ತಾಳಿಕೋಟೆ: ಬಿ.ಸಾಲವಾಡಗಿ ಜಿಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಪ್ರಜಾಪ್ರಭುತ್ವ ಬಲಿಷ್ಠತೆಗೆ ಮೋದಿ ಬೆಂಬಲಿಸಿ: ಬಿಜೆಪಿ ಅಭ್ಯರ್ಥಿ ಜಿಗಜಿಣಗಿ

ಲೋಕದರ್ಶನ ವರದಿ

ತಾಳಿಕೋಟೆ 09: ಲೋಟಿಕೋರ ಯುಪಿಎ ಸರ್ಕಾರದಿಂದ ದೇಶದಲ್ಲಿ ಅಸ್ಥಿತ್ವ ಕಳೆದುಕೊಂಡಿದ್ದ ಪ್ರಜಾಪ್ರಭುತ್ವವೆಂಬುದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಮರುಕಳಿಸಿದೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠತೆಗೊಳಿಸಲು ಮತ್ತೋಮ್ಮೆ ಮೋದಿ ಪ್ರಧಾನಿ ಮಾಡುವದು ಕಾರ್ಯಕರ್ತರ ಕೈಯಲ್ಲಿದೆ ಎಂದು ಕೇಂದ್ರ ಸಚಿವ ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ  ರಮೇಶ ಜಿಗಜಿಣಗಿ ಅವರು ನುಡಿದರು.

