‘ಶಿವದಾಸಿಮಯ್ಯನವರ ತತ್ವಾದರ್ಶನಗಳನ್ನು ಅಳವಡಿಸಿಕೊಳ್ಳಿ’

‘Adopt the philosophies of Shivadasimayya’

ಲೋಕದರ್ಶನ ವರದಿ 

‘ಶಿವದಾಸಿಮಯ್ಯನವರ ತತ್ವಾದರ್ಶನಗಳನ್ನು ಅಳವಡಿಸಿಕೊಳ್ಳಿ’ 

ಮುಧೋಳ 25: ಶಿವಸಿಂಪಿ ಸಮಾಜವು ಬಟ್ಟೆಯನ್ನು ಹೊಲಿಯುವ ಕಾಯಕವನ್ನು ಮಾಡುವದರ ಜೊತೆಗೆ ಸಮಾಜದಲ್ಲಿ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾ-್ಯಘನೀಯವಾದದು ಎಂದು ಕುಂದರಗಿ ಸುರಗಿರಿ ಬೆಟ್ಟದ ಸುರಗಿರಿ ಶಕ್ತಿ ಪೀಠದ ಧರ್ಮಾಧಿಕಾರಿ ಲಕ್ಷ-್ಮಣ ಶರಣರು ಹೇಳಿದರು. 

ಭಾನುವಾರ ಸ್ಥಳೀಯ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಮುಧೋಳ ತಾಲೂಕಾ ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘ ಇವರ ಆಶ್ರಯದಲ್ಲಿ ಕುಲಗುರು ಜಗದಾಚಾರ್ಯ ಶಿವದಾಸಿಮಯ್ಯನವರ ಜಯಂತ್ಯೋತ್ಸವ ಹಾಗೂ ಶಿವದಾಸಿಮಯ್ಯ ಪತ್ತಿನ ಸೌಹಾರ್ಧ ಸಹಕಾರಿ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಶಿವಸಿಂಪಿ ಸಮಾಜ ಇತರೆ ಸಮಾಜಕ್ಕಿಂತ ಚಿಕ್ಕ ಸಮಾಜವಾದರೂ, ಚೊಕ್ಕ ಮತ್ತು ಸುಂದರ ಸಮಾಜ, ಶಿವಸಿಂಪಿ ಸಮಾಜ, ಕೊಡುಗೆ ನೀಡುವ ಸಮಾಜವೇ ಹೊರತು, ಬೇಡುವ ಸಮಾಜವಲ್ಲ, ಸಂಸ್ಕೃತಿ, ಆಚಾರ, ವಿಚಾರ, ಶಿಸ್ತುಬದ್ಧ ಜೀವನವನ್ನು ನಡೆಸುವ ಶಿವಸಿಂಪಿ ಸಮಾಜ ಬಾಂಧವರು ಶಿವದಾಸಿಮಯ್ಯನವರ ತತ್ವಾದರ್ಶನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ವನ್ನು ಬೆಸೆಯುವಂತ ಕೆಲಸ ಮಾಡುತ್ತಾ ಬಂದಿದೆ, ಶಿವಸಿಂಪಿ ಸಮಾಜವು ಸಾಮಾಜಿಕ ಸಂಘಟನೆ ಜತೆಗೆ ಸೈದ್ಧಾಂತಿಕ ಪರಿವರ್ತನೆ ಆಗಬೇಕೆಂದು ಹೇಳಿದರು. 


