ಮ್ಯಾಂಚೆಸ್ಟರ್ 02: ಟೀಂ ಇಂಡಿಯಾ-ಇಂಗ್ಲೆಂಡ್ ತಂಡಗಳ ನಡುವೆ ನಾಳೆಯಿಂದ ಮೂರು ಟಿ-20 ಕ್ರಿಕೆಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನಾದಿನವಾದ ಇಂದು ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಇಯಾನ್ ಮಾರ್ಗನ್ ಸುದ್ದಿಗೋಷ್ಠಿ ನಡೆಸಿದರು.
ನಾಳೆಯಿಂದ ನಮ್ಮ ತಂಡದ ಆಟಗಾರರು ದೊಡ್ಡ ಸ್ಪಧರ್ೆಗೆ ಒಳಗಾಗುತ್ತಿದ್ದು, ಈ ಹಿಂದೆ ನಮ್ಮ ಆಟಗಾರರು ಐಪಿಎಲ್ನಲ್ಲಿ ಆಡಿರುವ ಕಾರಣ ಅದು ಖಂಡಿತವಾಗಿ ನಮ್ಮ ಪ್ರಯೋಜನಕ್ಕೆ ಬರಲಿದೆ ಎಂದ ಅವರು, ಉತ್ತಮ ಪ್ರದರ್ಶನದ ಭರವಸೆ ವ್ಯಕ್ತಪಡಿಸಿದ್ದಾರೆ.
ನಾಳೆ ಮ್ಯಾಂಚೆಸ್ಟರ್ನಲ್ಲಿ ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದ್ದು, ಆತ್ಮವಿಶ್ವಾಸದೊಂದಿಗೆ ತಂಡಗಳು ಮೈದಾನಕ್ಕಿಳಿಯಲಿವೆ.