ತಾಲೂಕಿನ ತುಂಬಗಿ ಗ್ರಾಮದಲ್ಲಿ ಬ.ಸಾಲವಾಡಗಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು 60 ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೇಸ್ನವರು ಭೂಮಿಯಿಂದ ಆಕಾಶದೆತ್ತರವರೆಗೂ ಇರುವ ಪ್ರತಿಯೋಜನೆಗಳಲ್ಲಿಯೂ ಲೋಟಿಯನ್ನು ಮಾಡುತ್ತಾ ಸಾಗಿದ್ದರ ಫಲವಾಗಿ ದೇಶದ ಆರ್ಥಿಕತೆ ಎಂಬುದು ಕುಸಿದು ಹೋಗಿತ್ತು ಶ್ರೀಮಂತರಿಂದ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಹಣ, ಬಡವರ ಹಣ ಎಲ್ಲ ಹಂತದಲ್ಲಿಯೂ ಪೋಲು ಮಾಡುತ್ತಾ  ಲೋಟಿ ಮಾಡಿ ದೇಶದ ಭದ್ರತೆಗಿಂತ ತಮ್ಮ ಭದ್ರತೆಯನ್ನು ನೋಡಿಕೊಳ್ಳುತ್ತಾ ಸಾಗಿದ್ದ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೇಸ್  ಸರ್ಕಾರ  ಮತ್ತೇ ಹೊಸ ವರಸೆಯನ್ನು ಸೂರು ಹಚ್ಚಿಕೊಂಡಿದ್ದಾರೆ ರಾಹುಲ್ ಗಾಂದಿಯವರು ಮೊನ್ನೆ ಹೇಳಿದ್ದಾರೆ ಗರೀಬಿ ಹಟಾವೋ ದೇಶದಲ್ಲಿ ಕಾಂಗ್ರೇಸ್ ಸರ್ಕಾರ  ಅಧಿಕಾರಕ್ಕೆ ಬಂದರೆ ಪ್ರತಿಬಡವರ ಕುಟುಂಭಕ್ಕೆ 72 ಸಾವಿರ ರೂ.ಗಳನ್ನು ಪ್ರತಿವರ್ಷ ನೀಡುತ್ತೇವೆ ಎನ್ನುತ್ತಿದ್ದಾರೆ ಕೈಲಾಗದ ಗಂಡ ಕೈಲಾಸ ಕಂಡ ಎಂಬ ಗಾಧೆಯಂತೆ ಪ್ರತಿ ಕುಟುಂಭಕ್ಕೆ 72 ಸಾವಿರ ರೂ. ನೀಡಿದರೆ ವರ್ಷಕ್ಕೆ 16 ಲಕ್ಷ ಕೋಟಿ ರೂ. ಎಲ್ಲಿಂದ ತರುತ್ತಾರೆ ಇವರು 60 ವರ್ಷ ಕೊಳ್ಳೆ ಹೊಡೆದು ತೆಗೆದು ಇಟ್ಟ ಹಣದಿಂದ ಕೊಡುತ್ತಾರೋ ಎಂದು ಪ್ರಶ್ನೀಸಿದ ಜಿಗಜಿಣಗಿ ಅವರು ಕೇವಲ ಪೊಳ್ಳುಬರವಸೆಗಳೊಂದಿಗೆ ಗರಿಬೀ ಹಟಾವೋ ಎನ್ನುತ್ತಾ 60 ವರ್ಷಗಳಿಂದ ಬಡತನ ನಿವಾರಣೆಗಿಂತ ಬಡತನವನ್ನು ಹೆಚ್ಚಿಗೆ ಮಾಡಿಟ್ಟಿದ್ದಾರೆ ಎಂದು ಹೇಳಿದ ಅವರು ಪ್ರಧಾನಿ ನರೇಂದ್ರ ಮೋದಜಿ ಅವರು ಕೇವಲ 4.5 ವರ್ಷದಲ್ಲಿ ಸಾಕಷ್ಟು ಜನಪರ ಯೊಜನೆಗಳನ್ನು ಜಾರಿಗೆ ತರುವದರೊಂದಿಗೆ ದೇಶದ ರಕ್ಷಣೆಗೆ ಚೌಕಿದಾರರಾಗಿ ಕೆಲಸ ಮಾಡುತ್ತಿದ್ದಾರೆ ಸೂರ್ಯ ಚಂದ್ರ ಹುಟ್ಟು ಎಷ್ಟು ಸತ್ಯವೋ ಅಷ್ಟೇ ಮೋದಿ ಮತ್ತೋಮ್ಮೆ ಪ್ರಧಾನಿಯಾಗುವದು ಅಷ್ಠೇ ಸತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿದ್ಯವಹಿಸಿದ್ದರು. ಈ ಸಮಯದಲ್ಲಿ ಮುಖಂಡರುಗಳಾದ ಪ್ರಶಾಂತ ಹಾವರಗಿ, ಸಂಗನಗೌಡ ಹೆಗರಡ್ಡಿ, ತಾಪಂ ಸದಸ್ಯರುಗಳಾದ ಸೋಮನಗೌಡ ಹಾದಿಮನಿ, ರಾಜುಗೌಡ ಕೊಳೂರ, ಬಸನಗೌಡ ಬಿರಾದಾರ, ಭೀಮನಗೌಡ ತಂಗಡಗಿ, ಸಾಹೇಬಣ್ಣ ಆಲ್ಯಾಳ, ವಿಠ್ಠಲ ಘಾಯಕವಾಡ, ಮಹಾಂತೇಶ ಗುರಡ್ಡಿ, ಎಂ.ಎಂ.ಪಾಟೀಲ, ರಾಜುಗೌಡ ಗುಂಡಕನಾಳ, ಶಿವನಗೌಡ ಗೊಟಗುಣಕಿ, ಈಸುಗೌಡ ಲಕ್ಕುಂಡಿ, ಎಚ್.ಎಸ್.ಢವಳಗಿ, ಕಾಶಿರಾಯಗೌಡ ಬಿರಾದಾರ, ಬಾಬು ಶಿರಶ್ಯಾಳ, ಮೊದಲಾದವರು ಉಪಸ್ಥಿತರಿದ್ದರು. ಪ್ರಭಾಕರ ಗುಡಗುಂಟಿ ಸ್ವಾಗತಿಸಿದರು. ಶರಣು ಗೊಟಗುಣಕಿ ನಿರೂಪಿಸಿದರು. ಸುಭಾಸ ಗುಂಡಕನಾಳ ವಂದಿಸಿದರು.