ವಿಜಯಪುರ: ಹೋಂಡಾ ಕಂಪನಿ ನೂತನ ದ್ವಿಚಕ್ರ ವಾಹನ ಬಿಡುಗಡೆ

ಲೋಕದರ್ಶನ ವರದಿ

ವಿಜಯಪುರ 25: ಹೊಂಡಾ ಕಂಪನಿಯ ಮೊಟ್ಟ ಮೊದಲ ಬಿ.ಎಸ್-6 ಟೂ ವಿಲ್ಹರ್ ಆಕ್ಟಿವ್-125 ವಾಹನವನ್ನು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಪಾಟೀಲ್ ಶೋರುಂನಲ್ಲಿಂದು ಬಿಡುಗಡೆ ಮಾಡಿದರು.

ವಾಹನ ಬಿಡುಗಡೆ ಅಧಿಕ ಕ್ಷಮತೆ ಮತ್ತು ಅಧಿನ ಇಂಧನ ದಕ್ಷತೆ ಸಂಯೋಜನೆಯೊಂದಿಗೆ ನಿಶಬ್ದ ಸ್ಟಾರ್ಟ  ನೀಡುತ್ತದೆ. ಮತ್ತು ನಯವಾದ ಪರ್ಯಾವರ್ಣ ಸ್ನೇಹಿ ಇಂಧನ ಹೊಂದಿದ್ದು, ತನ್ನ ವರ್ಗದಲ್ಲಿ ಪ್ರಥಮ ಬಾರಿ ಪರಿಚಯಿಸಲ್ಪಡುತ್ತಿರುವ ವೈಶಿಷ್ಟತೆ ಹೊಂದಿದ ಇದು ಸಮಗ್ರ ಮೆಟಲ್ ಬಾಡಿ ಹೊಂದಿದೆ. ನಾಲ್ಕು ಕಲರ್ಗಳಲ್ಲಿ ಲಭ್ಯವಿರುತ್ತದೆ.

ಈ ಸಂದರ್ಭದಲ್ಲಿ ಪಾಟೀಲ್ ಹೊಂಡಾ ಮಾಲಿಕ, ವಿಪ ಸದಸ್ಯ ಸುನೀಲಗೌಡ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತ ಹಷರ್ಾ ಶೆಟ್ಟಿ, ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಸಂಜಯ ಶ್ರೀವಾಸ್ತವ, ಎಸ್.ಬಿ.ಐ ರಿಲೆಶನ್ಶಿಫ್ ಮ್ಯಾನೇಜರ್ ಸೌರವ ಶಿತಾಂಚು, ಉದ್ಯಮಿ ಅರುಣ ಮಾಚಪ್ಪನವರ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.