ಹುಬ್ಬಳ್ಳಿ 10: ರಾಜ್ಯದ ಎಲ್ಲ ರೈತರ 34 ಸಾವಿರ ಕೋಟಿ ಸಾಲಮನ್ನಾ ಮಾಡುವ ಐತಿಹಾಸಿಕ ನಿಧರ್ಾರವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ಇದು ಇಡೀ ರಾಜ್ಯದ ರೈತ ಕುಲಕ್ಕೆ ಅನ್ವಯವಾಗಲಿದೆ. ಇದರಲ್ಲಿ ಯಾವುದೇ ತಾರತಮ್ಯ ಪ್ರಶ್ನೆಯೇ ಇಲ್ಲ ಎಂದು ನವಲಗುಂದ ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ರಾಜ್ಯದ ಬಜೆಟ್ನಲ್ಲಿ ಹೈದ್ರಾಬಾದ್ ಕನರ್ಾಟಕ, ಉತ್ತರ ಕನರ್ಾಟಕ ಭಾಗಕ್ಕೆ ಕೂಡ ಸಾಕಷ್ಟು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ ಹಾಗೂ ರಾಜ್ಯದ ರೈತರ ಸಾಲಮನ್ನಾ ವಿಷಯದಲ್ಲಿ ಅಖಂಡ ಕನರ್ಾಟಕದ ಲಕ್ಷಾಂತರ ರೈತರಿದ್ದಾರೆ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದರು.
ರೈತರ ಸಾಲಮನ್ನಾದಿಂದ ಉತ್ತರ ಕನರ್ಾಟಕ ಹಾಗೂ ಹೈದ್ರಾಬಾದ ಕನರ್ಾಟಕದ ಭಾಗದ ರೈತರಿಗೆ ಹೆಚ್ಚಿನ ಲಾಭವಾಗಿದೆ. ದಕ್ಷಿಣ ಕನರ್ಾಟಕದಲ್ಲಿ ರೈತರಿಗೆ ಜಮೀನು ಕಡಿಮೆಯಿರುವುದರಿಂದ ಅವರು ಅಷ್ಟಾಗಿ ಬೆಳೆ ಸಾಲದ ಮೇಲೆ ಅವಲಂಬಿಸಿಲ್ಲ. ಹೀಗಾಗಿ ನಮ್ಮ ಭಾಗದ ರೈತರೇ ಹೆಚ್ಚಿನ ಸಾಲಗಾರರಾಗಿದ್ದರು. ಅವರ ಸಂಕಷ್ಟ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕುಮಾರಸ್ವಾಮಿ ಅವರು, ರಾಜ್ಯದ 3500 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಣ್ಣಾರೆ ಕಂಡು ಅವರ ನೆರವಿಗೆ ಧಾವಿಸುವ ಮತ್ತು ರೈತರ ಆತ್ಮಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಇಂತಹ ದೃಢ ನಿಧರ್ಾರ ಪ್ರಕಟಿಸಿದ್ದಾರೆ ಎಂದರು.
ಪ್ರಮುಖವಾಗಿ ಉತ್ತರ ಕನರ್ಾಟಕದ ಜಲ್ವಂತ ಸಮಸ್ಯೆಯಾದ ಮಹದಾಯಿ ನದಿ ವಿವಾದದ ನ್ಯಾಯಾಧೀಕರಣದ ತೀಪರ್ು ಅಗಸ್ಟ್ನಲ್ಲಿ ಬರುವ ನಿರೀಕ್ಷೆಯಿದ್ದು, ರಾಜ್ಯ ತನ್ನ ಪಾಲಿನ ನೀರಿನ ಹಂಚಿಕೆಯನ್ನು ಪಡೆಯುವ ವಿಶ್ವಾಸವಿದೆ. ನ್ಯಾಯಾಧೀಕರಣದ ತೀಪರ್ಿನ ಅನ್ವಯ ಕಾಮಗಾರಿಗಳನ್ನು ಮುಗಿಸಲು ಮುಂದಾಲೋಚನೆ ಮಾಡಿ ಸಕರ್ಾರ ಕ್ರಮಕೈಗೊಳ್ಳುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ.
