ಮಲ್ಲಮ್ಮನ ಬೆಳವಡಿ 07: ಗ್ರಾಮದ ಹಿರಿಯರು ಹಾಗೂ ವೀರರಾಣಿ ಬೆಳವಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಸದಸ್ಯರು ಶಾಸಕರಾದ ಎಂ ಎಸ್ ಕೌಜಲಗಿ ಅವರಿಗೆ ಶೀಘ್ರದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ತಂದು ಶೀಘ್ರ ನೆರವೇರಿಸಬೇಕು ಹಾಗೂ ಫೆಬ್ರವರಿ 28ರಂದು ನಡೆಯುವ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕೆಂದು ಮತ್ತು ವೀರಾಣಿ ಬೆಳವಡಿ ಮಲ್ಲಮ್ಮ ಸರ್ಕಲದಲ್ಲಿ ಇರುವ ವೀರರಾಣಿ ಮಲ್ಲಮ್ಮ ಅಶ್ವರೋಡ ಮೂರ್ತಿಗೆ ಮೂರ್ತಿಗೆ ಲಿಫ್ಟ್ ಅಳವಡಿಕೆ ಮಾಡಬೇಕೆಂದು ಮಾನ್ಯ ಶಾಸಕರಲ್ಲಿ ಮನವಿಯನ್ನು ಅರ್ಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್ ಕಾರಿಮನಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೀರಣ್ಣ ಕರಿಕಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಬಿ ಜಿ ದೇಗಾವಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಹುಂಬಿ, ರಾಚಯ್ಯಸ್ವಾಮಿ ರೊಟ್ಟೆಯ್ಯನವರ ಮಠ, ಕಿತ್ತೂರು ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕಡಕೋಳ, ಪ್ರಕಾಶ್ ಬಳೆಗಾರ ಡಿ ವೈ ಗರಗದ, ಅರ್ಜುನ ಕೆಂಪಣ್ಣವರ, ಸುಭಾಷ್ ಗೋದಳ್ಳಿ, ಮಹಿಳಾ ಪ್ರತಿಷ್ಠಾನದ ಸವಿತಾ ಪಾಟೀಲ್, ಶಶಿಕಲಾ ಕರಿಕಟ್ಟಿ, ನೀಲವ್ವ ಕರಿಕಟ್ಟಿ, ಬಸವ ಗೋದಳ್ಳಿ ಇತರ ಸದಸ್ಯರು ಕೂಡಿ ಮನವಿಯನ್ನು ಅರ್ಿಸಿದರು. ಮನವಿಗೆ ಶಾಸಕರು ಸ್ಪಂದನೆಯನ್ನು ನೀಡಿದ್ದಾರೆ