ಲೋಕದರ್ಶನ ವರದಿ
ಗಜೇಂದ್ರಗಡ : ತಾಲ್ಲೂಕು ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕಳ್ಳತನ ಆಗಿರುವ ಮೋಟಾರು ಸೈಕಲ್ಗಳನ್ನು ಕದ್ದು ಮಾರುತ್ತಿದ್ದ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪೋಲಿಸ ಠಾಣೆಯ ವ್ಯಾಪ್ತಿಗೆ ಬರುವ ಪುರ್ತಗೇರಿ ಕ್ರಾಸ್ ಬಳಿ ಶರಣಬಸಪ್ಪ (ಶರಣಪ್ಪ), ಅಲಿಯಾಸ್ ಕೆಂಪ್ಯಾ ತಂದೆ ಹನುಮಪ್ಪ ಹುಬ್ಬಳ್ಳಿ. 29ವಯಸ್ಸಿನ ಇತ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಬೈಯಾಪೂರ ಗ್ರಾಮದವರು ಆಗಿರುತ್ತಾರೆ ಎಂದು ತಿಳಿದು ಬಂದಿದ್ದು ಆರೋಪಿಯನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ವಶಪಡಿಸಲಾಗಿದೆ ಎಂದು ಗಜೇಂದ್ರಗಡ ಠಾಣೆಯ ಪಿ.ಎಸ್.ಐ ಗುರುಶಾಂತ ದಾಶ್ಯಾಳ ಹೇಳಿದರು.
ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಬೊಮ್ಮನಾಳ ಗ್ರಾಮದ ಶರಣಬಸಪ್ಪ ಹನಮಪ್ಪ ಹುಬ್ಬಳ್ಳಿ (29) ಬಂಧಿತ ಆರೋಪಿ. ರಾಯಚೂರು, ಕೊಪ್ಪಳ, ಗದಗ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕೈಚಳಕದಿಂದ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಕಾಲಕಾಲೇಶ್ವರ ಗ್ರಾಮದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದ ಪ್ರಕರಣವೊಂದರ ತನಿಖೆಯಲ್ಲಿ ತೊಡಗಿದ್ದ ಪೊಲೀಸರು ಜಾಡು ಹಿಡಿದು ಖಚಿತ ಮಾಹಿತಿ ಮೇರೆಗೆ ಸಮೀಪದ ಪೂರ್ತಗೇರಿ ವೃತ್ತದಲ್ಲಿ ಗುರುವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕದ್ದಿದ್ದ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. ಆರೋಪಿತನ ಬಳಿ ಸುಮಾರು 110000/- ರೂ ಮೌಲ್ಯದ (5) ಮೋಟಾರು ವಾಹನವಿದ್ದು ಅವುಗಳನ್ನು ಠಾಣೆಗೆ ತಂದಿಡಲಾಗಿದೆ.
ಒಟ್ಟು ಐದು ಮೋಟಾರು ವಾಹನಗಳು ಸಿಕ್ಕಿದ್ದು ಅವುಗಳಲ್ಲಿ ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆ ಗಜೇಂದ್ರಗಡ ನಗರಕ್ಕೆ ಸೇರಿದವುಗಳಾಗಿವೆ ಎಂದು ತಿಳಿಸಲಾಗಿದೆ. ಗದಗ ಜಿಲ್ಲೆಯ ಆರಕ್ಷಕ ಅಧೀಕ್ಷಕರಾದ ಎಸ್ ಎ ಪಾಟೀಲ, ಉಪಾಧೀಕ್ಷಕರು ನರಗುಂದ ಉಪ-ವಿಭಾಗ, ಸುನೀಲ್ ಸವಧಿ, ಸಿ ಪಿ ಐ ರೋಣ ವೃತ್ತ, ಸಿಬ್ಬಂದಿಗಳಾದ ಎಚ್ಎಲ್ ಭಜೇಂತ್ರಿ, ಎಎಸ್ಐ ಎಸ್ವಾಯ್ ತಳವಾರ, ಎಸ್ ವ್ಹಿ ಮಂತಾ, ಜೆಬಿ ಪೂಜಾರ, ಎಂಎಸ್ ಬಳ್ಳಾರಿ, ಸಿಎಸ್ ಹಾದಿಮನಿ, ಡಿ ಎಚ್ ಆಶೇಖಾನ, ಎನ್ ವೈ ವೆಂಕರೆಡ್ಡಿ, ಸಿಎಸ್ ಪಾಟೀಲ, ಎಂ ಎಲ್ ಲಮಾಣಿ, ಯಮನೂರಪ್ಪ ಮೇದಾರ ಇದ್ದರು.