ಅದೇ ರೀತಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪುರ್ನವಸತಿ ಮತ್ತು ಪುನರ್ ನಿಮರ್ಾಣ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆಗೆ ಅಗತ್ಯ ಕ್ರಮ, ಬೆಳಗಾವಿ ಜಿಲ್ಲೆಯ 10 ಸಾವಿರ ಹೆಕ್ಟೇರ್ ಪ್ರದೇಶದ ನೀರಾವರಿ ಸೌಲಭ್ಯಕ್ಕಾಗಿ ಕೃಷ್ಣಾ ನದಿಯಿಂದ 100 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಪ್ರಾಯೋಗಿಕ ಜಾರಿಗೆ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ. ಆ ಭಾಗದಿಂದ ಕೋಲಾರ, ಚಿತ್ರದುರ್ಗ ಜಿಲ್ಲೆಗಳಿದ್ದರೆ, ಹೈದ್ರಾಬಾದ ಕನರ್ಾಟಕದ ಕೊಪ್ಪಳ ಜಿಲ್ಲೆ ಹಾಗೂ ಉತ್ತರ ಕನರ್ಾಟಕದ ಗದಗ ಜಿಲ್ಲೆಯನ್ನು ಆಯ್ದುಕೊಳ್ಳಲಾಗಿದೆ. ಇದರಿಂದ ಮೊದಲ ಹಂತದಲ್ಲಿ ತಲಾ 5000 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೆಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಒದಗಿಸಿದ್ದಾರೆ.
ಶೂನ್ಯ ಬಂಡವಾಳ ಸಹಜ ಕೃಷಿಗೆ 50 ಕೋಟಿ ಅನುದಾನ, ರಾಜ್ಯದ ರೈತ ಉತ್ಪಾದಕ ಸಂಸ್ಥೆ ನೀತಿ ಜಾರಿಗೆ, ರಾಜ್ಯದ ಸಣ್ಣ ಸಣ್ಣ ರೈತರಿಗೆ ಎಣ್ಣೆಕಾಳುಗಳ ಉತ್ಪನ್ನ ಮಾರುಕಟ್ಟೆ ಒದಗಿಸಲು 5 ಕೋಟಿ, ಬೆಳೆಗಳ ದೀರ್ಘಕಾಲ ದಾಸ್ತಾನು ಮಾಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ 3 ಕೋಟಿ ಅನುದಾನ ನೀಡಲಾಗಿದೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಾಡರ್ಿಯಾಲಜಿ, ಆಂಕಾಲಜಿಗೆ ಟ್ರಾಮಾ ಘಟಕ ಸ್ಥಾಪನೆ, ಬೆಳಗಾವಿ, ಕಲಬುರಗಿ ನಗರದಲ್ಲಿ ಹೃದ್ರೋಗ ಹಾಗೂ ಕ್ಯಾನ್ಸರ್ ಮತ್ತು ಇತರೆ ರೋಗಗಳಿಗೆ ಸಂಬಂಧಿಸಿದ ಸೇವೆ ಒದಗಿಸಲು ಸುಪರ್ ಸ್ಪೆಷಾಲಿಟಿ ಆಸ್ಪತ್ರೆ, ಗದಗ, ಕೊಪ್ಪಳ ವೈದ್ಯಕೀಯ ಕಾಲೇಜಿಗೆ 450 ಹಾಸಿಗೆ ಸಾಮಥ್ಯದ ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು 200 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ಹಂಪಿ, ವಿಜಯಪುರ ಪ್ರವಾಸಿ ಮಾರ್ಗದಶರ್ಿಗಳಾಗಿ ಕೆಲಸ ಮಾಡಲು ಯುವಕ-ಯುವತಿಯರಿಗೆ ತರಬೇತಿ, ಹೈದ್ರಾಬಾದ್ ಕನರ್ಾಟಕದ ಕಲಬುರಗಿಯಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ, ಬ್ಯಾಂಕಿಂಗ್ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ನೆರವು ಘೋಷಿಸಿದ್ದಾರೆ.
