ಸ್ಯಾಂಟಿಯಾಗೊ, ಜೂನ್ 4, ಚಿಲಿಯಲ್ಲಿ ಗುರುವಾರ ಕರೋನ ಪ್ರಕರಣಗಳ ಸಂಖ್ಯೆ 113,628 ಕ್ಕೆ ಏರಿಕೆಯಾಗಿದ್ದು ಈವರೆಗೆ 1,275 ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 4,942 ಹೊಸ ಪ್ರಕರಣಗಳು ಮತ್ತು ಇನ್ನೂ 87 ಸಾವುಗಳು ವರದಿಯಾಗಿದೆ ಇದು ದೇಶದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದಾಖಲೆಯ ಸಾವಿನ ಪ್ರಮಾಣವಾಗಿದೆ. ಹೊಸದಾಗಿ ದೃಪಡಪಡಿಸಿದ ಪ್ರಕರಣಗಳಲ್ಲಿ, 4,537 ರೋಗ ಲಕ್ಷಣಗಳನ್ನು ಪ್ರಸ್ತುತ ಪಡಿಸಲಾಗಿದ್ದರೂ ಮತ್ತು 405 ಪ್ರಕರಣಗಳಲ್ಲಿ ಯಾವುದೇ ಲಕ್ಷಣ ಗೋಚರಿಸಿಲ್ಲ ಆದರೂ , 1,218 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ಗಳಲ್ಲಿ ಇಡಲಾಗಿದೆ. ಚಿಲಿಯ ಆರೋಗ್ಯ ಸಚಿವ ಜೈಮ್ ಮನಾಲಿಚ್, ಸ್ಯಾಂಟಿಯಾಗೊದ ರಾಜಧಾನಿ ಮತ್ತು ಕನಿಷ್ಠ ಆರು ನೆರೆಯ ಪಟ್ಟಣಗಳಲ್ಲಿ, ಇದೆ 12 ರವರೆಗೆ ಕ್ವಾರಂಟೈನ್ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಮೇ ತಿಂಗಳಲ್ಲೆ ವರದಿಯಾಗಿದೆ.