ಲೋಕದರ್ಶನವರದಿ
ರಾಣೇಬೆನ್ನೂರು15: ನಗರದ ಮೇಡ್ಲೇರಿ ರಸ್ತೆಯ ರಿಸನಂ.579ರಲ್ಲಿ ನಗರಸಭೆಯ ಪರವಾನಿಗೆ ಇಲ್ಲದೆ ಅನಧಿಕೃತವಾಗಿ 21 ಮಳಿಗೆಗಳನ್ನು ನಿಮರ್ಾಣ ಮಾಡುತ್ತಿದ್ದರೂ ಸಹ ನಗರಸಭೆಯವರು ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಇರುವುದು ಸಂಶಯಕ್ಕೆ ಯಡೆಮಾಡಿಕೊಟ್ಟಿದ್ದು, ಈ ಬಗ್ಗೆ ಕಾನೂನಿನ ಮೊರೆ ಹೋಗುವುದಾಗಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹೇಳಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಸವರ್ೇ ನಂಬರ್ಗೆ ಸ್ಮಶಾನ ಜಾಗೆಯಲ್ಲಿ ಕಂಪೌಂಡ್ ಗೋಡೆ ಕೆಡವಿ ಹೊಸದಾಗಿ ಮಳಿಗೆಗಳನ್ನು ಕಟ್ಟಿರುವುದು ಕಾನೂನು ಬಾಹಿರವಾಗಿದೆ. ನಗರಸಭೆಯ ಪರವಾನಿಗೆ ಪಡೆಯದೆ ಈ ಮಳಿಗೆಗಳನ್ನು ಕಟ್ಟುತ್ತಿರುವಾಗಲೇ ಸಾರ್ವಜನಿಕರು ಆಕ್ಷೇಪ ಮಾಡಿದರೂ ಸಹ ನಗರಸಭೆಯವರು ಏನೂ ಕ್ರಮ ಕೈಗೊಂಡಿಲ್ಲ ಎಂದರು.
ನಾಗರೀಕರ ಆಕ್ಷೇಪದ ಹಿನ್ನಲೆಯಲ್ಲಿ ಕಟ್ಟಡ ಆರಂಭವಾದ ನಂತರ ಅದೇ ಜಾಗೆಗೆ ಎನ್ಎ ಮಾಡಿಸಲಾಗಿದೆ. ಈ ಕುರಿತು ನಗರಸಭೆಗೆ ಅನೇಕ ಭಾರಿ ವಾಸ್ತವ ಪರಸ್ಥಿತಿಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಅನಧಿಕೃತ ಮಳಿಗೆ ನಿಮರ್ಾಣದಲ್ಲಿ ಅಧಿಕಾರಿಗಳೂ ಸಹ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ಛಾಯಾಚಿತ್ರ ಹಾಗೂ ವಿಡಿಯೋಗಳೊಂದಿಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದಾಗಿ ಕಬ್ಬಾರ ಸ್ಪಷ್ಠಪಡಿಸಿದರು.
ನಗರದ ಬಹುತೇಕ ಕಡೆಗಳಲ್ಲಿ ನಗರಸಭೆಯ ಅನುಮತಿ ಪಡೆಯದೆ ಎಲ್ಲಿಬೇಕಂದರಲ್ಲಿ ಶಾಲಾ ಕಾಲೇಜುಗಳ ಬ್ಯಾನರ್, ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆಯೂ ಸಹ ಅವುಗಳನ್ನು ತೆರವುಗೊಳಿಸಲು ತಿಳಿಸಿದರೂ ಅಧಿಕಾರಿಗಳು ಮೌನ ತಾಳುತ್ತಿದ್ದಾರೆ ಎಂದರು.
ನಗರದ ಹೊರವಲಯದ ಹುಲಿಹಳ್ಳಿ ಕ್ರಾಸ್ ಬಳಿ ನಾಮದೇವ ಸೀಡ್ಸ್ ಹತ್ತಿರ ಸವರ್ೇ ನಂ.49 ರಲ್ಲಿ ನಗರಸಭೆಯ ಅನುಮತಿ ಇಲ್ಲದೆ ಉತ್ತರಪ್ರದೇಶದವರ ಮಾಲೀಕತ್ವದ ಶಾಲಾ ಕಟ್ಟಡವು ನಿಮರ್ಾಣವಾಗುತ್ತಿದ್ದು ಇದು ಶಾಲೆಯೋ ಅಥವಾ ಇನ್ಯಾವುದೋ ಕಟ್ಟಡವೆಂಬ ಸಂಶಯ ಉಂಟಾಗಿದೆ.
ಈ ಕುರಿತು ನಗರಸಭೆ ಮತ್ತು ಪೊಲೀಸರು ಈ ನಿಮರ್ಾಣ ಕಾಮಗಾರಿಯನ್ನು ತಡೆ ಹಿಡಿಯಬೇಕೆಂದರು.
ನಗರದಾದ್ಯಂತ ಇಂತಹ ಕಾನೂನು ಬಾಹಿರ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಸಹ ನಗರಸಬೆಯವರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಗರಸಭೆಯ ಈ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಆರ್.ಜಿ.ಗುಡ್ಡಪ್ಪ, ರಾಯಣ್ಣ ಮಾಕನೂರ, ನಾಗರಾಜ ಬಣಕಾರ, ಶಿವಕುಮಾರ ಕಮದೋಡ, ಬಿ.ಕೆ.ರಾಜನಹಳ್ಳಿ, ವಿಜಯಕುಮಾರ ಸೇರಿದಂತೆ ಮತ್ತಿತರರು ಇದ್ದರು