ಎಲ್ಲರೂ ಹೃದಯವಂತರಾಗಿ ಬದುಕಬೇಕು : ಕಮಾಡೆಂಟ್ ಮೆಳ್ಳಾಗಟ್ಟಿ
Everyone should live with a heart: Commandant Mellagatti
ಶಿಗ್ಗಾವಿ 05 : ದೇಶದಲ್ಲಿ ಸೌಹಾರ್ದತೆ ನೆಲೆಸಬೇಕಾದರೆ ಎಲ್ಲರೂ ಹೃದಯವಂತರಾಗಿ ಬದುಕಬೇಕು ಎಂದು ಗಂಗೆಬಾವಿ ಕೆ.ಎಸ್.ಆರ್.ಪಿ 10 ನೇ ಪಡೆ ಕಮಾಡೆಂಟ್ ಎನ್ ಬಿ ಮೆಳ್ಳಾಗಟ್ಟಿ ಹೇಳಿದರು. ಪಟ್ಟಣದ ವಿರಕ್ತಮಠದ 33 ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ಜಾತಿಭೇದ, ಮೂಢನಂಬಿಕೆ, ಅನೇಕ ಮೌಡ್ಯಗಳು ಇದ್ದವು ಸಮಾಜದಲ್ಲಿರುವ ಅನೇಕ ಅಸಮಾನತೆಗಳನ್ನು ಹೋಗಲಾಡಿಸುವಲ್ಲಿ ಬಸವಣ್ಣವರಿಂದ ಕಲ್ಯಾಣ ಕ್ರಾಂತಿ ಪ್ರಾರಂಭವಾಯಿತು,ಸಂಸತ್ತು ವಿಶ್ವದಲ್ಲಿ ಮೊದಲಿಗೆ ರಚನೆಯಾಗಿದ್ದು ಕರ್ನಾಟಕದ ಅನುಭವ ಮಂಟಪದಲ್ಲಿರುವ ಕಾರಣ ಶರಣ ಸಂಸ್ಕೃತಿ ಬೆಳೆದು ಬಂದಿತು.
ಅಸಹನೆ ಹಾಗೂ ಅಸಹಕಾರ ಎನ್ನುವ ಕಾರಣ ಸಮಾಜದಲ್ಲಿ ದ್ವೇಷ ಮನೋಭಾವನೆ ಹುಟ್ಟಿ ಬಂದಿತು. ಇವೆಲ್ಲವುಗಳಿಗೆ ಕಾರಣ, ಶರಣ ಪರಂಪರೆ ಶ್ರೇಷ್ಠ ಪರಂಪರೆ ಏಕೆಂದರೆ ಸಂಸ್ಕಾರ, ಶಿಕ್ಷಣ, ದಾಸೋಹ, ಸಂಸ್ಕೃತಿ ಪ್ರಮುಖವಾಗಿದೆ ಎಂದರು. ಡಾ.ಎ.ಸಿ.ವಾಲಿ ಸದ್ಗುರು ಮಹಾರಾಜರು ಸದಮಲ ಜ್ಞಾನ ಕುರಿತು ಪ್ರವಚನ ನೀಡಿ ಮಾತನಾಡಿ, ಓಂ ನಮ: ಶಿವಾಯ ಎಂಬ ಪದದಲ್ಲಿ ಸದಮಲ ಜ್ಞಾನವಿದೆ ಇದರಿಂದ 18ನೇ ಶತಮಾನದಲ್ಲಿ ಇಡಿ ವಿಶ್ವದಲ್ಲಿ ಕ್ರಾಂತಿಯಾಯಿತು ಸಿದ್ದಾರೋಡರ ಇಡಿ ಜೀವನವೇ ಸಂಘರ್ಷದ ಜೀವನದಲ್ಲಿ ಕಳೆದು ಹೋಯಿತು. 18 ನೇ ಶತಮಾನದಲ್ಲಿ ಅನೇಕ ಸದಮಲ ಜ್ಞಾನಿಗಳು ಬಂದು ಹೋದರು.
ತಲೆಯ ಮೇಲೆ ಮಲ ಇಟ್ಟಿದ್ದಾರೆ ಆದರೆ ಒಳಗೆ ನಿರ್ಮಲವಾಗಿದೆ. ಪ್ರಾಂಜಲ ಮನಸ್ಸಿನವರು ಇದ್ದಾರೆ. ಜ್ಞಾನವಿದ್ದಾಗ ಎಲ್ಲರೂ ತೆಲೆಭಾಗತಾರೆ. ಬರಕೋಬೇಕು, ಕಲಕೋಬೇಕು, ನಡೋಕಬೇಕು, ಪಡೋಕಬೇಕು. ಎಲ್ಲವನ್ನು ತಿಳಿದವನು ಸದಮಲ ಜ್ಞಾನಿಗಳು ಎಂದರು. ಸಾನಿಧ್ಯವಹಿಸಿ ಸಂಗನಬಸವ ಮಹಾಸ್ವಾಮಿಗಳು ಹಾಗೂ ವಿರಕ್ತಮಠದ ಬಸವಲಿಂಗ ದೇವರು ಆರ್ಶಿವದಿಸಿದರು. ಸಂಗೀತ ಸೇವೆಯನ್ನ ಶಿದ್ದಲಿಂಗಪ್ಪ ನರೇಗಲ್ಲ್, ತಬಲಾ ಸಾಥ ಬಸವರಾಜ ವಂದಲಿ, ತತ್ವಪದ ಸೇವೆ ಬಸವರಾಜ ಶಿಗ್ಗಾವಿ, ಹೇಮಂತ ಭಜಂತ್ರಿ, ಪಕ್ಕಿರೇಶ ಕೊಂಡಾಯಿ, ಪ್ರೋ ಶರೀಫ ಮಾಕಪ್ಪನವರ ನೇರವೇರಿಸಿದರು. ಹನುಮರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖಣ್ಣ ನೀರಲಗಿ, ಹಡಪದ ಸಮಾಜ ತಾಲೂಕ ಅಧ್ಯಕ್ಷ ಮಂಜುನಾಥ ಕ್ಷೌರದ, ಪತ್ರಕರ್ತರಾದ ಸುಧಾಕರ ದೈವಜ್ಞ, ಬಸವರಾಜ ಹಡಪದ ಸೇರಿದಂತೆ ಭಕ್ತ ಸಮೂಹ ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ನಾಯ್ಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 