ಶಿಂದಿಕುರಬೇಟ: ಸಡಗರದ ಚಾಂಗದೇವ ಜಾತ್ರೆ
Shindi Kurabeta: A bustling Changadeva fair
ಬೆಳಗಾವಿ 11 : ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಯಮನೂರ್ಪ (ಚಾಂಗದೇವ) ದೇವರ ಜಾತ್ರೆ ಮಾರ್ಚ್ 7 ಹಾಗೂ 8ರಂದು ಎರಡು ದಿನಗಳ ಕಾಲ ಸಡಗರದಿಂದ ಜರುಗಿತು.
ಮಾರ್ಚ್ 7ರಂದು ಗಂಧಾಭಿಷೇಕ ಉತ್ಸವ ಜರುಗಿತು. ಈ ನಿಮಿತ್ತ ಮುತ್ತೈದೆಯರ ಕುಂಭ, ಆರತಿ ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆಗೆ ಚೇತನ ಹಿರೇಮಠ ಸ್ವಾಮಿಗಳು ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆಯೊಂದಿಗೆ ಮುಕ್ತಾಯಗೊಂಡಿತು.
ಸಂಜೆ ಬೆಳಗಾವಿಯ ಶ್ರೀ ಚಾಂಗದೇವ ಸಂಗೀತ ಮಂಡಳಿಯವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಭೀಮನಗೌಡ ಪಾಟೀಲ ಹಾರ್ಮೋನಿಯಂ ನುಡಿಸಿದರು. ಬಸವರಾಜ ಮಠದ, ಅಡವಯ್ಯ ಮಠದ ತಬಲಾ ಸಾಥ್ ನೀಡಿದರು. ಸಾನಿಧ್ಯ ವಹಿಸಿದ್ಧ ಹುಕ್ಕೇರಿ ಕ್ಯಾರಗುಡ್ಡದ ಶ್ರೀ ಅಭಿನವ ಮಂಜುನಾಥ ಸ್ವಾಮಿಗಳು ಆಶಿರ್ವಚನ ನೀಡಿದರು. ಭೀಮನಗೌಡ ಪಾಟೀಲ ಅವರು ಚಾಂಗದೇವರ ಕುರಿತು ಉಪನ್ಯಾಸ ನೀಡಿದರು ಶ್ರೀಗಳನ್ನು ಸತ್ಕರಿಸಲಾಯಿತು.
ಬಸವರಾಜ ಕಮ್ಮಾರ, ಖುಷಿ ಢವಳಿ, ಮಹಾಂತೇಶ ಅರವಳ್ಳಿ, ಮಡಿವಾಳಪ್ಪ ಇವರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ, ಯಮನಪ್ಪ ಹೊನಕುಪ್ಪಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ , ಮಹಾಂತೇಶ ಹಿರೇಮಠ, ರಾಜಕುಮಾರ ಮ್ಯಗೋಟಿ, ಭಾರತಿ ಗುಮತಿ, ನಾರಾಯಣ ಕದಂ, ಮಹೇಶ ಕಾಳ್ಯಾಗೋಳ, ವಿಠ್ಠಲ ವಿಜಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ಮಹಾಪ್ರಸಾದ ಜರುಗಿತು.
ಮಾರ್ಚ್ 8ರಂದು ಜಾತ್ರೆಯ ಮುಖ್ಯ ಜಾತ್ರೆ ಜರುಗಿತು, ಭಕ್ತರು ನೈವೇದ್ಯ ಅರ್ಿಸಿದರು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಿಕ್ಷಕಿ ವನಿತಾ ಚಿದಾನಂದ ಸರ್ವಿ ಶಾಲಾ ಮಕ್ಕಳ ಕಾರ್ಯಕ್ರಮ ನಡೆಸಿಕೊಟ್ಟರು.
ಜಾತ್ರಾ ಕಾರ್ಯಕ್ರಮದಲ್ಲಿ ತುಕಾರಾಮ ಖಟಾವಕರ, ಚಾಂದ್ ಫಣಿಬಂದ್, ಪವನ ಖಟಾವಕರ, ಸಂತೋಷ ತುಮಕೂರು, ಆಕಾಶ ಖಟಾವಕರ, ಸದಾಶಿವ ಹಣಮಂತಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅನೇಕರನ್ನು ಸತ್ಕರಿಸಿ ಗೌರವಿಸಲಾಯಿತು. ಗೋಪಾಲ ಖಟಾವಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 