ಮಕ್ಕಳಿಂದ ಶೌಚಾಲಯ ಸ್ವಚ್ಛತೆ

ಸರ್ಕಾರ್ ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿನ ಶಿಕ್ಷಕ ಬಳಗವು ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸುತ್ತಿರುವುದು.

ಲೋಕದರ್ಶನವರದಿ

ರಾಣಿಬೆನ್ನೂರ 12:  ಮಕ್ಕಳಿಂದ ಯಾವುದೇ ನಿಯಮ ಬಾಹಿರ ಕೆಲಸ ಕಾರ್ಯಗಳನ್ನು ಶಾಲೆಗಳಲ್ಲಿ ಮಾಡಿಸಬಾರದು ಎನ್ನುವ ನಿಯಮ ಗಾಳಿಗೆ ತೂರಿ ಅಮಾನವೀಯ ಘಟನೆಗೆ ಮುಂದಾಗಿರುವ ಪ್ರಕರಣವು ತಾಲೂಕಿನ ಹುಲ್ಲತ್ತಿ ಗ್ರಾಮದ ಸರ್ಕಾರ್ ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. 

ಶಾಲೆಯಲ್ಲಿ ಅಲ್ಲಿನ ಶಿಕ್ಷಕ ಬಳಗವು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಮಕ್ಕಳಿಗೆ ಆದೇಶಿಸಿದ್ದು, ಶಿಕ್ಷಕರ ಆದೇಶದಂತೆ ಸೋಮವಾರ ಮುಂಜಾನೆ ಶಾಲಾ ವೇಳೆಯಲ್ಲಿ ನಡೆದಿರುವುದು ಪ್ರತ್ಯಕ್ಷ ಕಂಡ ಗ್ರಾಮಸ್ಥರು ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.  

ತಮ್ಮ ಮಕ್ಕಳು ಶಾಲೆಯಲ್ಲಿ ಸ್ವಚ್ಛಗೊಳಿಸುವಲ್ಲಿ ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಶಾಲೆಗೆ ಧಾವಿಸಿದ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೊಗಿದ್ದಾರೆ ಎಂದು ಹೇಳಲಾಗಿದೆ. 

        ಗ್ರಾಮದ ಯುವ ಹೋರಾಟಗಾರ ಜಗದೀಶ ಕೆರೋಡಿ ಅವರು ಶಾಲೆಯಲ್ಲಿ ನಡೆದಿರುವ ಘಟನೆ ಕುರಿತಂತೆ ಜಿಲ್ಲಾ ಡಿಡಿಪಿಐ ಅವರಿಗೆ ದೂರವಾಣಿ ಮೂಲಕ ಸಂಪಕರ್ಿಸಿದ್ದು, ಕ್ರಮ ಕೈಗೊಳ್ಳಬೇಕಾಗದ ಉಪನಿದರ್ೇಶಕರು ಹಾರಿಕೆಯ ಉತ್ತರವನ್ನು ನೀಡುವುದಾದರೆ, ಇನ್ನು ಕೆಳಗಿನವರು ಎಷ್ಟರಮಟ್ಟಿಗೆ ನಿಯಮಗಳನ್ನು ಪರಿಪಾಲಿಸಬಹುದು ಎನ್ನುವುದು ನೋವಿನ ಸಂಗತಿಯಾಗಿದೆ ಎಂದು ಮಾಧ್ಯಮಕ್ಕೆ ವಿವರಿಸಿದ ಜಗದೀಶ ಅವರು ಡಿಡಿಪಿಐ ಅವರ ಹೇಳಿಕೆಯ ವರ್ತನೆಯನ್ನು ಖಂಡಿಸಿದ್ದಾರೆ. 

ಕೂಡಲೇ ಶಾಲಾ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರಾದ ಹನುಮಂತಪ್ಪ ಕುಂಚೂರ, ಶರಣಪ್ಪ ಕೆರೋಡಿ, ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಕೊನಪ್ಪನವರ, ರಾಜು ಓಲೇಕಾರ, ಯಲ್ಲಪ್ಪ ಸವಣೂರ, ರಮೇಶ ಗುಂಡೇನಹಳ್ಳಿ ಸೇರಿದಂತೆ ಗ್ರಾಮದ ಮತ್ತಿತರ ಮುಖಂಡರು ಆಗ್ರಹಿಸಿದ್ದಾರೆ.