ಇಂದಿನ ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆಯಿದೆ: ರೊಡ್ಡಣ್ಣವರ

ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಬಳ್ಳಾರಿ, ಮಾಜಿ ಅದ್ಯಕ್ಷ ರಾಜು ಹುಲಮನಿ, ಸ.ಮಾ.ಗಂಡು ಮಕ್ಕಳ ಶಾಲಾ ಎಸ್ಡಿಎಂಸಿ ಅದ್ಯಕ್ಷ ಮಂ

 ಲೋಕದರ್ಶನ ವರದಿ

ಶಿಗ್ಗಾವಿ : ಇಂದಿನ ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಶಾಲಾ ಸಂಸತ್ತ ಚುನಾವಣೆ ವಿದ್ಯಾಥರ್ಿಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸಿ ಚುನಾವಣೆ ಬಗ್ಗೆ ಪರಿಪೂರ್ಣ ಅರಿವು ಮೂಡಲಿದೆ ಎಂದು ಬಂಕಾಪುರ ಕೀತರ್ಿ ಶಾಲಾ ಶಿಕ್ಷಕ ಆರ್.ಎಚ್.ರೊಡ್ಡಣ್ಣವರ ಹೇಳಿದರು.

      ಬಂಕಾಪುರ ಪಟ್ಟಣದ ಸ.ಮಾ.ಕ.ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಲಾ ಸಂಸತ್ತ ಚುನಾವಣೆ ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅವರು ನಾವು ಒಳ್ಳೆಯ ಆಡಳಿತ ನಿರಿಕ್ಷೀಸುವದಾದರೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಮತ ಚಲಾಯಿಸಬೇಕು. ನಾವು ಮತಹಾಕಿ ಆರಿಸಿ ಕಳುಹಿಸಿದ ವ್ಯಕ್ತಿಗಳ ಗುಂಪೇ ಸರಕಾರ ಎಂದು ವಿದ್ಯಾಥರ್ಿಗಳಿಗೆ ತಿಳಿಸಿ ಹೇಳಿದರು.

     ಬರಿ ಓದು ಬರಹದಿಂದ ಒಳ್ಳೆಯ ಪ್ರಜೆಯಾಗಿ ಸಮಾಜದಲ್ಲಿ ಬದುಕಲಾರ. ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಸಂಸ್ಕಾರ ವ್ಯವಹಾರಿಕ ಜ್ಞಾನ ನೀಡುವದು ಅವಶ್ಯವಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಸಂಸ್ಕೃತಿ ಸಂಸ್ಕಾರ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲಿದೆ ಎಂದು ಹೇಳಿದರು.

     ಯುವ ಮುಖಂಡ ಮಂಜುನಾಥ ಈರಪ್ಪನವರ ಮಾತನಾಡಿದರು. ಚುನಾವಣೆ 10 ಸ್ಥಾನಗಳಿಗೆ 1) ನೀಲಮ್ಮ ಕೆಂಡದಮಠ, (ಗುಲಾಭಿ ಹೂ) 2) ಚೈತ್ರಾ ಈರಪ್ಪನವರ, ( ಪೆನ್ನು) 3) ರಂಜಿತಾ ಹಿಪ್ಪರಗಿ, (ಪುಸ್ತಕ),ಅಶ್ವೀನಿ ಪ್ಯಾಟಿ, (ಬಲ್ಬ್) 5) ವಿಜಯಲಕ್ಷ್ಮೀ ಮಾವೂರ, (ಟೀಪಾಯಿ) 6) ಬಸಮ್ಮ ಹರಕುಣಿ, (ಚೇರ) 7) ಕವನಾ ಹುಯಿಲ್ಗೋಳ, (ಎತ್ತು) 8) ಐಶ್ವರ್ಯ ಗುರುಸಿದ್ದಪ್ಪನವರ, (ಗೀಳಿ) 9) ಧಿವ್ಯಾ ಜಾಡರ, (ಆನೆ) 10) ಜಯಶ್ರೀ ಆಲದಕಟ್ಟಿ, (ಆಕಳು) 11) ಚೈತ್ರಾ ಬಳ್ಳಾರಿ, ( ಟೆಂಗಿನಗೀಡ) 12) ಸೌಭಾಗ್ಯ ಮುಳಗುಂದ, (ಆಲದಮರ) 13) ಹೇಮಾ ಮುಳಗುಂದ, (ಚೆಂಡು) 14) ನಿವೇದಿತಾ ಕಟಗಿ, ( ಸಿರೇಂಜ್) 15) ಗೌರಮ್ಮ ಗಟಡಳ್ಳಿ (ನವಿಲು) ಚಿಹ್ನೆ ಆಯ್ಕೆ ಮಾಡಿಕೊಂಡು ಕಣದಲ್ಲಿ ಉಳಿದಿದ್ದರು. ವಿದ್ಯಾಥರ್ಿಗಳು ಸರದಿ ಸಾಲಿನಲ್ಲಿ ನಿಂತು ಗುರುತಿನ ಚೀಟಿ ನೀಡಿ ಬೆರಳಿಗೆ ಶಾಹಿ ಹಾಕಿಸಿಕೊಳ್ಳುವ ಮೂಲಕ ಗೌಪ್ಯ ಮತದಾನ ಮಾಡಿದರು. ಒಟ್ಟು 130 ಮತಗಳಲ್ಲಿ ನೂರಕ್ಕೇ ನೂರು ಮತಗಳು ಚಲಾವಣೆ ಗೊಂಡವು. ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕ ಶ್ರೀಕಾಂತ ಬಡಿಗೇರ ಕಾರ್ಯನಿರ್ವಹಿಸಿದರು.