ವಿಜಯಪರ: ರೈಲು ಉದ್ಘಾಟನಾ ಸಮಾರಂಭ

ಲೋಕದರ್ಶನ ವರದಿ

ವಿಜಯಪರ 22: ಬ್ರಾಡ್ಗೇಜ್ ಹೋರಾಟ ಸಮಿತಿವತಿಯಿಂದ ಇಂದು ನಗರದಲ್ಲಿ ವಿಜಯಪುರ ಯಶವಂತಪೂರ ಸ್ಪೇಶಲ್ ಡೇಲಿ ಎಕ್ಸಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ ರೇಲ್ವೆ ಸಚಿವ ಸುರೇಶ ಅಂಗಡಿ ಇವರಿಗೆ ಸಮಿತಿವತಿಯಿಂದ ರೈಲು ಸಂಖ್ಯೆ 06542 ವಿಜಯಪುರ ಯಶವಂತಪುರ ಈಗಿನ ವೇಳೆಯನ್ನು ಬದಲಾಯಿಸಿ ರಾತ್ರಿ 8 ಗಂಟೆಗೆ ಬಿಟ್ಟು ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಬೇಕು ಎಂದು ಮನವಿ ಸಲ್ಲಿಸಲಾಯಿತು.

ವಿಜಯಪುರ- ತಿರುಪತಿ ಹೊಸದಾದ ರೈಲನ್ನು ಮತ್ತು ಕನರ್ಾಟಕ ಎಕ್ಸಪ್ರೆಸ್ ರೈಲು ವಿಜಯಪುರ ಮಾರ್ಗವಾಗಿ ಓಡಿಸಲು ಮತ್ತು ಗದಗ ಮುಂಬೈ ರೈಲನ್ನು ದಿನಂಪ್ರತಿ ಓಡಿಸಲು ಸಚಿವರಿಗೆ ಮನವಿ ಸಲ್ಲಿಸಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ರೇಲ್ವೇ ಹೋರಾಟ ಸಮಿತಿಯ ಸಂಸ್ಥಾಪಕರಾದ ದಿ.ಡಾ.ವಿಶ್ವನಾಥ ಭಾವಿ ಸುಪುತ್ರ ರೇಲ್ವೆ ಬ್ರಾಡ್ಗೇಜ್ ಹೋರಾಟ ಸಮಿತಿಯ ಉಪಾಧ್ಯಕ್ಷ ಸತೀಶ ವಿಶ್ವನಾಥ ಭಾವಿ, ಈರಣ್ಣ ಅಳ್ಳಗಿ, ಸಾಗರ ಮೋಗ್ಲಿ, ಬಸಯ್ಯ ಎಮ್ಮಿಮಠ, ಆಕಾಶ ಕುಂಬಾರ, ಮಹೇಶ ಭಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.