ರಾಜ್ಯ ಮಟ್ಟದ ಸಾಂಸ್ಕೃತಿಕ ಜಾನಪದ ಕಲಾವೈಭವ

ಧಾರವಾಡ 06:  ಮರೆಯಾಗುತ್ತಿರುವ ಕಲೆಗಳ ಪ್ರಕಾರಗಳನ್ನು ಸಂಘ-ಸಂಸ್ಥೆಗಳು ಯುವಕರಲ್ಲಿ ಅದರ ಅಭಿರುಚಿ ಬೆಳಸಿ, ಗ್ರಾಮೀಣ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ. ಅಲ್ಲದೆ ಧಾರವಾಡದ ಸೂಗಡನ್ನು ರಾಜ್ಯ-ರಾಷ್ಟ್ರಮಟ್ಟ-ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಕೀತರ್ಿ ಇಲ್ಲಿನ ಕಲಾವಿದರಿಗೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಮ್ ಮೈಗೂರ ಹೇಳಿದರು.

ಅವರು ಸಾಂಸ್ಕೃತಿ ಲೋಕದ 23ನೇ ವರ್ಷದ ವಾಷರ್ಿಕೋತ್ಸವದ ಅಂಗವಾಗಿ ಕನರ್ಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಸಾಂಸ್ಕೃತಿಕ ಲೋಕ ಆಟರ್್ ಮತ್ತು ಕಲ್ಚರಲ್ ಅಕಾಡೆಮಿ(ರಿ) ಧಾರವಾಡ ಹಾಗೂ ಸಾಯಿ ಚರಣ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ-ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಸಹಕಾರದೊಂದಿಗೆ ಹಮ್ಮಿಕೊಂಡ ರಾಜ್ಯ ಮಟ್ಟದ ಸಾಂಸ್ಕೃತಿಕ  ಕಲಾವೈಭವ -2018 ರ  ಕಾರ್ಯಕ್ರಮ"ಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಇಂದು ಗ್ರಾಮೀಣ ಬಾಗದ ಕಲಾ ಪ್ರಕಾರಗಳು ಆಧುನಿಕ ತಂತ್ರಜ್ಞಾನದಲ್ಲಿ ಮರೆಯಾಗುತ್ತಿವೆ ಎಂಬ ಬೇಸರದ ಸಂಗತಿ ಒಂದೆಡೆಯಾದರೆ ಹೊಸ ಮಾಧ್ಯಮದ ಎಲ್ಲಾ ಪ್ರಕಾರಗಳ ಮೂಲ ಬೇರು ಆಯಾಭಾಗದ ಮೂಲ ಸೂಗಡನ್ನೇ ಆಳವಡಿಸಿಕೊಳ್ಳುತ್ತಿರುತ್ತಾರೆ. ಹಾಗಾಗದೆ ಅದರ ಮೂಲದ ಹಿನ್ನೆಲೆಯಾಗಿಯೇ ಉಳಿದರೆ ಆ ಕಲಾ ಪ್ರಕಾರಕ್ಕೆ ಇನ್ನೂ ಹೆಚ್ಚು ಮಹತ್ವ ಬರುತ್ತದೆ ಎಂದು ಹೇಳಿದರು.

ಅಂರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ವೈಜಿನಾಥ ಬಿರಾದಾರ ಸಾಂಸ್ಕೃತಿಕ ಲೋಕದಿಂದ ನೀಡುವ ಕಲಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಕಲಾವಿದರಿಗೆ ಗೌರವಿಸುವ ಕೆಲಸ ದೊಡದು.ಇದು ಕಲಾವಿದರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.ಹಾಗಾಗಿಯೇ ನಾನು ಬೆಳದದ್ದು ಎಂದು ಹೇಳುತ್ತಾ ಹಾಸ್ಯದ ಮೂಲಕ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿ ಸಕರ್ಾರದಿಂದ ಹಲವಾರು ರೀತಿಯಲ್ಲಿ ಕಲಾವಿದರಿಗೆ ಸಹಾಯ ಮಾಡಿತ್ತಿದೆ. ಅದನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಹೇಳಿದರು.