ಕಲಬುರಗಿ ಜಿಲ್ಲೆಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ, ಅಲ್ಲಿಯೇ ಬಿಡಿಭಾಗಗಳ ಉತ್ಪನ್ನ ಮಾಡುವುದು. ಬಳ್ಳಾರಿಯಲ್ಲಿ ವಸ್ತ್ರ ಉದ್ಯಮಕ್ಕೆ ಇನ್ನಷ್ಟು ಒತ್ತು, ಕೃಷಿ ಯಂತ್ರ ತಯಾರಿಸಲು ಮುಂದೆ ಬರುವ ಕಂಪನಿಗಳಿಗೆ 2000 ಕೋಟಿ ಬಂಡವಾಳ ಹೂಡಲು ನಿಧರ್ಾರ ಪ್ರಕಟಿಸಿದ್ದಾರೆ.
ಉತ್ತರ ಕನರ್ಾಟಕ ಭಾಗದ ಜನರಿಗೆ ವಸತಿ ಯೋಜನೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇಂತಹ ಅತ್ಯುತ್ತಮ ಹಾಗೂ ಜನಪ್ರಿಯ ಮತ್ತು ಜನಪರ ಹಾಗೂ ರೈತರ ಜೀವನಾಡಿ ಬಜೆಟ್ ಅನ್ನು ಸಹಿಸದೆ ರಾಜಕೀಯ ಉದ್ದೇಶಗಳಿಗೆ ಬಿಜೆಪಿ ಟೀಕಿಸುತ್ತಿರುವುದು ಸರಿಯಲ್ಲ. ಅವರಿಗೆ ರೈತ ಪರ ಕಾಳಜಿಯಿದ್ದರೆ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ ಮಹದಾಯಿ ಸಮಸ್ಯೆಯನ್ನು ನ್ಯಾಯಾಧೀಕರಣದ ಹೊರಗಡೆಯೇ ಬಗೆಹರಿಸಿ ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದಶರ್ಿಸಲಿ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಬಿಜೆಪಿಯು ರೈತರ ಸಾಲಮನ್ನಾ ಮಾಡಿದ ಕೀತರ್ಿಯಿಂದ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಅಸಮಾಧಾನದಿಂದ ಈ ರೀತಿ ಹೇಳಿಕೆ ನೀಡುತ್ತಿರುವದು ಸರಿಯಲ್ಲ. ಉತ್ತರ ಕನರ್ಾಟಕಕ್ಕೆ ಬಿಜೆಪಿ ಕೊಡುಗೆ ಏನಿದೆ? ಕುಮಾರಸ್ವಾಮಿ ಅವರು 2006-07 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲಕ ಹಾಗೂ ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯ, ಧಾರವಾಡ ಹಾಗೂ ಗುಲ್ಬಗರ್ಾದಲ್ಲಿ ಹೈಕೋರ್ಟ ಪೀಠ ಕಟ್ಟಡಕ್ಕೆ ಅನುದಾನ ನೀಡಿದರು, ಹೆಚ್.ಡಿ. ದೇವೆಗೌಡರು ಪ್ರಧಾಮಂತ್ರಿಯಾಗಿದ್ಧಾಗ ಆಲಮಟ್ಟಿ ಆಣೆಕಟ್ಟನ್ನು ಎತ್ತರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕೇಂದ್ರ ಸಕರ್ಾರದಿಂದ ಎ.ಐ.ಬಿ.ಪಿ. ಅನುದಾನ ನೀಡುವ ಮೂಲಕ ರಾಜ್ಯದ ನೀರಾವರಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ನೀಡಿದ ಕೀತರ್ಿ ಜೆ.ಡಿ.ಎಸ್.ಗೆ ಸಲ್ಲುತ್ತದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿದ್ದನ್ನು ಪಕ್ಷಾತೀತವಾಗಿ ಸ್ವಾಗತಿಸುವುದು ಬಿಟ್ಟು ಈ ಸುಳ್ಳು ತಂತ್ರಗಾರಿಕೆ ಜನರ ಮುಂದೆ ನಡೆಯುವುದಿಲ್ಲ. ಇದನ್ನು ಜೆಡಿಎಸ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ನವಲಗುಂದ ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ತಿಳಿಸಿದರು.