ಸಿಂದಗಿ: ಗುರುವಿನ ಸೇವೆ ಸಿಗುವುದು ಅತೀ ದುರ್ಲಬ: ಪ್ರಭುಸಾರಂಗದೇವ

ಲೋಕದರ್ಶನ ವರದಿ

ಸಿಂದಗಿ 18: ಗುರುವಿನ ಸೇವೆ ಮತ್ತು ಸಮಾಜದ ಸೇವೆ ಸಿಗುವುದು ಅತೀ ದುರ್ಲಬ ಸೇವಾ ಮನೋಭಾವನೆ ಜೀವನದ ಒಂದು ಕ್ರಮ. ನನ್ನ ಗುರುಗಳು ನನಗೆ ಅವಕಾಶಕೊಟ್ಟಿದ್ದರಿಂದ ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. 

ಪಟ್ಟಣದ ಓಂ ಶಾಂತಿ ಆವರಣದ ಜ್ಞಾನಜ್ಯೋತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸಿಂದಗಿ ಹಮ್ಮಿಕೊಂಡ ಗೌರಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸೇವಾಮನೋಭಾವನೆಯಿಂದ ಯೋಗಿ ಆಗುತ್ತಾನೆ ಅದನ್ನು ಬೆಳೆಸಿಕೊಳ್ಳಲು ಸಾಮಾನ್ಯವಲ್ಲ, ಸೇವೆ ಮಾಡುವುದು ಫಲಾಪೇಕ್ಷೆವಿಲ್ಲದೇ ಸೇವೆ ಮಾಡಿರಿ ನಿಮಗೆ ಅನುಭವವಾಗುತ್ತದೆ ಮತ್ತು ಯೋಗದ ಬಲದಿಂದ ಶರೀರದ ಮೇಲಿರುವ ನೋವುಗಳು ಹೋಗುತ್ತವೆ. ಯೋಗ ಮಾಡಬೇಕಾದರೆ ನಿದ್ರೆಯನ್ನು ತ್ಯಾಗ ಮಾಡಬೇಕು ಇಂತಹ ಬ್ರಹ್ಮಕುಮಾರಿ ಅಂತಹ ಸತ್ಸಂಗಗಳಲ್ಲಿ ಭಾಗವಹಿಸಿ ತಮ್ಮ ಜೀವನದ ಕ್ರಮವನ್ನು ಬದಲಿಸಿಕೊಳ್ಳಬೇಕು ಎಂದರು. 

ದ್ವಿತೀಯ ದರ್ಜೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ವೈ.ಬಸ್ಸಾಪೂರ ಮಾತನಾಡಿ, ನ್ಯಾಯಾಧೀಶರ ವ್ಯವಸ್ಥೆ ಮುಳ್ಳಿನ ಮೇಲೆ ನಡೆದಂತೆ ನಮ್ಮ ಕರ್ತವ್ಯದಲ್ಲಿ ನ್ಯಾಯಯುತವಾಗಿ ತೀರ್ಪು  ಕೊಡಲು ಆಧ್ಯಾತ್ಮಿಕ ಸ್ಪರ್ಶಬೇಕು. ದುರಾಸೆವಿರಬಾರದು ಸೇವಾಮನೋಭಾವನೆ ಬೆಳೆಸಿಕೊಂಡು ನ್ಯಾಯಯುತವಾದ ಜೀವನವನ್ನು ನಡೆಸಲು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಂತಹ ಸತ್ಸಂಗಗಳು ಮನುಷ್ಯನಿಗೆ ಅತೀ ಅವಶ್ಯವಾಗಿದೆ. ಪ್ರತಿಯೊಬ್ಬರು ಆ ನಿಟ್ಟಿನಲ್ಲಿ ಜ್ಞಾನ ಪ್ರಸಾರ ಹೆಚ್ಚಿಗೆ ಮಾಡಿಕೊಳ್ಳಬೇಕು ಎಂದರು. 

ಇದೇ ಸಂದರ್ಭದಲ್ಲಿ ಅತೀ ಕಿರಿಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರಿ ರೋಹಿಣಿ ಬಸ್ಸಾಪೂರ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಕ್ಕಾಗಿ ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಅವರಿಗೆ ಗೌರಾರ್ಪಣೆ ಸಲ್ಲಿಸಿದರು. ಬ್ರಹ್ಮಕುಮಾರಿ ರಾಜಯೋಗಿನಿ ಪವಿತ್ರಾಜೀ, ಪ್ರತಿಭಾಜೀ, ಲಕ್ಷ್ಮೀ ಬಸ್ಸಾಪೂರ, ಬಿ.ಎ.ಪಾಟೀಲ, ಡಾ. ಹಿರೇಗೌಡರ್, ಅಶೋಕ ಗಾಯಕವಾಡ, ಎಂ.ವೈ.ಪಾಟೀಲ, ಸಿ.ಎಸ್.ನಾಗೂರ, ಸೇರಿದಂತೆ ಇನ್ನಿತರರು ಇದ್ದರು.