ರಂಗನಟಿ ಮತ್ತು ಚಲನಚಿತ್ರ ತಾರೆಯಾದ ಸುಮತಿಶ್ರೀ ನವಲೆಹಿರೇಮಠ ಮಾತನಾಡಿ ಸಂಗೀತ, ಜಾನಪದ ನೃತ್ಯ, ದೇಶಭಕ್ತಿ ನೃತ್ಯ, ಯೋಧರಿಗೆ, ರೈತರಿಗೆ, ಕಲಾವಿದರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಲೋಕವು ಸುಮಾರು 23 ವರ್ಷಗಳಿಂದ ರಾಜ್ಯಾಧ್ಯಂತ ತನ್ನ ಕಾರ್ಯವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅದರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ್ತ ಸಾಂಸ್ಕೃತಿಕ ಲೋಕದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕಿ ಮತ್ತು ಚಿಂತಕರಾದ ಡಾ. ಪ್ರಜ್ಙಾ ಮತ್ತಿಹಳ್ಳಿ ಮಾತನಾಡಿ ಯುವಕರು ಇಂದು ಬೆಳೆಯುತ್ತಿರುವ ರೀತಿ ನೋಡಿದರೆ ಸಮಾಜದ ಮುಂದಿನ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅದಕ್ಕಾಗಿ ಸಾಂಸ್ಕೃತಿಕ ಕಲೆಗಳಲ್ಲಿ ತೋಡಗಿಕೊಳ್ಳುವುದರಿಂದ ಮನಸ್ಸು ಮತ್ತು ಜೀವನದ ಅಭಿವೃದ್ದಿಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಕಿಮ್ಸ ವೈದ್ಯರಾದ ಡಾ.ಸಂಪತ್ತಸಿಂಗ್ ರಂಗವಾಲೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಾನಿಧ್ಯವನ್ನು ಪಭೋ ಜೋರವಿತಿ ಪಾಲಿವಿಜ್ಯಾಮುನಿಯೊ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ನವಲಗುಂದ ತಾಲೂಕ ರಕ್ಷಣಾ ವೇಧಿಕೆಯ ಅಧ್ಯಕ್ಷರಾದ ರುದ್ರೇಶ ಹಳವದ, ಶಿವಾನಂದ ಅಮರಶೆಟ್ಟಿ. ಸಿಡಿಕೇಟ್ ಸದಸ್ಯರಾದ ಪರಮೇಶ ಕಾಳೆ, ಸಂಸ್ಥೆಯ ನಿದರ್ೇಶಕರಾದ ಸೈಯದ ಎ ಎಮ್, ಪ್ರೇಮಾನಂದ ಶಿಂಧೆ. ಶ್ರೀಶೈಲ ಚಿಕನಳ್ಳಿ ಉಪಸ್ಥಿತರಿದ್ದರು.

ಕಲಾವೈಭವ-2018ರ ಸಂಚಾಲಕರಾದ ಮಾತಾಂಡಪ್ಪ ಎಮ್. ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಶೋಕ ನಿಂಗೋಲಿ ವಂದಿಸಿದರು. ಭವ್ಯಾ ನಾಯಕ ಮತ್ತು ಮಾತರ್ಾಂಡಪ್ಪ ಕತ್ತಿ ನೀರೂಪಿಸಿದರು.

ನಂತರ ವಿವಿಧ ತಂಡಗಳಿಂದ ಮತ್ತು ಸಾಂಸ್ಕೃತಿಕ ಲೋಕದ ವಿದ್ಯಾಥರ್ಿಗಳಿಂದ ಸಂಗೀತ, ಜಾನಪದ ನೃತ್ಯ,ದೇಶಭಕ್ತಿ ನೃತ್ಯ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಯೋಧರಿಗೆ, ರೈತರಿಗೆ, ಕಲಾವಿದರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ

ವೈಜಿನಾಥ ಬಿರಾದರ (ಅಂತರಾಷ್ಟೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಹಾಸ್ಯ ಕಲಾವಿದರು), ರಸೂಲ್ಸಾಭ  (ಭರತ್ ನ್ಯಾಟ್ ಕಲಾವಿದರು) ಚಾಂದ ಚುರಮರಿ (ಕಲಾವಿದರು ಮತ್ತು ಸಮಾಜ ಸೇವಕರು) ಅಕ್ಬರಸಾಭ್ ನದಾಫ್ (ರೈತರು) ಈಶ್ವರ ಕನಾಜಿ (ರೈತರು), ಎಮ್ ಆರ್ ಪಾಲ್ತಿ (ಮಾಜಿ ಸೈನಿಕರು), ನಿಂಗಪ್ಪ ಕುಡ್ಲಗಿ (ರೈತರು), ಎಸ್ಎಸ್ ರೋಣದ (ಕಲಾವಿದರು), ಜಗದೀಶ ಹಿರೇಮಠ (ಮಾಜಿ ಸೈನಿಕರು) ಇವರಿಗೆ ಕಲಾರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತ್ತು