ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾಮಾಜಿಕ ಲೆಕ್ಕಪರಿಶೋಧನಾ ಸಭೆ : ಮಾಹಿತಿ ನೀಡದೇ ಸಭೆ ಮಾಡುತ್ತಿರುವುದಕ್ಕೆ ಆಕ್ರೋಷ
ಹನುಮಸಾಗರ 07: ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯ ಬಗ್ಗೆ ಗ್ರಾಪಂ ಸದಸ್ಯರಿಗೆ ಆಗಲಿ ಸಾರ್ವಜನಿಕರಿಗೆ ಆಗಲಿ ಮಾಹಿತಿ ನೀಡದೇ ಸಭೆ ಮಾಡುತ್ತಿರುವುದಕ್ಕೆ ಆಕ್ರೋಷ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಭೆಯನ್ನು ಕೋರಂ ಭರ್ತಿ ಆಗಿಲ್ಲಾ ಎಂದು ಸಭೆಯನ್ನು ರದ್ದುಪಡಿಸಿ ಮುಂದುಡಲಾಯಿತು.
ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯ ಬಗ್ಗೆ ನಮಗೆ ಏಕೆ ಮಾಹಿತಿ ನೀಡಿಲ್ಲಾ, ಮಾಹಿತಿ ನೀಡಿದ್ದರೇ ಸಭೆಯಲ್ಲಿ ಗ್ರಾಮಸ್ಥರು ಏಕೆ ಬಂದಿಲ್ಲಾ ಈ ಬಗ್ಗೆ ಪಿಡಿಒ ಅವರನ್ನು ಕೇಳಿದರೇ ಈ ಸಭೆ ಬಗ್ಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿ ಅಲ್ಲಾ ಅದು ಸಾಮಾಜಿಕ ಲೆಕ್ಕಪರಿಶೋದನಾ ಸಮಿತಿಗೆ ಬಿಟ್ಟಿದ್ದು ಮತ್ತು ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೇ ಎಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿರಿ ಹೀಗೆ ಆದರೇ ಗ್ರಾಮ ಹೇಗೆ ಅಭಿವೃದ್ದಿಯಾಗುತ್ತದೆ ಎಂದು ಪಿಡಿಒ ದೇವೆಂದ್ರ ಕಮತರ ಅವರನ್ನು ತರಾಟೆ ತೆಗೆದುಕೊಂಡರು.
ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರಾದ ಶರಣರೆಡ್ಡಿ ಮಾತನಾಡಿ ಲೆಕ್ಕಪರೀಶೋದನಾ ಸಭೆಯ ಬಗ್ಗೆ ನಮ್ಮ ಸಿಬ್ಬಂದಿಗಳು ಮನೆಮನೆಗೆ ತೆರಳಿ ಮಾಹಿತಿಯನ್ನು ನೀಡಿರುತ್ತಾರೆ ಮತ್ತು ಸಭೆಯ ಬಗ್ಗೆ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡುವುದು ಪಿಡಿಒ ಅವರದ್ದಾಗಿರುತ್ತದೆ ಎಂದು ಹೇಳಿದರುಪಿಡಿಒ ದೇವೆಂದ್ರ ಕಮತರ ಮಾತನಾಡಿ ಸದಸ್ಯರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಸಭೆಯ ಬಗ್ಗೆ ಮುಂಚಿತವಾಗಿ ನೋಟಿಸಗಳನ್ನು ನೀಡಿ ಗಮನಕ್ಕೆ ತರಲಾಗಿದೆ ಮತ್ತು ಸಭೆಯು ಕೋರಂ ಭರ್ತಿಯಾಗದ ಕಾರಣ ಮುಂದುಡಲಾಗಿದೆ ಎಂದು ಹೇಳಿದರು.