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುನ್ನೂರಿನ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಶಂಕರ ಲಕ್ಷಿ-್ಮಕಾಂತ ಅರಬಳ್ಳಿ ಅವರು ಮಾತನಾಡಿ ಶಿವದಾಸಿಮಯ್ಯನವರ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕೆಂದು ಹೇಳಿ, ಓದಾರ್ಯ ಮತ್ತು ಆದರ್ಶ ಕಟ್ಟಿಕೊಂಡಿದ್ದ ದಾರ್ಶನಿಕ ಶಿವದಾಸಿಮಯ್ಯನವರು ಒಂದು ವೇದಿಕೆಗೆ ಸೀಮಿತ ಆಗಬಾರದು, ಯಾರು ಆದರ್ಶ ಕಟ್ಟಿಕೊಂಡಿರುತ್ತಾರೊ ಅವರು ಈ ಪೃಥ್ವಿ ಇರುವವರೆಗೂ ಇರುತ್ತಾರೆ, ನಮ್ಮ ಒಳಗು ಮತ್ತು ನಮ್ಮ ಹೊರಗು ಶಿವದಾಸಿಮಯ್ಯನವರ ತಾತ್ವಿಕತೆಗಳು ಇರಬೇಕು, ಅವರ ಚಿಂತನೆ ಅಳವಡಿಸಿಕೊಂಡರೆ ಸಮಾಜ ಮತ್ತಷ್ಟು ಪ್ರಬುದ್ಧವಾಗಿ ಬೆಳೆಯುತ್ತದೆ, ಶಿಕ್ಷಣ, ಸೌಲಭ್ಯಗಳಿಂದ ವಂಚಿತಗೊಂಡು ತೊಂದರೆ ಗೀಡಾಗಿರುವ ಶಿವಸಿಂಪಿ ಸಮಾಜ ಸಂಘಟಿತಗೊಂಡು ಗುರುವಿನ ಮಾರ್ಗದರ್ಶನದಲ್ಲಿ ಗುರಿಯತ್ತ ಮುನ್ನುಗ್ಗುವಂತಾಗಬೇಕೆಂದರು. 


ಶಸ್ತ್ರ ಚಿಕಿತ್ಸಕ ಹಾಗೂ ಸಾಹಿತಿ ಡಾ.ಶಿವಾನಂದ ಮ. ಕುಬಸದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲರೂ ಒಂದುಗೂಡಿ ಸಮಾಜವನ್ನು ಕಟ್ಟುವಂತಾಗಬೇಕು, ಸಮಾಜವನ್ನು ತಾವು ಕಟ್ಟಿ ಬೆಳಸಿದರೆ, ಸಮಾಜ ತಮ್ಮನ್ನು ಬೆಳಸುತ್ತಾ ಹೋಗುತ್ತದೆ, ಸಮಾಜದ ಬೆಳವಣಿಗೆಗಾಗಿ ತಾವುಗಳು ಎಲ್ಲದಕ್ಕೂ ಸಿದ್ದರಾಗಿ ಬದ್ದರಾಗಿ ಇರಬೇಕೆಂದರು. 

ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪ್ರಕಾಶ ಈ. ಗಂಗಣ್ಣವರ ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜ ಬಾಂಧವರು ತೆಗೆದುಕೊಳ್ಳುವ ಕೆಲಸ ಕಾರ್ಯಗಳಿಗೆ ತಾವು ಬದ್ದರಾಗಿ ನಡೆದುಕೊಳ್ಳುತ್ತೇವೆ, ಸಮಾಜದ ಕ್ಷೇಮಾಭಿವೃದ್ದಿಗಾಗಿ ಹಗಲಿರುಳು ಶ್ರಮಿಸುವದಾಗಿ ತಿಳಿಸಿದರು. ಶಿವದಾಸಿಮಯ್ಯ ಪತ್ತಿನ ಸೌಹಾರ್ಧ ಸಹಕಾರಿ ನಿ., ಇದರ ಉಪಾಧ್ಯಕ್ಷ ಸುರೇಶ ಶಂ. ಮುನವಳ್ಳಿ ಬ್ಯಾಂಕಿನ ಪಕ್ಷಿನೋಟ ಕುರಿತು ವರದಿ ವಾಚನ ಮಾಡಿದರು. 

ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷೆ ಕಮಲಕ್ಕ ಶಿ. ಕುಬಸದ, ಶಿವಸಿಂಪಿ ಸಮಾಜ ಕ್ಷೇಮಾಭಿವೃದ್ದಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಆರ್‌. ಬದಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು. 


ಶಿವಸಿಂಪಿ ಸಮಾಜದ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ಮಹಾದೇವಪ್ಪಬಿ. ಅಬ್ಬಿಗೇರಿ ಸ್ವಾಗತಿಸಿದರು, ಶಿಲ್ಪಾ ಈ. ಕಡಿಬಾಗಿಲ ಅತಿಥಿಗಳನ್ನು ಪರಿಚಯಿಸಿದರು, ವಿಜಯಲಕ್ಷಿ-್ಮ ಸು. ಮುನವಳ್ಳಿ ಮತ್ತು ಸುಜಾತಾ ವ್ಹಿ. ಮುನವಳ್ಳಿ ನಿರೂಪಿಸಿದರು.