'ಜನಸಂಖ್ಯೆ ಹೆಚ್ಚಳ ಜಗತ್ತಿನ ತುತರ್ು ಸಮಸ್ಯೆ'

ಕೋಲ್ಕತಾ: ಹೆಚ್ಚುತ್ತಿರುವ ಜನಸಂಖ್ಯೆಯು ವಿಶ್ವದ ಪ್ರಮುಖ ಸಮಸ್ಯೆಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜ್  ಕಳವಳ  ವ್ಯಕ್ತಪಡಿಸಿದ್ದಾರೆ.  ವಿಶ್ವ ಜನಸಂಖ್ಯಾ ದಿನದಂದು ಈ ಕುರಿತು ಟ್ವೀಟ್ ಮಾಡಿರುವ ಅವರು ಇದು ನಿಜಕ್ಕೂ  ಪ್ರಪಂಚ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.       ಮಮತಾ ಬ್ಯಾನಜರ್ಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡಿ, ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.         ಜನಸಂಖ್ಯಾ ಸ್ಫೋಟ ತುತರ್ು ಸಮಸ್ಯೆಯಾಗಿದ್ದು ಈ ನಿಟ್ಟಿನಲ್ಲಿ ಸಮಸ್ಯೆ ನಿವಾರಣೆಗೆ ಗಮನವನ್ನು ಕೇಂದ್ರೀಕರಿಸಲು ಈ ದಿನಾಚರಣೆ ಪ್ರಯತ್ನಿಸುತ್ತದೆ. ಜನಸಂಖ್ಯೆಯ ಸಮಸ್ಯೆಗಳ ನಿವಾರಣೆಯ ಪ್ರಾಮುಖ್ಯತೆಯನ್ನು ಅರಿತು ವಿಶ್ವಸಂಸ್ಥೆ ಮೊದಲಿಗೆ ಜುಲೈ 11, 1987 ರಂದು ಈ ದಿನ ಆಚರಿಸಿತು.   

  1994 ರ ಜನಸಂಖ್ಯೆ ಮತ್ತು ಅಭಿವೃದ್ಧಿಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆಯಾದ ಇನ್ನೂ ಪರಿಹಾರವಾಗದ ಗುರಿಗಳ ಈಡೇರಿಕೆ ಈ ಬಾರಿಯ ಜನಸಂಖ್ಯಾ ದಿನ ಕರೆ ನೀಡಿದೆ.  ವಿಶ್ವ ಜನಸಂಖ್ಯಾ ದಿನವನ್ನು ವಿವಿಧ ದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.