗ್ಯಕ್ಕೆ ಪೂರಕವಾಗಿದೆ ಎಂದರು.
ಸಾನಿದ್ಯ ವಹಿಸಿದ ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಜಿ, ಕಲೆ, ತಪಸ್ಸಿದ್ದಂತೆ, ಪರಿಶ್ರಮವಿಲ್ಲದೆ ಸಿದ್ದಿಯಾಗಲಾರದೆಂದು ಆಶೀರ್ವಚನ ನೀಡಿದರು. ಸಂಸ್ಥೆಯ ಚೇರಮನ್ ಬಸವರಾಜ ಕಡಕಬಾವಿ ಅದ್ಯಕ್ಷೀಯ ನುಡಿಯಾಡಿದರು. ಬೆಂಗಳೂರಿನ ಎ. ಎಸ್. ಕಂಬಾರ, ಗೋಕಾಕದ ಮೋನಿಕಾ ಹಲವಾಯಿ ಗೆ "ಗೋಕಾವಿ ವರ್ಣಸಿರಿ ಪ್ರಶಸ್ತಿ" ಪ್ರೌಡಶಾಲೆ ಹಾಗೂ ಪ್ರಾಥಮಿಕ ಶಾಲಾ ಪ್ರತಿಭಾವಂತ ಮಕ್ಕಳಿಗೆ "ಅರುಳು ರೇಖೆ ಪುರಸ್ಕಾರ" ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಕಲಾವಿದ್ಯಾಥರ್ಿಗಳ ಕ್ಯಾಟಲಾಗ ಬಿಡುಗಡೆ ಮಾಡಿದರು. ಹಿರಿಯ ಕಲಾವಿದರಾದ ಶಂಕರ ಮುಂಗರವಾಡಿ ಜಿ. ಎ. ಪತ್ತಾರ ಕನ್ನಡ ಜಾನಪದ ಪರಿಷತ್ತು ಅದ್ಯಕ್ಷ ಮಲ್ಲಿಕಾಜರ್ುನ ಈಟಿ ಜಾನಪದ ತಜ್ಞ ಡಾ. ನಿಂಗಣ್ಣಾ ಸಣ್ಣಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಬಲದೇವ ಸಣ್ಣಕ್ಕಿ ವೇದಿಕೆ ಮೇಲಿದ್ದರು.
ಪ್ರಾಚಾರ್ಯರು ಜಯಾನಂದ ಮಾದರ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು ಅದ್ಯಾಪಕಿ ಮಲ್ಲಮ್ಮ ದಳವಾಯಿ. ನಿರೂಪಿಸಿದರು. ಬಾಳಗೌಡ ಪಾಟೀಲ ವಂದಿಸಿದರು.