ಭಾರತವು ಸೌಹಾರ್ದತೆಗೆ ಹೆಸರುವಾಸಿಯಾದ ದೇಶ : ಮನಗೂಳಿ ಸ್ವಾಮೀಜಿ
India is a country known for its harmony: Managooli Swamiji
ವಿಜಯಪುರ 06 : ಪ್ರಸ್ತುತ ದಿನಮಾನಗಳಲ್ಲಿ ಸೌಹಾರ್ದತೆಯನ್ನು ಪ್ರತಿಯೊಬ್ಬರು ಮೆರೆಯಬೇಕಾಗಿದೆ. ಜಾತಿ ಜಾತಿಗಳ ಮಧ್ಯೆ ಬಹಳಷ್ಟು ಸಮಸ್ಯೆಗಳು ಇವೆ. ಸಮಾಜವು ಜಾತಿ ಎಂಬ ವಿಷದಿಂದ ಬಹಳಷ್ಟು ಕಲುಷಿತಗೊಂಡಿವೆ. ಎಲ್ಲ ಕಲುಷಿತಗಳು ಹೋಗಲಾಡಿಸಲು ಸರ್ವಧರ್ಮದ ಇಫ್ತಿಯಾರ ಕೂಟ ಹಮ್ಮಿಕೊಳ್ಳಲಾಗಿದ್ದು ಶ್ಲಾಘನೀಯ ಎಂದು ವಿರಕ್ತಮಠ ಮನಗೂಳಿ ವೀರೀತಿಶಾನಂದ ಸ್ವಾಮೀಜಿಗಳು ನುಡಿದರು.
ಅವರು ನಗರದ ಚಾಂದನಿ ಪಂಕ್ಷನ್ ಹಾಲ್‌ನಲ್ಲಿ ಸುವಿಧಾ ಸಾಮಾಜಿಕ ಸೇವಾ ಸಂಸ್ಥೆವತಿಯಿಂದ ಹಮ್ಮಿಕೊಂಡ ಸರ್ವಧರ್ಮ ಇಫ್ತಾರಕೂಟದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಭಾರತವು ಸೌಹಾರ್ದತೆಗೆ ಹೆಸರುವಾಸಿಯಾದ ದೇಶವಾಗಿದೆ. ಇಲ್ಲಿ ಎಲ್ಲ ಬಾಂಧವರು ಪ್ರೀತಿ ಸೌಹಾರ್ದತೆಯಿಂದ ಬಾಳುತ್ತಾರೆ.
ಈ ಸಂದರ್ಭದಲ್ಲಿ ಅಹಿಂದ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ರಂಜಾನ ತಿಂಗಳು ಉಪವಾಸ ಎಂದರೆ ಅನ್ನ ನೀರು ಬಿಡುವುದಷ್ಟೇ ಅಲ್ಲ. ಅರಿಷ್ಯಡ್ ವರ್ಗಗಳಾದ ಕಾಮ, ಕ್ರೋದ, ಮೋಹ, ಮಧ, ಮತ್ಸರವನ್ನು ಉಪವಾಸ ಕೊಡುವುದೇ ರಂಜಾನ ಹಬ್ಬದ ವಿಶೇಷವಾಗಿದೆ. ಶ್ರೀಮಂತರು ಬಡವರ ಬಗ್ಗೆ ಕಾಳಜಿ ಹೊಂದಿ ಶ್ರೀಮಂತರು ಬಡವರಿಗೆ ದಾನಮಾಡುವ ಮೂಲಕ ಮಾನವೀಯತೆಯನ್ನು ಮೆರಯಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿ ಬಿರಾದಾರ, ಜಾತಿ ಜಾತಿಗಳ ನಡುವೆ ಕೋಮು - ಸೌಹಾರ್ದತೆಯನ್ನು ಕದಡಿಸುವ ಕಾರ್ಯ ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ. ಅಂತವುಗಳಿಗೆ ಇಂತಹ ಸರ್ವ ಧರ್ಮದ ಬಾಂಧವರೊಂದಿಗೆ ಇಫ್ತಿಯಾರ ಕೂಟ ಹಮ್ಮಿಕೊಂಡಿದ್ದು ಅಭಿನಂದನೀಯ ಕಾರ್ಯ ಎಂದರು. ಎಲ್ಲ ಧರ್ಮಗಳ ಸಾರ ಒಂದೇ ಇರುತ್ತದೆ. ದೇವನೊಬ್ಬ ನಾಮಗಳು ಹಲವಾರು ಇರುತ್ತವೆ. ನಾವು ಎಲ್ಲ ಜಾತಿ ಬೇದ ಬಾವ ಮರೆತು ಪರಸ್ಪರ ಬಾಂಧವ್ಯದಿಂದ ಸಮಾಜದಲ್ಲಿ ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಮಹ್ಮದ ರಫೀಕ ಟಪಾಲ, ಸೈಯ್ಯದಗಯಾಸ ಪಾಶ್ಯಾ ಜಾಗೀರದಾರ, ಆಝಾದ ಪಟೇಲ, ಡಾ.ಜಾವೀದ ಜಮಾದಾರ, ಎಂ.ಸಿ.ಮುಲ್ಲಾ, ಮಹಾದೇವ ರಾವಜಿ, ಅಬ್ದುಲ್‌ನಬಿ ಜಮಾದಾರ, ಎಸ್.ಎ.ಶೇಖ, ಎಸ್.ಎ.ಜಮಾದಾರ, ಚಿದಾನಂದ ನಿಂಬಾಳ, ಡಾ. ಅಶೋಕ ಜಾಧವ, ಮೋಸಿನ ಗೋಲೇವಾಲೆ, ಎಸ್.ಎಸ್.ಖಾದ್ರಿಇನಾಂದಾರ, ಶ್ರೀನಿವಾಸ, ಶಬ್ಬೀರ ಜಾಗೀರದಾರ, ಬಬ್ಲು ಪೀರಜಾದೆ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಐ.ಸಿ.ಪಠಾಣ, ಶಫೀಕ ಜಾಗೀರದಾರ, ದಾದಾಪೀರ ಮುಜಾವರ, ಸಾಧಿಕ ಜಾನ್ವೇಕರ, ಸಂತೋಷ ಮುಧೋಳ, ನಶೀಮ ರೋಜಿಂದಾರ, ಆಸೀಫಪೀರವಾಲೆ, ಇಲಿಯಾಶ ಸಿದ್ದಿಕಿ, ಪಿದಾ ಕಲಾದಗಿ, ಬಸವರಾಜ ಬಿ.ಕೆ, ಲತಿಫ ಕಲಾದಗಿ, ಹಸನ ಕಲಾದಗಿ, ಲಿಯಾಕತ ಕಲದಾಗಿ, ಹಾಸೀಂ ಕಲದಾಗಿ, ಸಂತೋಷ ಬಾಲಗಾಂವಿ, ಆಜಾಂ ಶೇಖ, ಅಸೀಂ ಕಲಾದಗಿ, ಆರೀಬ ಕಲದಾಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಫಯಾಜ ಕಲಾದಗಿ ಸ್ವಾಗತಿಸಿದರು. ಸುರೇಶ ಬಿಜಾಪುರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 