ಮನುಕುಲದ ಸಂತತಿ ಉಳಿಯುವಲ್ಲಿ ಪಕ್ಷಿಗಳ ಪಾತ್ರ ಬಹು ಮುಖ್ಯ

ಧಾರವಾಡ21: ಮಾನವನ ಸಮೃದ್ಧಿ ಬದುಕಿಗೆ ಪಕ್ಷಿ ಸಂಕುಲನ ಬಹುದೊಡ್ಡ ಕೊಡುಗೆಯಾಗಿದೆ.ಪಕ್ಷಿ ಸಮೂಹಗಳು,ಕಾಡು ಬೆಳೆಯಲು ಮತ್ತು ಪರಿಸರ ಸಮತೋಲನವಾಗಿಡಲು ಹಾಗೆಯೇ ರೈತನ ಮಿತ್ರನಾಗಿ ಪಕ್ಷಿ ಸಂಕುಲ ಇದೆ. ಅವುಗಳ ಜೀವನ ಮನುಷ್ಯ ಜೀವನಕ್ಕೆ ಪೂರಕವಾಗಿದೆ. ಕಾರಣ ಎಲ್ಲ ತರಹದ ಪಕ್ಷಿಗಳನ್ನು ಉಳಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಗುಬ್ಬಚ್ಚಿ ಗೂಡು ಶಾಲೆಯಲ್ಲಿ ನಡೆದ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಕ್ಷಿ ಪರಿಸರ ಪ್ರೇಮಿ ಪ್ರಕಾಶ ಗೌಡರ ಹೇಳಿದರು.

            ಗುಬ್ಬಚ್ಚಿ ಗೂಡು ಶಾಲಾ ಮಕ್ಕಳೊಂದಿಗೆ ಪಕ್ಷಿ ಸಂತತಿ ಸಂಕುಲದ ಮಹತ್ವ ಅವುಗಳ ಉಳಿವಿಗಾಗಿ ಮಕ್ಕಳು ಏನು ಮಾಡಬೇಕಾಗಿದೆ ಎಂಬುದನ್ನು ಮಕ್ಕಳ ಮನ ಮುಟ್ಟುವಂತೆ ಗೌಡರ ಮಾತನಾಡಿದರು. 

  ಮಾಳಾಪೂರದಲ್ಲಿಯ ಶಾಲೆಯ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ನೀರು ಮತ್ತು ಕಾಳುಗಳನ್ನು ತುಂಬಿದ ಮಣ್ಣಿನ ಮಡಿಕೆಗಳನ್ನು ನೀಡಿ ಪಕ್ಷಿಗಳನ್ನು ಉಳಿಸಲು ಅರಿವಿನ ಜಾತಾಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ಜಾತಾದೊಂದಿಗೆ ಮನೆ ಮನೆಗೆ ತೆರಳಿ ಮನೆಯ ಹಿರಿಯ ಸದಸ್ಯರ ಕೈಗೆ ಮಣ್ಣಿನ ಮಡಿಕೆಗಳನ್ನು ಕೊಟ್ಟು  ಗುಬ್ಬಚ್ಚಿಗಳನ್ನು  ರಕ್ಷಿಸಲು ಕೇಳಿಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆ ಶಂಕರ ಹಲಗತ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ ಸುಭಾಂಜಿ, ರಂಗಭೂಮಿ ಕಲಾವಿದೆ ಕುಮಾರಿ ಗಂಗಾ ಕಾಳೆಣ್ಣವರ ಹಾಗೂ ಡಾ. ಎ.ಎಲ.್ದೇಸಾಯಿ  ಭಾಗವಹಿಸಿದ್ದರು. ಲಕ್ಷ್ಮಿ ಜಾಧವ ನಿರೂಪಿಸಿದರು. ಭಾರತಿ ಸಾಬಳೆ ವಂದಿಸಿದರು. ಜಾತಾವನ್ನು ಶುಭಾ ದೊಡ್ಡಮನಿ, ಪ್ರಗತಿ ಸಾಬಳೆ, ರೇಷ್ಮಾ ಮುಲ್ಲಾನವರ, ಗೀತಾ ಬೈಲವಾಡ, ವಿಜಯಲಕ್ಷ್ಮಿ ಗೊಡಚಿಮಠ, ಜ್ಯೋತಿ ಜಾಧವ, ಪ್ರೇಮಾ ಮಾಳೆ, ವಿದ್ಯಾ ಡೇಂಬ್ರೆ ಸಂಘಟಿಸಿದರು.