ಗದಗ 04: ಕ್ಷಯ ರೋಗ ಪತ್ತೆ ಚಿಕಿತ್ಸೆ ಆಂದೋಲನವನ್ನು 2ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದ್ದು ಮುಂಡರಗಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರ ಹಾಗೂ ಹಳ್ಳಿಗಳ ಮಟ್ಟದಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದ ವರು ಮನೆ ಮನೆಗೆ ಹೋಗಿ ಸಂಶಯಾಸ್ಪದ ಕ್ಷಯ ರೋಗಿಗಳನ್ನು ಪತ್ತೆ ಮಾಡಿ ಅವರ ಕಫ ಪರೀಕ್ಷೆಗಾಗಿ ಆಒಅ ಗಳಿಗೆ ಕಳಿಸಲಾಗುತ್ತಿದೆ. ಒಟ್ಟು ಮುಂಡರಗಿ ತಾಲೂಕಿನಲ್ಲಿ 64, ಊರ ಖಞ ಇದ್ದು ಒಟ್ಟು 32 ಖಿಜಚಿಟ ಮಾಡಿ 64 ಟೀಮ್ ಸಿಬ್ಬಂದಿಗಳಿದ್ದು 3 ಮಂದಿ ಮೇಲ್ವಿಚಾರಕರು ಇದ್ದು ಮನೆ ಮನೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ.
ಡಾ. ಸುಬಾಷಚಂದ್ರ ರವರು ಮಾತನಾಡಿ ಎರಡು ವಾರಕ್ಕಿಂತ ಸತತ ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು ಈ ಎಲ್ಲಾ ಲಕ್ಷಣಗಳು ಕ್ಷಯ ರೋಗದ ಲಕ್ಷಣವಾಗಿದ್ದು ಈ ರೋಗವು ಮೈಕೋಬ್ಯಾಕ್ಟೀರಿಯಾ ಟ್ಯೂಬರಕ್ಯೂಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಇದು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿಂದ ಈ ರೋಗಗಳು ಗಾಳಿಯ ಮೂಲಕ ಅರೋಗ್ಯವಂತ ವ್ಯಕ್ತಿಯ ಶ್ವಾಸಕೋಶಕ್ಕೆ ಸೇರಿ ಸೋಂಕು ಉಂಟಾಗುತ್ತದೆ. ಅದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಹರಡುತ್ತವೆ. ಆದ್ದರಿಂದ ಉಗುಳಬೇಡಿ. ಕ್ಷಯ ರೋಗದ ಚಿಕಿತ್ಸೆ ರಾಜ್ಯದ ಎಲ್ಲಾ ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಕ್ಷಯರೋಗದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಸಂಪೂರ್ಣ ಉಚಿತ, ನಿಯಮಿತವಾಗಿ ಮತ್ತು ನಿಗದಿತ ಅವಧಿಯವರೆಗೆ ಚಿಕಿತ್ಸೆ ಪಡೆದರೆ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಕೀತರ್ಿ ಹಾಸ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಸಜ್ಜನರ, ಹಿರಿಯ ಚಿಕಿತ್ಸಾ ಮೇಲ್ಚಿಅರಕರು ಪ್ರವೀಣ ರಡ್ಡಿ, ಬಿದರಳ್ಳಿ ಹಿರಿಯ ಆರೋಗ್ಯ ಸಹಾಯಕರಾದ ಎಸ್.ಐ. ಪರಪ್ಪನವರ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕತರ್ೆಯರು ಭಾಗವಹಿಸಿದ್ದರು.